ಸ್ಪೂರ್ತಿ ಫೌಂಡೇಶನ್ ವತಿಯಿಂದ ಸಾಧಕತಿಗೆ ಸನ್ಮಾನ- ಎಂ ಎಲ್ ಸಿ ಸುನೀಲಗೌಡ ಪಾಟೀಲ ಭಾಗಿ

ವಿಜಯಪುರ: ಸ್ಪೂರ್ತಿ ಫೌಂಡೇಶನ್ ವಿದ್ಯಾರ್ಥಿಗಳಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ. ಈ ಸಂಸ್ಥೆಯ ಸ್ವಂತ ಕಟ್ಟಡ ನಿರ್ಮಾಣಕ್ಕೆ ಶಾಸಕರ ಅನುದಾನದಿಂದ ರೂ. 20 ಲಕ್ಷ ಅನುದಾನ ನೀಡುವುದಾಗಿ ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಹೇಳಿದ್ದಾರೆ.

ವಿಜಯಪುರ ನಗರದ ಸ್ಪೂರ್ತಿ ಫೌಂಡೇಶನ್, ವಿಜಯಪುರ ಗ್ರಂಥಾಲಯ ವತಿಯಿಂದ ಗ್ರಂಥಾಲಯದಲ್ಲಿ ಓದಿ ಉತ್ತೀರ್ಣರಾಗಿ ನಾನಾ ಇಲಾಖೆಗಳ ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸನ್ಮಾನಿ ಸಮಾರಂಭದಲ್ಲಿ ಅವರು ಮಾತನಾಡಿದರು.

ಇಂದಿನ ದಿನಗಳಲ್ಲಿ ಬಡ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಪೌಂಡೇಶನ್ ನಿಸ್ವಾರ್ಥ ಸೇವೆ ಒದಗಿಸುತ್ತಿದೆ. ರಾಜಕಾರಣಿಗಳು ಮತಗಳಿಗಾಗಿ ತಮ್ಮ ಸೇವೆಯನ್ನು ಮಾಡುತ್ತಿರುತ್ತಾರೆ. ಆದರೆ, ಸ್ಪೂರ್ತಿ ಫೌಂಡೇಶನ್ ಸೇವೆ ನಿಜಕ್ಕೂ ಅಗಾಧವಾದದ್ದು. ಈ ಸಂಸ್ಥೆಯ ಕೆಲಸಗಳಿಗೆ ಪೂರಕವಾಗಿ ಗ್ರಂಥಾಲಯಕ್ಕೆ ಒಂದು ಸ್ವಂತ ಕಟ್ಟಡವನ್ನು ನಿರ್ಮಾಣ ಮಾಡಲು ಶಾಸಕರ ನಿಧಿಯಿಂದ ರೂ. 20 ಲಕ್ಷ ಹಣವನ್ನು ಒದಗಿಸುತ್ತೇನೆ ಎಂದು ಸುನೀಲಗೌಡ ಪಾಟೀಲ ಭರವಸೆ ನೀಡಿದರು.

