ವಿಜಯಪುರ: ಭಾರತರತ್ನ, ಬೋಧಿಸತ್ವ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಪರಿನಿರ್ವಾಣ ದಿನವನ್ನು ಜಿಲ್ಲಾ ಕ್ರಿಡಾಂಗಣದಲ್ಲಿ ಆಚರಿಸಲಾಯಿತು.
ಡಾ. ಅಂಬೇಡ್ಕರ್ ಪುತ್ಥಳಿಗೆ ಗಣ್ಯರು ಮಾಲಾರ್ಪಣೆ ಮಾಡಿನಮನ ಸಲ್ಲಿಸಿದರು.
ವಿಜಯಪುರ ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರಿ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿಯ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ ಎಸ್ಟಿ ನೌಕರರ ಸಮನ್ವಯ ಸಮಿತಿಯ ವಿಜಯಪುರ ಜಿಲ್ಲಾಧ್ಯಕ್ಷ ಬಿ. ಎಚ್. ನಾಡಗಿರಿ ಮಾತನಾಡಿದರು.
ಸಮಿತಿ ಸ್ಥಾಪನೆಯಾಗಿ 18 ವರ್ಷಗಳಾಗಿವೆ. ಈ ಸಂಘವು ನೌಕರರ ಪರ ಧ್ವನಿಯಾಗಿ ಕೆಲಸ ಮಾಡುತ್ತಿದ್ದು, ಅನೇಕ ಹೋರಾಟಗಳಲ್ಲಿ ಅಂಬೇಡ್ಕರ್ ಅವರ ಚಿಂತನೆಗಳಿಂದ ಯಶಸ್ಸಾಗಿದ್ದು, ಪರಿಶಿಷ್ಠ ಜಾತಿಗೆ ಶೇ. 15 ರಿಂದ ಶೇ. 17 ಮತ್ತು ಪರಿಶಿಷ್ಠ ಪಂಗಡದವರಿಗೆ ಶೇ. 3 ರಿಂದ 7 ರಷ್ಟು ಮೀಸಲಾತಿ ಹೆಚ್ಚಳವಾಗಿರುವುದು ಸಂಘದ ಹೋರಾಟದ ಫಲವಾಗಿದೆ. ಹೀಗೆ ಅವಿರತವಾಗಿ ಸಮಾಜ ಹಾಗೂ ಸರಕಾರಿ ನೌಕರರ ಹಿತಾಸಕ್ತಿಯನ್ನು ಕಾಪಾಡಿಕೊಂಡು ಬಾಬಾಸಾಹೇಬರ ದಾರಿಯಲ್ಲಿ ನಡೆಯುತ್ತಿದ್ದೆವೆ. ಈಗ ವಿಜಯಪುರ ಹೃದಯ ಬಾಗದಲ್ಲಿರುವ ಹೊಸ ಬಾಬಾಸಾಹೇಬ ಅಂಬೇಡ್ಕರ ಪುತ್ಥಳಿಯ ಕಾರ್ಯ ಪೂರ್ಣಗೊಂಡಿದ್ದು ಅದನ್ನು ಆದಷ್ಟು ಬೇಗನೆ ಜನೇವರಿ 26ರಂದೇ ಉದ್ಘಾಟನೆ ಮಾಡಲು ಕೂಡ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ವಿಜಯಕುಮಾರ ಸೂರ್ಯವಂಸಿ ಅಮರಪ್ಪ ಚಲವಾದಿ, ಬಸವಂತ ಗುಣದಾಳ, ಅಡಿವೆಪ್ಪ ಸಾಲಗಲ್ಲ, ಅರವಿಂದ ಲಂಬು, ರಾಹುಸಾಹೇಬ ಗವಾರಿ, ಎಸ್. ವೈ. ಹಾದಿಮನಿ, ಸೂರ್ಯಕಾಂತ ಹೊಸಮನಿ, ನೀಲಕಂಠ ಬನಡೋಡೆ, ಎಸ್. ಎಂ. ಲೋಣಿ, ನಿಜು ಮೇಲಿನಕೇರಿ, ಡಿ. ಎಸ್. ಶಿವಶರಣ, ಬಿ. ಟಿ. ವಾಗಮೋರೆ, ಎಲ್. ಎ. ಕನಸೆ, ಮಲ್ಲಿಕಾರ್ಜುನ ಮಾದರ, ಎಂ. ಎಂ. ಮುಂಡೇವಾಡೆ ಸೇರಿದಂತೆ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.