ವಿಜಯಪುರ: ಭಾರತ ರತ್ನ ಸಂವಿಧಾನ ಶಿಲ್ಪಿ, ಮಹಾಮಾನವತಾವಾದಿ, ಸಮಾನತೆಯ ಹರಿಕಾರ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ 66ನೇ ಮಹಾಪರಿನಿರ್ವಾಣ ದಿನವನ್ನು ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಚರಿಸಲಾಯಿತು.
ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಮುಖಂಡರು ಅಂಬೇಡ್ಕರ ಅವರ ಕೊಡುಗೆಯನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ಚೈತ್ಯಭೂಮಿ ಮುಂಬಯಿಯಲ್ಲಿ ಲಕ್ಷಾಂತರ ಜನ ಸೇರಿ ಮಹಾಪರಿನಿರ್ವಾಣ ದಿನ ಆಚರಿಸಿ ಗೌರವ ಸಲ್ಲಿಸಿದರು. ಅಂದಿನಿಂದ ಇಂದಿನರೆಗೂ ಈ ಪ್ರಕ್ರಿಯೆ ನಡೆಯುತ್ತ ಬಂದಿದೆ. ಇದು ಹೀಗೆಯೇ ಮುಂದುವರೆದಿದೆ. ಇದರ ಮಹತ್ವವನ್ನು ಇಂದಿನ ಪೀಳಿಗೆಗೆ ತಿಳಿಸಬೇಕಾಗಿದೆ. ಡಾ. ಅಂಬೇಡ್ಕರ್ ಭಾರತದ ಭಾಗ್ಯವಿಧಾತ, ವಿಶ್ವಜ್ಞಾನಿ, ಬಡವ, ಬಲ್ಲಿದವರ ಧ್ವನಿಯಾಗಿ ಶಕ್ತಿ ತುಂಬಿದ ಮಹಾಚೇತನ ಸಂವಿಧಾನದ ಮೂಲಕ ಭಾರತೀಯರಿಗೆ ಸಮಾನ ನ್ಯಾಯ ಕೊಡಿಸಿದ ಹರಿಕಾರ. ಮಹಿಳೆಯರಿಗೆ ಸ್ವಾತಂತ್ರ್ಯದ ಬದುಕು ಕಟ್ಟಿಕೊಟ್ಟ ಮಹಾನ ನಾಯಕ ಡಾ. ಅಂಬೇಡ್ಕರ್ ಅವರು ಭಾರತದ ಕೃಷಿ, ವಿದ್ಯುತ್, ನೀರಾವರಿ ಕ್ಷೇತ್ರಗಳಲ್ಲಿ ಹಾಗೂ ಅನೇಕ ಕ್ಷೇತ್ರಗಳಲ್ಲಿ ತನ್ನದೇ ಆದ ಕೊಡುಗೆ ನೀಡಿದ್ದು ಭಾರತ ದೇಶದಲ್ಲಿ ರಿಸರ್ವ ಬ್ಯಾಂಕ ಸ್ಥಾಪನೆ ಮಾಡಿ ಈ ದೇಶಕ್ಕೆ ಭದ್ರ ಬುನಾದಿ ಹಾಕಿ ಕೊಟ್ಟಿದ್ದಾರೆ. ಅವರ ಕೊಡುಗೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಾವೆಲ್ಲ ಅವರ ಹಾದಿಯಲ್ಲಿ ಸಾಗೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಹಮೀದ ಮುಶ್ರೀಫ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಚಾಂದಸಾಬ ಗಡಗಲಾವ, ಡಿ. ಎಲ್. ಚವ್ಹಾಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರರಾದ ಜಮೀರಅಹ್ಮದ ಬಕ್ಷಿ, ಡಿ. ಎಚ್. ಕಲಾಲ ಅವರು ಡಾ. ಅಂಬೇಡ್ಕರ್ ಅವರ ಕುರಿತು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಿಸಾನ ಘಟಕದ ಕಾರ್ಯದರ್ಶಿ ಸುಭಾಶ ತಳಕೇರಿ, ಜಲನಗರ ಬ್ಲಾಕ್ ಅಧ್ಯಕ್ಷೆ ಆರತಿ ಶಹಾಪೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಹೊನಮೊಡೆ, ಶಬ್ಬೀರ ಜಾಗೀರದಾರ, ಸುರೇಶ ಘೊಣಸಗಿ, ಅಂಗ ಘಟಕದ ಅಧ್ಯಕ್ಷ ಕೃಷ್ಣಾ ಕಮಟೆ, ಆನಂದ ಜಾಧವ, ನಿಂಗಪ್ಪ ಸಂಗಾಪೂರ, ಕಾರ್ಯದರ್ಶಿ ಚನಬಸಪ್ಪ ನಂದರಗಿ, ಹಾಜಿಲಾಲ ದಳವಾಯಿ, ಮಲ್ಲಿಕಾರ್ಜನ ಪರಸಣ್ಣವರ, ಎಚ್. ಎಸ್. ದಳವಾಯಿ, ಮುಖಂಡರಾದ ಮಾದೇವ ಜಾಧವ, ಸಂತೋಶ ಬಾಲಗಾಂವಿ, ವಿಜಯಕುಮಾರ ಕಾಳೆ, ಪ್ರದೀಪ ಸೂರ್ಯವಂಶಿ, ಎಂ. ಎ. ಬಕ್ಷಿ, ಅಷ್ಪಾಕ್ ಮನಗೂಳಿ, ಫೀರೋಜ ಶೇಖ, ಆಸ್ಮಾ ಕಾಲೇಬಾಗ, ಲಕ್ಷ್ಮಿ ಕ್ಷೀರಸಾಗರ, ಭಾರತಿ ಹೊಸಮನಿ, ವರ್ಷಾ ಭೋವಿ, ಪ್ರಭಾವತಿ ನಾಟೀಕಾರ, ಪರಶುರಾಮ ಪವಾರ, ಮುತ್ತಪ್ಪಾ ಭೋವಿ, ಮಹ್ಮದ ಮುಲ್ಲಾ, ತಾಜುದ್ದೀನ ಖಲಿಫಾ, ರಜಾಕಸಾಬ ಕಾಖಂಡಕಿ, ಮುಂತಾದವರು ಉಪಸ್ಥಿತರಿದ್ದರು.