ಎಂ ಎಲ್ ಸಿ ಫಂಡ್‍ನಿಂದ ಮೂರು ಆ್ಯಂಬುಲನ್ಸ್ ಹಸ್ತಾಂತರ: ಸಿದ್ದರಾಮಯ್ಯ ಕಾಲ ಸುವರ್ಣ ಅವಧಿಯದ್ದಾಗಿತ್ತು ಎಂದ ಸುನೀಲಗೌಡ ಪಾಟೀಲ

ವಿಜಯಪುರ: ಸಿದ್ದರಾಮಯ್ಯನವರ ಕಾಲದಲ್ಲಿ ರಾಜ್ಯದಲ್ಲಿ ಸುವರ್ಣ ಅವಧಿಯಾಗಿತ್ತು ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದ್ದಾರೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ನಡೆದ ಆ್ಯಂಬುಲನ್ಸ್ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲಿದ್ದು, ಅಭಿವೃದ್ಧಿ ಶೆಕೆ ಆರಂಭವಾಗಲಿದೆ ಎಂದು ಅವರು ತಿಳಿಸಿದರು.

ಮುದ್ದೇಬಿಹಾಳದಲ್ಲಿ ಆ್ಯಂಬುಲನ್ಸ್ ಹಸ್ತಾಂತರಿಸಿ ಸುನೀಲಗೌಡ ಪಾಟೀಲ ಮಾತನಾಡಿದರು

ಈ ದಿನ ದೇವರ ಹಿಪ್ಪರಗಿ ಮತ್ತು ಹೂವಿನ ಹಿಪ್ಪರಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ. 7.19 ಲಕ್ಷ ವೆಚ್ಚದಲ್ಲಿ ಖರೀದಿಸಲಾದ ಸುಸಜ್ಜಿತ ಆ್ಯಂಬುಲನ್ಸ್ ವಾಹನಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಅಷ್ಟೇ ಅಲ್ಲ, ಮುದ್ದೇಬಿಹಾಳ ತಾಲೂಕು ಆಸ್ಪತ್ರೆಗೂ ಆ್ಯಂಬುಲನ್ಸ್ ನೀಡಿದ್ದೇನೆ ಎಂದು ಅವರು ತಿಳಿಸಿದರು.

ರಾಜಸ್ಥಾನದ ಜೈಸಲ್ಮೇರ ನಂತರ ದೇಶದಲ್ಲಿ ಎರಡನೇಯ ಅತೀ ಹೆಚ್ಚು ಬರಪೀಡಿತ ಜಿಲ್ಲೆ ಎಂದು ಹಣೆಪಟ್ಟಿ ಹೊಂದಿದ್ದ ವಿಜಯಪುರವನ್ನು ನಮ್ಮ ಸಹೋದರ ಎಂ.ಬಿ.ಪಾಟೀಲರು ಜಲಸಂಪನ್ಮೂಲ ಸಚಿವರಾಗಿ ನೀರಾವರಿ ಯೋಜನೆಗಳನ್ನು ಜಾರಿ ಮಾಡುವ ಮೂಲಕ ಅಭಿವೃದ್ಧಿಗೆ ನಾಂದಿ ಹಾಡಿದ್ದಾರೆ. ಈಗ, ಬಸವನಾಡಿಗೆ ಅಂಟಿದ್ದ ಬರಪೀಡಿತ ಹಣೆಪಟ್ಟಿ ತೊಲಗಿದ್ದು, ಜಿಲ್ಲೆಯಲ್ಲಿ ರೈತರು ಕಬ್ಬು ಸೇರಿದಂತೆ ನೀರಾವರಿ ಆಧಾರಿತ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಮೂಲಕ ಆರ್ಥಿಕವಾಗಿ ಸದೃಢರಾಗುತ್ತಿದ್ದಾರೆ. ಆದರೆ, ಈಗೀನ ಸರಕಾರ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಅಭಿವೃದ್ಧಿ ಕಾರ್ಯಗಳು ನಿಂತು ಹೋಗಿವೆ ಎಂದು ಸುನೀಲಗೌಡ ಪಾಟೀಲ ಹೇಳಿದರು.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಾಸ್ಪತ್ರೆಗೆ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಖರೀದಿಸಲಾದ ರೂ.7.19 ಲಕ್ಷ ಮೌಲ್ಯದ ಹೊಸ ಆ್ಯಂಬುಲನ್ಸ್ ವಾಹನವನ್ನು ಹಸ್ತಾಂತರ ಮಾಡಿ ಮಾತನಾಡಿದೆ. ಈ ಸಂದರ್ಭದಲ್ಲಿ ಮಾಜಿ ಸಚಿವರ ಸಿ. ಎಸ್. ನಾಡಗೌಡ, ಮುಖಂಡರಾದ ಗುರು ತಾರನಾಳ, ಆನಂದ ದೊಡಮನಿ, ಪ್ರತಿಭಾ ಅಂಗಡಗೇರಿ, ಸಾಜೇಬಿ ಹುಣಸಗಿ, ರಾಯನಗೌಡ ತಾತರಡ್ಡಿ, ಡಾ. ಶೇಗುಣಸಿ, ಪಿಂಟು ಸಾಲಿಮನಿ, ಮೈಬೂಬ ಗೊಳಸಂಗಿ, ಶ್ರೀಕಾಂತ ಚಲವಾದಿ, ವೈ. ಎಚ್. ವಿಜಯಕರ, ಶೋಭಾ ಶಳ್ಳಗಿ, ಪ್ರೀತಿ ದೇಗಿನಾಳ, ಡಾ. ಪ್ರಭುಗೌಡ ಲಿಂಗದಳ್ಳಿ ಮುಂತಾದವರು ಉಪಸ್ಥಿತರಿದ್ದರು.

