ವಿಜಯಪುರ: ಜಿಲ್ಲಾ ನ್ಯಾಯಾಲಯ ಸಂಕೀರ್ಣದ ವಕೀಲರ ಭವನದಲ್ಲಿ ವಕೀಲರ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾ ನ್ಯಾಯಾಂಗ ಇಲಾಖೆ, ಕಾನೂನು ಸೇವೆಗಳ ಪ್ರಾಧಿಕಾರ ವಿಜಯಪುರ, ಹಾಗೂ ಬಿ.ಎಲ್.ಡಿ.ಈ. ಆಸ್ಪತ್ರೆ, ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಶಂಕರ ಹೃದಯಾಲಯ ಸಂಯುಕ್ತಾಶ್ರಯದಲ್ಲಿ ರಕ್ತದಾನ ಮತ್ತು ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.
ಈ ಕಾರ್ಯಕ್ರಮವನ್ನು ಜಿಲ್ಲಾ ಒಂದನೇಯ ಹೆಚ್ಚುವರಿ ಸತ್ರ ನ್ಯಾಯಾಧೀಶ ಸತೀಶ ಎಲ್.ಪಿ ಉದ್ಘಾಟಿಸಿದರು.
ಹಿರಿಯ ನ್ಯಾಯವಾದಿಗಳು ಎಂ.ಜಿ.ಮಠಪತಿ ಅವರು ವಕೀಲರ ದಿನಾಚರಣೆ ಕುರಿತು ಮಾತನಾಡಿದರು.
ವಿಜಯಪುರ ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶ್ರೀ ಈರಣ್ಣ ಜಿ ಚಾಗಶೆಟ್ಟಿರವರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಆರೋಗ್ಯ ಅಧಿಕಾರಿ ಸುರೇಶ ಚವ್ಹಾಣ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎಸ್. ಎಲ್. ಲಕ್ಕಣ್ಣವರ, ಹೃದಯರೋಗ ತಜ್ಞ ಡಾ. ಶಂಕರಗೌಡ ಬಿ. ಪಾಟೀಲ(ಯಾಳಗಿ), ಡಾ. ಅಯ್ಯನಗೌಡ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.
ಈ ರಕ್ತದಾನ ಶಿಬಿರದಲ್ಲಿ ನ್ಯಾಯಾಧೀಶರು ಸೇರಿದಂತೆ 30ಕ್ಕೂ ಹೆಚ್ಚು ನ್ಯಾಯವಾದಿಗಳು ರಕ್ತದಾನ ಮಾಡಿದರು. ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸುಮಾರು 300ಕ್ಕೂ ಹೆಚ್ಚು ನ್ಯಾಯವಾದಿಗಳು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ಈ ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲಾ ಹಿರಿಯ ಮತ್ತು ಕಿರಿಯ ನ್ಯಾಯಾಲಯಗಳ ನ್ಯಾಯಾಧೀಶರು, ನ್ಯಾಯವಾದಿಗಳ ಸಂಘದ ಹಿರಿಯ ಹಾಗೂ ಕಿರಿಯ ನ್ಯಾಯವಾದಿಗಳು, ಮಹಿಳಾ ನ್ಯಾಯವಾದಿಗಳು ಹಾಗೂ ಸಂಘದ ಉಪಾಧ್ಯಕ್ಷ ಎಸ್. ಬಿ. ಜಾಗೀರದಾರ, ಗೌರವ ಕಾರ್ಯದರ್ಶಿ ಎ. ಎಚ್. ಜೈನಾಪೂರ, ಆಡಳಿತ ಮಂಡಳಿಯ ಯು. ಎಂ. ಆಲಗೂರ, ವಿ. ಎಸ್. ಪಾಟೀಲ, ಎಲ್. ಎಚ್. ಮುಜಾವರ, ಪಿ. ಎಂ. ಪೋಳ, ಎಚ್. ಎಂ. ದೊಡ್ಡಮನಿ, ಎಸ್. ಆರ್. ತಳೇವಾಡ, ವಿ. ಎಸ್. ರಾಠೋಡ, ಬಸಮ್ಮ ಎಂ. ಆಲಗೊಂಡ, ಕಾರ್ಯಕ್ರಮದ ಸಂಘಟಿಕ ಡಿ. ಎಸ್. ಪರಸನಳ್ಳಿ, ಎಸ್. ಎ. ನದಾಫ, ಎಸ್. ಎಸ್. ಹಂಜಗಿ ಮುಂತಾದವರು ಉಪಸ್ಥಿತರಿದ್ದರು.