ವಿಜಯಪುರ: ದೈಹಿಕವಾಗಿ ಸದೃಢರಾಗಿದ್ದಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ವಿಜಯಪುರ ಉಪವಿಭಾಗಾಧಿಕಾರಿ ಕ್ಯಾ. ಮಹೇಶ ಮಾಲಗಿತ್ತಿ ಹೇಳಿದ್ದಾರೆ.
ನಗರದ ಪ್ರತಿಷ್ಠಿತ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ನಡೆದ 22ನೇ ಶಾಲಾ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದ ಅವರು, ಅದಕ್ಕಾಗಿ ವಿದ್ಯಾರ್ಥಿಗಳು ಹೆಚ್ಚಾ ಕ್ರೀಡೆಗಳಲ್ಲಿ ಭಾಗವಹಿಸಬೇಕು. ಯಾವುದಾದರು ಒಂದು ಕ್ರೀಡೆಯಲ್ಲಿ ತೊಡಗಿಕೊಂಡಾಗ ಮಾನಸಿಕ ಮತ್ತು ದೈಹಿಕ ಸ್ವಾಸ್ಥ್ಯ ಬರುತ್ತದೆ. ಕ್ರೀಡೆ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ 19 ವರ್ಷದೊಳಗಿನ ಬಾಲಕಿಯರ ಕರ್ನಾಟಕ ಕ್ರಿಕೆಟ್ ತಂಡದ ಆಟಗಾರ್ತಿ ಅಣ್ಣಪೂರ್ಣ ಭೊಸಲೆ, ಕಠಿಣ ಪರಿಶ್ರಮವಿದ್ದರೆ ಕ್ರೀಡೆಯಲ್ಲಿ ಸಾಧನೆಯನ್ನು ಮಾಡಬಹುದು. ದೈಹಿಕವಾಗಿ ಸದೃಢರಾಗಿದ್ದರೆ ಮಾನಸಿಕವಾಗಿಯೂ ಸದೃಢವಾಗಿರಲು ಸಾಧ್ಯ. ಮಕ್ಕಳು ಸದೃಢವಾಗಿ ಬೆಳೆದು ಸಮಾಜಕ್ಕೆ ಪೂರಕವಾದ ನಾಗರಿಕರಾಗಬೇಕು ಎಂದು ಹೇಳಿದರು.
ಸಂಸ್ಥೆಯ ಚೇರಮನ್ ಡಾ. ಸುರೇಶ ಬಿರಾದಾರ ಮಾತನಾಡಿ, ವಿದ್ಯಾರ್ಥಿಗಳು ಅಭ್ಯಾಸದ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಸಂಸ್ಥೆಯು ವಿದ್ಯಾರ್ಥಿಗಳಿಗೆ ಪೂರಕವಾದ ಅವಕಾಶಗಳನ್ನು ಸದಾ ಒದಗಿಸುತ್ತ ಬಂದಿದೆ. ಅದರ ಸದುಪಯೋಗ ಮಾಡಿಕೊಳ್ಳಬೇಕು. ಇಂದಿನ ಒತ್ತಡದ ಜೀವನದಿಂದ ದೂರವಿಲು ಕ್ರೀಡೆ ಸಹಾಯಕವಾಗಿದೆ. ಯಶಸ್ವಿ ವ್ಯಕ್ತಿಯಾಗಿ ರೂಪಗೊಳ್ಳಲು ಶಾಲಾ ದಿನಗಳಿಂದಲೆ ಕ್ರೀಡಾ ಚಟುವಟಿಕೆಗಳಲ್ಲಿ ಭಾವಹಿಸಬೇಕು. ಇಂದು ಕ್ರೀಡೆ ಅತ್ಯಂತ ಪ್ರಾಮುಖ್ಯಯನ್ನು ಪಡೆದಿದೆ. ಅನೇಕ ಜನರು ಕ್ರೀಡೆಯನ್ನೇ ವೃತ್ತಿಯನ್ನಾಗಿ ಮಾಡಿಕೊಳ್ಳಲು ಶ್ರಮಿಸುತ್ತಿದ್ದಾರೆ. ಭವಿಷ್ಯದಲ್ಲಿ ಕ್ರೀಡೆ ನಿಮ್ಮ ಜೀವನವನ್ನು ರೂಪಿಸಬಹುದು ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷೆ ಶೀಲಾ ಬಿರಾದಾರ, ನಿರ್ದೇಶಕ ಶರತ ಬಿರಾದಾರ, ಭರತ ಬಿರಾದಾರ, ದಿವ್ಯಾ ಶರತ ಬಿರಾದಾರ ಕ್ರೀಡಾಪಟುಗಳಿಗೆ ಶುಭ ಕೋರಿದರು.