ಸ್ಪೂರ್ತಿ ಫೌಂಡೇಶನ್ ವತಿಯಿಂದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು

ಮರ್ಚಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ರವೀಂದ್ರ ಬಿಜ್ಜರಗಿ ಮಾತನಾಡಿ, ಈ ಫೌಂಡೇಶನ್ ವಿದ್ಯಾರ್ಥಿಗಳ ಬಾಳಲ್ಲಿ ಬೆಳಕು ಚೆಲ್ಲುವ ಕಾರ್ಯವನ್ನು ಮಾಡುತ್ತಿದೆ. ವಿದ್ಯಾರ್ಥಿಗಳು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾಧ್ಯಕ್ಷ ವಿ. ಸಿ. ನಾಗಠಾಣವರು ಮಾತನಾಡಿ, ಶಿಕ್ಷಣದ ಜೊತೆ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಬೇಕು. ಸಮಾಜದ ಮೌಲ್ಯವನ್ನು ಕರಗತ ಮಾಡಿಕೊಂಡು ಸಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಸ್ಪರ್ಧಾರ್ಥಿಗಳು ಸ್ಪೂರ್ತಿ ಫೌಂಡೇಶನ್ ಗ್ರಂಥಾಲಯವು ನಮಗೆಲ್ಲರಿಗೂ ಉಚಿತವಾದ ಗ್ರಂಥಾಲಯ ಹಾಗೂ ಪುಸ್ತಕದ ವ್ಯವಸ್ಥೆಯನ್ನು ಒದಗಿಸಿದೆ. ಈ ಗ್ರಂಥಾಲಯವು ನಮಗೆ ನಮ್ಮ ಜೀವನವನ್ನು ರೂಪಿಸಿಕೊಳ್ಳಲಿಕ್ಕೆ ದಾರಿ ದೀಪವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸರಕಾರದ ನಾನಾ ಇಲಾಖೆಗಳಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಸನ್ಮಾನಿಸಲಾಯಿತು.

ಸ್ಪೂರ್ತಿ ಫೌಂಡೇಶನ ಚಟುವಟಿಕೆಗಳನ್ನು ಗಮನಿಸಿದ ಬೆಂಗಳೂರಿನ ಶ್ರೀ ಭಗವಾನದಾಸ ಮಹಾದೇವದಾಸ ಜೈನ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಸ್ಥೆ ಈ ಫೌಂಡೇಶನ್ ಗೆ ರೂ. 15 ಲಕ್ಷ ರೂ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ. ಈ ಹಣವನ್ನು ಗ್ರಂಥಾಲಯದ ಅಧ್ಯಕ್ಷ ಅರುಣ ಹುಂಡೇಕಾರ ಅವರು ಫೌಂಡೇಶನಗೆ ಒಂದು ಸ್ವಂತ ಕಟ್ಟಡ ನಿರ್ಮಾಣಕ್ಕೆ ಹಣವನ್ನು ವಿನಿಯೋಗಿಸಲಾಗುವುದು ಎಂದು ಹೇಳಿದರು.

ಸಮಾರೋಪ ಸಮಾರಂಭದಲ್ಲಿ ಸ್ಪೂರ್ತಿ ಫೌಂಡೇಶನ್ ಗ್ರಂಥಾಲಯದ ಕಾರ್ಯದರ್ಶಿ ಪದ್ಮಜಾ ಬಿದರಿವರು ಮಾತನಾಡಿದರು.

ಈ ಸಮಯದಲ್ಲಿ ಫೌಂಡೇಶನ್ ಸದಸ್ಯರ ವೀರೇಶ ಹಕ್ಕಾಪಕ್ಕಿ, ರಾಜು ಬಿರಾದಾರ, ಬಸವರಾಜ ಪಾಟೀಲ ಹಾಗೂ ಆಯ್ಕೆಯಾದ ಅಭ್ಯರ್ಥಿಗಳು ಮಲ್ಲಿನಾಥ ಭೈರವಾಡಗಿ, ಸಂಗಮೇಶ ಅವಟಿ, ಅಮೋಘಸಿದ್ಧ ಮಾಲಗರ, ಅವಿನಾಶ ಚಿಗರಿ, ಹಣಮಂತ ಜಾಲವಾದಿ, ಹೊನ್ನಪ್ಪ ಯಾದಗಿರಿ, ಪರಶುರಾಮ ಕೊಳ್ಳಪ್ಪನವರ, ಶಿವನಗೌಡ ಹಳ್ಳಿ ಮತ್ತು ಮಲ್ಲು ಗೋಠೆ ಉಪಸ್ಥಿತರಿದ್ದರು.

ಚಂದ್ರು ಹೊನಮಾನೆ ನಿರೂಪಿಸಿ‌‌‌‌‍‌ದರು. ಮಲ್ಲಿನಾಥ ಭೈರವಾಡಗಿರವರು ವಂದಿಸಿದರು.

Leave a Reply

ಹೊಸ ಪೋಸ್ಟ್‌