ವಿಜಯಪುರ: ಭಾರತ ಶ್ರೀಮಂತ ಸಂಸ್ಕೃತಿಯನ್ನು ಪೋಷಿಸುತ್ತಿದೆ. ಮಾತ್ರವಲ್ಲ, ಸರ್ವರ ಮೌಲ್ಯಗಳನ್ನು ಜಗತ್ತಿಗೆ ಪ್ರಸಾರ ಮಾಡುತ್ತಿದೆ. ಇಂಧ ಮೌಲ್ಯಾಧಾರಿತ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಲು ಇಂದಿನ ಯುವ ಜನಾಂಗ ಹಿಂದೇಟು ಹಾಕುತ್ತಿರುವುದು ವಿಷಾಧನೀಯ ಜಾವೀದ ಜಮಾದಾರ, ಎಂದು ಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನೆ ಕೇಂದ್ರದ ಸಭಾ ಭವನದಲ್ಲಿ ನಡೆದ ಜಿಲ್ಲಾ ಯುವ ಜನೋತ್ಸವ ಕಾರ್ಯಕ್ರಮಕ್ಕೆ ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತರ ಫೆಡರೇಶನ್ನಿನ ರಾಷ್ಟ್ರೀಯ ಅಧ್ಯಕ್ಷ ಹೇಳಿದರು.
ವಿಜಯಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಯವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬಿ ಎಲ್ ಡಿ ಇ ಸಂಸ್ಥೆಯ ಸಂಗನಬಸವ ಮಹಾಸ್ವಾಮೀಜಿ ಔಷಧ ಮತ್ತು ಸಂಶೋಧನೆ ಮಹಾವಿದ್ಯಾಲಯ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ, ನೆಹರು ಯುವ ಕೇಂದ್ರ, ಜಿಲ್ಲಾ ಎನ್ ಎಸ್ ಎಸ್ ಘಟಕಗಳ ಸಂಯುಕ್ತಾಶ್ರಯದಲ್ಲಿ ನಡೆದ 2022-23ನೇ ವರ್ಷದ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪಾಶ್ಚಾತ್ಯ ಸಂಸ್ಕೃತಿಯ ಅತೀಯಾದ ವ್ಯಾಮೋಹದಿಂದ ಯುವ ಜನತೆ ನಮ್ಮ ಸಂಸ್ಕೃತಿಯ ಬಗ್ಗೆ ಒಲವು ಕಳೆದುಕೊಳ್ಳುತ್ತಿದ್ದಾರೆ. ಪಾಶ್ಚಾತ್ಯ ಸಂಸ್ಕೃತಿಗಿಂತ ಹೆಚ್ಚು ಶ್ರೀಮತಂವಾಗಿರುವ ಭಾರತೀಯ ಸಂಸ್ಕೃತಿಯನ್ನು ಅನುಸರಿಸಬೇಕು. ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಳ್ಳಲು ಪ್ರತಿಯೊಬ್ಬರೂ ಪಣತೊಡಬೇಕು. ಜನಪದ ಕಲೆಗಳು ಮಾನವೀಯ ಸಂಬಂಧಗಳ ಸರಪಳಿಯಿದ್ದಂತೆ. ನಮ್ಮ ಪೂರ್ವಜರು ನೀಡಿರುವ ವಿಶಿಷ್ಠ ಕೊಡುಗೆಯನ್ನು ಯುವ ಜನತೆ ಕಾಪಾಡಿಕೊಂಡು ಮುಂದುವರೆಸಿಕೊಂಡು ಹೋಗಬೇಕು. ಈ ಮೂಲಕ ಭಾರತೀಯ ಸಂಸ್ಕೃತಿಯ ರಾಯಭಾರಿಯಾಗಿ ದೇಶದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿ ಎಲ್ ಡಿ ಇ ಸಂಸ್ಥೆಯ ಆಡಳಿತಾಧಿಕಾರಿ ಡಾ. ಆರ್. ಬಿ. ಕೊಟ್ನಾಳ, ಕರ್ನಾಟಕ ಜಾನಪದ ಪರಿಷತ ರಾಜ್ಯಾಧ್ಯಕ್ಷ ಡಾ. ಎಸ್. ಬಾಲಾಜಿ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಬಾಬಾಸಾಬ ವಿಜಯದಾರ, ಅರವಿಂದ ಕೊಪ್ಪ, ಭೀಮಸೇನ ಕೋಕರೆ ಮಾತನಾಡಿದರು.
ಕಲಾ ಪ್ರದರ್ಶನಕ್ಕೆ ಸಾಕ್ಷಿಯಾದ ಗುಮ್ಮಟ ನಗರಿ
ಬಸವ ನಾಡು ವಿಜಯಪುರ ಯುವ ಜನತೆಯ ಕಲೋತ್ಸವಕಕ್ಕೆ ಸಾಕ್ಷಿಯಾಯಿತು. ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ್ದ ಯುವಜನತೆ ಅತ್ಯುತ್ಸಾಹದಿಂದ ಪಾಲ್ಗೋಂಡ ಈ ಕಾರ್ಯಕ್ರಮ ನೆರೆದ ಪ್ರೇಕ್ಷಕರು ಕುಣಿದು ಕುಪ್ಪಳಿಸುವಂತೆ ಮಾಡಿತು.