ಬಳಿಕ ಕ್ರೀಡಾ ಚಟುವಟಿಕೆಗಳ ನಡೆದವು. ವಿದ್ಯಾರ್ಥಿಗಳು ಕ್ರೀಡಾ ಮಹತ್ವದ ಕುರಿತು ನೃತ್ಯವನ್ನು ಮಾಡಿ ಎಲ್ಲರನ್ನು ರಂಜಿಸಿದರು. ಮಕ್ಕಳು ಜುಂಬಾ ಡ್ಯಾನ್ಸ್‍ನ್ನು ಪ್ರದರ್ಶಿಸಿದರು. ಕರಾಟೆ, ಫಿರಾಮಿಡ್, ಯೋಗಾಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ನಂತರ ನಡೆದ ಕ್ರೀಡೆಗಳಲ್ಲಿ ಗೆದ್ದ ಮಕ್ಕಳಿಗೆ ಪಾಲಕರಿಂದಲೇ ಪ್ರಮಾಣ ಪತ್ರ ಹಾಗೂ ಪದಕಗಳನ್ನು ಕೊಡಿಸಲಾಯಿತು.
ಪ್ರಾಚಾರ್ಯ ಶ್ರೀಧರ ಕುರಬೆಟ್ ಸ್ವಾಗತಿಸಿದರು. ಶಾಲಾ ಸಂಯೋಜಕಿ ಪೂಜಾ ಖನಗೆ ವಂದಿಸಿದರು. ಶಿಕ್ಷಕಿ ಮೊಹಸಿನಾ ಇನಾಮದಾರ ಮತ್ತು ರಾಜೇಶ್ವರಿ ಪೊದ್ದಾರ ನಿರೂಪಿಸಿದರು,
ಈ ಸಂದರ್ಭದಲ್ಲಿ ಎ. ಎಚ್. ಸಗರ, ಪ್ರವೀಣಕುಮಾರ ಗೆಣ್ಣೂರ, ಲಕ್ಷ್ಮಣ ಪಾಟೀಲ, ಬಸವರಾಜ ರೆಬಿನಾಳ, ಅಶ್ವೀನ ವಗದರಗಿ, ಶಶಿಧರ ಲೋನಾರಮಠ, ಈಶ್ವರ, ಜುಬೇರ, ಶ್ರೀದೇವಿ, ಜ್ಯೋತಿ, ಶ್ವೇತಾ, ಸುರೇಖಾ, ತಬಸ್ಸುಮ, ಹೀನಾ, ಮೊಹಸಿನಾ, ಸೀಮಾ, ದೀಪಾ, ಸರೋಜಾ, ವಿಶಾಲಾಕ್ಷಿ, ಮದುಮತಿ, ಅಶ್ವಿನಿ, ರಾಜೇಶ್ವರಿ, ಕವಿತಾ, ವಿದ್ಯಾ, ಬೊರಮ್ಮಾ, ಅಪ್ಸರಾ ಮುಂತಾದವರು ಉಪಸ್ಥಿತರಿದ್ದರು.