Skill Educaiton: ಮಕ್ಕಳ ಆಸಕ್ತಿಗನುಗುಣವಾಗಿ ನವೀನ, ಸಂವಹನ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ಶಿಕ್ಷಣ ಅಗತ್ಯವಾಗಿದೆ- ಸುನೀಲಗೌಡ ಪಾಟೀಲ

ವಿಜಯಪುರ: ಮಕ್ಕಳ ಆಸಕ್ತಿಗನುಗುಣವಾಗಿ ನವೀನ ಮತ್ತು ಸಂವಹನ ಕಲಿಕಾ ಸಾಮಥ್ರ್ಯವನ್ನು ಹೆಚ್ಚಿಸುವ ಶಿಕ್ಷಣ ನೀಡಿದರೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.

ವಿಜಯಪುರ ನಗರದ ಎಸ್.ಎಸ್.ಪಿ.ಯು.ಕಾಲೇಜ ಆವರಣದ ಮಾಧ್ಯಮಿಕ ವಿಭಾಗದಲ್ಲಿ ಆರಂಭಿಸಲಾಗಿರುವ ಅಟಲ್ ಟಿಂಕರಿಂಗ್ ಪ್ರಯೋಗಾಲಯ ಉದ್ಘಾಟಿಸಿ ಅವರು ಮಾತನಾಡಿದರು.

ನಿಗದಿತ ಪಠ್ಯಕ್ರಮಕ್ಕಿಂತ ವಿದ್ಯಾರ್ಥಿಗಳ ಆಸಕ್ತಿಗೆ ಪೂರಕವಾಗಿ ಶಿಕ್ಷಣ ನೀಡುವುದು ಅಗತ್ಯವಾಗಿದೆ.  ಇದಕ್ಕೆ ಅಟಲ್ ಟಿಂಕರಿಂಗ್ ಪ್ರಯೋಗಾಲಯ ಪೂರಕವಾಗಿ ಕೆಲಸ ಮಾಡುತ್ತಿವೆ.  ಇಂಥ ಲ್ಯಾಬ್‍ಗಳ ಸ್ಥಾಪನೆಯಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿರುವ ಹೊಸ ಹೊಸ ಸಂಶೋಧನಾ ಸಾಮಥ್ರ್ಯವನ್ನು ಬೆಳಕಿಗೆ ತರಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.

ಸುನೀಲಗೌಡ ಪಾಟೀಲ ನಾನಾ ಮಾದರಿಗಳನ್ನು ತಯಾರಿಸಿದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು

ವಾಸ್ತವಿಕತೆಗೆ ಹತ್ತಿರವಾಗಿರುವ ಮತ್ತು ಮಕ್ಕಳು ಹೊಂದಿರುವ ಕಲ್ಪನೆಗಳನ್ನು ಜಾರಿ ಮಾಡಲು ಇಂಥ ಲ್ಯಾಬ್‍ಗಳು ಅಗತ್ಯವಾಗಿವೆ. ಹೊಸ ಹೊಸ ಕಲ್ಪನೆಗಳು ಮತ್ತು ಅವುಗಳ ಅನುಷ್ಠಾನಕ್ಕೆ ವಯಸ್ಸು ಅಡ್ಡಿಯಾಗುವುದಿಲ್ಲ. ಇದನ್ನು ಮನಗಂಡು ಬಿ.ಎಲ್.ಡಿ.ಇ. ಸಂಸ್ಥೆಯಿಂದ ವೆಂಚರಾಥಾನ್ ಆಯೋಜಿಸಲಾಗುತ್ತಿದೆ. ಇದರಲ್ಲಿ ಎಲ್ಲ ವಯೋಮಾನದವರು ಪಾಲ್ಗೊಳಬಹುದಾಗಿದೆ ಎಂದು ಸುನೀಲಗೌಡ ಪಾಟೀಲ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಿಎಲ್‍ಡಿಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ಬಿ. ಕೊಟ್ನಾಳ ಮಾತನಾಡಿ, ಮಕ್ಕಳಿಗೆ ಇಂಥ ಲ್ಯಾಬ್‍ಗಳಿಂದ ಅವರಲ್ಲಿರುವ ಹೊಸ ಹೊಸ ಆಲೋಚನೆಗಳನ್ನು ಅನುಷ್ಠಾನಕ್ಕೆ ತರಲು ಪ್ರಯೋಜನವಾಗುತ್ತಿವೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ಇದರ ಲಾಭ ಪಡೆದುಕೊಳ್ಳಬೇಕು ಎಂದು ಹೇಳಿದರು.


ಬಿಎಲ್‍ಡಿಇ ಸಂಸ್ಥೆಯ ಆಡಳಿತಾಧಿಕಾರಿ ಬಿ.ಆರ್.ಪಾಟೀಲ ಮತ್ತು ಡಯಟ್ ಎಟಿಎಲ್ ನೋಡಲ್ ಅಧಿಕಾರಿ ಜಯಪ್ರಕಾಶ ಸೊಡ್ಡಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಉಪನಿರ್ದೇಶಕಿ ಸಾಯಿರಾಬಾನು ಖಾನ, ಬಿಎಲ್‍ಡಿಇ ಸಂಸ್ಥೆಯ ಆಡಳಿತಾಧಿಕಾರಿ ಆಯ್.ಎಸ್.ಕಾಳಪ್ಪನವರ, ಅಧೀಕ್ಷಕ ಎಸ್.ಎ.ಬಿರಾದಾರ, ಎಸ್.ಎಸ್.ಪಿ.ಯು.ಕಾಲೇಜಿನ ಪ್ರಾಚಾರ್ಯ ಜಿ.ಡಿ.ಅಕಮಂಚಿ, ಉಪಪ್ರಾಚಾರ್ಯೆ ಕೆ.ಬಿ.ಪಾಟೀಲ ಉಪಸ್ಥಿತರಿದ್ದರು.


ದೈಹಿಕ ಶಿಕ್ಷಕ ಕೆ.ವಿ.ಒಡೆಯರ ಸ್ವಾಗತಿಸಿದರು. ಸಹಶಿಕ್ಷಕ ಎಂ.ಎಚ್.ಜಂಡೆ ನಿರೂಪಿಸಿದರು. ಡಿ.ಕೆ.ರಾಠೋಡ ವಂದಿಸಿದರು.
ಇದಕ್ಕೂ ಮೊದಲು ಲ್ಯಾಬ್ ಉದ್ಘಾಟಿಸಿದ ಸುನೀಲಗೌಡ ಪಾಟೀಲ ನಾನಾ ಮಾದರಿಗಳನ್ನು ತಯಾರಿಸಿದ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದರು. ಅಲ್ಲದೆ, ವಿದ್ಯಾರ್ಥಿಗಳ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Leave a Reply

ಹೊಸ ಪೋಸ್ಟ್‌