ನಾನಾ ನೃತ್ಯಗಳು ಆ ನೃತ್ಯಗಳಿಗೆ ತಕ್ಕಂದೆ ಹೊರ ಹೊಮ್ಮುತ್ತಿದ್ದ ಸಂಗೀತ ನೆರೆದ ಜನ ಸಂಗೀತ ಲೋಕದಲ್ಲಿ ಅಲಯುವಂತೆ ಮಾಡಿತು. ಸಭಾ ಭವನದ ಹೊರಗಡೆಯೂ ಕೂಡ ಯುವಕ, ಯುವತಿಯರು ಕುಣಿದು ಕುಪ್ಪಳಿಸಿದ್ದು, ಯುವ ಜನತಯಲ್ಲಿರರುವ ಕಲಾರಾಧನೆಗೆ ಸಾಕ್ಷಿಯಾಗಿತ್ತು.
ಲಂಬಾಣಿ ನೃತ್ಯ, ಬೇರೆ ಬೇರೆ ರಾಜ್ಯಗಳ ಬುಡಕಟ್ಟು ನೃತ್ಯಗಳು, ಆಯಾ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸಿದವು. ಸಂಗೀತ ನುಡಿಸುವುದರಿಂದ ಹಿಡಿದು, ನೃತ್ಯ ಮಾಡುವವರು, ಕಾರ್ಯಕ್ರಮ ನಿರೂಪಕರೆಲ್ಲರೂ ಯುವ ಸಮುದಾಯದವರೇ ಆಗಿರುವುದು ಈ ಯುವಜನ ಉತ್ಸವಕ್ಕೆ ಮೆರಗು ನೀಡಿತು. ಕಿವಿಗಡಚಿಕ್ಕುವ ಶಬ್ದ ನೆರೆದ ಪ್ರೇಕ್ಷಕರೂ ಕೂಡ ಕುಣಿಯುವಂತೆ ಮಾಡಿತು. ಸಂಗೀತ ಪ್ರೀಯರು ತಮಗಿಷ್ಟವಾದ ಹಾಡಿನ ನೃತ್ಯ ಆರಂಭವಾದ ತಕ್ಷಣ ತಾವೂ ಕೂಡ ಹಾಡು ಹೇಳುವ ಮೂಲಕ ತಲ್ಲೀನರಾಗಿದ್ದು ಗಮನಾರ್ಹವಾಗಿದೆ.
ಈ ಯುವ ಜನೋತ್ಸವದಲ್ಲಿ ಜಾನಪದ ನೃತ್ಯ, ಜಾನಪದ ಗೀತೆ, ಏಕಾಂಗ ನಾಟಕ, ಕೊಳಲು, ವೀಣೆ, ಮೃದಂಗ, ಹಾರ್ಮೋನಿಯಂ, ತಬಲಾ, ಗಿಟಾರ, ಆಶುಭಾಷಣ, ಶಾಸ್ತ್ರೀಯ ಗಾಯನ, ಹಿಂದೂಸ್ತಾನಿ ಗಾಯನ, ಕರ್ನಾಟಕ, ಶಾಸ್ತ್ರೀಯ ನೃತ್ಯ, ಭರತ ನಾಟ್ಯ, ಓಡಿಸ್ಸಿ, ಕುಚಪುಡಿ, ಕಥಕ ಸೇರಿದಂತೆ ನಾನಾ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು.
ಈ ಕಾರ್ಯಕ್ರಮದಲ್ಲಿ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಸಂಜೀವ ಕೋತ, ನಾಗರಾಜ ಲಂಬು, ಬಸವರಾಜ ಗೊಳಸಂಗಿ, ಎ. ಸಿ. ಕಾಂತಪ್ಪ, ನೆಹರು ಯುವ ಕೇಂದ್ರದ ಜಿಲ್ಲಾ ಯುವಜನಾಧಿಕಾರಿ ರಾಹುಲ ಡೊಂಗ್ರೆ, ಜಿಲ್ಲಾ ಎನ್ ಎಸ್ ಎಸ್ ಅಧಿಕಾರಿ ಪ್ರೊ. ಕೊರಬು, ಡಾ. ರುದ್ರಗೌಡ ಪಾಟೀಲ ಉಪಸ್ಥಿತರಿದ್ದರು.
ಯುವನಜಸೇವೆ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಎಸ್. ಜಿ. ಲೋಣಿ ಸ್ವಾಗತಿಸಿದರು. ಎಂ. ಐ. ಚಿಂಚಲಿ ವಂದಿಸಿದರು. ನಾಗರಾಜ ಬಿರಾದಾರ ನಿರೂಪಿಸಿದರು.