ದೇವರ ಹಿಪ್ಪರಗಿ ಕಾರ್ಯಕ್ರಮ

ಇದಕ್ಕೂ ಮೊದಲು ಸುನೀಲಗೌಡ ಪಾಟೀಲ ದೇವರ ಹಿಪ್ಪರಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೊಸ ಆ್ಯಂಬುಲನ್ಸ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಬಿ. ಎಸ್. ಪಾಟೀಲ ಯಾಳಗಿ, ಸುಭಾಷ ಛಾಯಾಗೋಳ, ಆನಂದ ದೊಡಮನಿ, ಸುಜಾತಾ ಕಳ್ಳಿಮನಿ, ಗೌರಮ್ಮ ಮುತ್ತತ್ತಿ, ಬಶೀರಸಾಬ ಬೇಪಾರಿ, ಕಾಶೀನಾಥ ಜಮಾದಾರ, ಕಾಶೀನಾಥ ಭಜಂತ್ರಿ, ಅಬ್ದುಲ್ ಚೌಧರಿ, ಉಮೇಶ ರೂಗಿ, ನಬಿಲಾಲ ಮಣೂರ, ರಾಜು ಛಾಯಾಗೋಳ, ಪ್ರಭುಗೌಡ ಲಿಂಗದಳ್ಳಿ, ಮುಲ್ಲಾ, ಡಾ. ನಂದು ಭೈರಿ, ಸರಿತಾ ನಾಯಕ, ಗುರು ಆಕಳವಾಡಿ, ಬಿ. ಎಸ್. ಡಿಗ್ಗಿ, ಎಸ್. ಬಿ. ಕಲ್ಲೂರ, ಎಸ್. ಎಂ. ಪಟ್ಟಣಶೆಟ್ಟಿ, ಶ್ರೀಧರ ವಡ್ಡರ, ಶರಣು ಬಿರಾದಾರ, ಸುಕನ್ಯಾ ಚಳ್ಳಗೇರಿ, ಗೀತಾ ಸಾತಿಹಾಳ ಮುಂತಾದವರು ಉಪಸ್ಥಿತರಿದ್ದರು.

ಹೂವಿನ ಹಿಪ್ಪರಗಿ ಕಾರ್ಯಕ್ರಮ

ಬಸವನ ಬಾಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಖರೀದಿಸಲಾದ ರೂ.7.19 ಲಕ್ಷ ಮೌಲ್ಯದ ಹೊಸ ಆ್ಯಂಬುಲನ್ಸ್ ವಾಹನವನ್ನು ಹಸ್ತಾಂತರ ಮಾಡಿ ಮಾತನಾಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಮುರುಗೇಶ ಗೋ. ತಾಳಿಕೋಟೆ, ಆನಂದ ದೊಡಮನಿ, ಬಾಳಾಸಾಹೇಬಗೌಡ ಪಾಟೀಲ, ರಮೀಜಾ ನದಾಫ್, ಸುಜಾತಾ ಕಳ್ಳಿಮನಿ, ಗೌರಮ್ಮ ಮುತ್ತತ್ತಿ, ಸುಭಾಷ ಛಾಯಾಗೋಳ, ಡಾ. ಪ್ರಭುಗೌಡ ಲಿಂಗದಳ್ಳಿ, ಸಂಗನಗೌಡ ಹರನಾಳ, ವೈದ್ಯರಾದ ಬಿ. ಎಸ್. ಸಂದಿಮನಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