Doctors Treatment: ತುರ್ತು ಚಿಕಿತ್ಸೆ ಅಗತ್ಯವಿದ್ದ ಮಗುವಿಗೆ ಕೂಡಲೇ ಸ್ಪಂದಿಸಿ ಆಸ್ಪತ್ರೆಗೆ ದಾಖಲಿಸಿದ ಬಿ ಎಲ್ ಡಿ ಇ ವೈದ್ಯರು

ವಿಜಯಪುರ: ಮಗುವಿಗೆ ಅಗತ್ಯವಿದ್ದ ತುರ್ತು ಚಿಕಿತ್ಸೆಗೆ ಸ್ಪಂದಿಸಿದ ವೈದ್ಯರು ಕೂಡಲೇ ಆ್ಯಂಬೂಲನ್ಸ್ ಮೂಲಕ ಆ ಮಗುವನ್ನು ಹೆಚ್ಚಿನ ಚಿಕಿತ್ಸೆಗೆ ವಿಜಯಪುರ ಬಿ ಎಲ್ ಡಿ ಇ ಆಸ್ಪತ್ರೆಗೆ ದಾಖಲಿಸಿದ ಘಟನೆ ಸಾರವಾಡ ಗ್ರಾಮದಲ್ಲಿ ನಡೆದಿದೆ. 

ವಿಜಯಪುರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ವತಿಯಿಂದ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರಗಳನ್ನು ಆಯೋಜಿಸಲಾಗಿತ್ತು.  ಈ ಸಂದರ್ಭದಲ್ಲಿ ಪುಟಟ್ ಮಗುವೊಂದು ಅಸ್ವಸ್ತವಾಗಿತ್ತು.  ಆಗ ಶಿಬಿರದಲ್ಲಿದ್ದ ಮಕ್ಕಳ ತಜ್ಞರು ಕೂಡಲೇ ಮಗುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಆ್ಯಂಬೂಲನ್ಸ್ ಮೂಲಕ ವಿಜಯಪುರದ ಬಿ. ಎಲ್. ಡಿ. ಇ ಆಸ್ಪತ್ರೆಗೆ ದಾಖಲು ಮಾಡಿದ್ದು, ಮಗು ಈಗ ಚೇತರಿಸಿಕೊಳ್ಳುತ್ತಿದೆ.  ಈ ಆರೋಗ್ಯ ಶಿಬಿರ ಆಯೋಜನೆಗೆ ಕಾರಣರಾದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಅವರಿಗೆ ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದರು.

ಸಾರವಾಡ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆ ಬೃಹತ್ ಶಿಬಿರ ನಡೆಯಿತು

ಇದಕ್ಕೂ ಮೊದಲು ನಡೆದ ಆರೋಗ್ಯ ಶಿಬಿರದ ಉದ್ಘಾಟನೆ ಕಾರ್ಯಕ್ರಮಕ್ಕೆ ಶ್ರೀ ರೇಣುಕಾಶಿವಾಚಾರ್ಯ ಮಹಾಸ್ವಾಮೀಜಿ ಚಾಲನೆ ನೀಡಿದರು.  ಬಳಿಕ ಮಾತನಾಡಿದ ಅವರು, ಎಂ. ಬಿ. ಪಾಟೀಲ ಅವರ ನೀರಾವರಿ ಕಾರ್ಯಗಳಿಂದಾಗಿ ಈ ಭಾಗದಲ್ಲಿ ಅನ್ನದಾತರಿಗೆ ಅನುಕೂಲವಾಗಿದೆ.  ಅಲ್ಲದೇ, ಸಾರ್ವಜನಿಕರ ಹಿತದೃಷ್ಠಿಯಿಂದ ಆರೋಗ್ಯ ಶಿಬಿರಗಳನ್ನು ಆಯೋಜಿಸುವ ಮೂಲಕ ಗ್ರಾಮೀಣ ಭಾಗದ ಜನರ ಮನೆ ಬಾಗಿಲಿಗೆ ತಜ್ಞ ವೈದ್ಯರ ಸೇವೆಯನ್ನು ಒದಗಿಸುತ್ತಿದ್ದಾರೆ.  ಇದನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾ. ಪಂ. ಅಧ್ಯಕ್ಷೆ ಶಾಂತಾಬಾಯಿ ನಿಂಗಪ್ಪ ಫತ್ತೆಪುರ, ಮುಖಂಡರಾದ ಸದಾಶಿವ ಚಿಕರೆಡ್ಡಿ, ಶರಣಪ್ಪ ಬಿದರಿ, ಪ್ರಮೋದ ಚಿಕರೆಡ್ಡಿ, ರುದ್ರಗೌಡ ಬಿರಾದಾರ, ಬಸವರಾಜ ಚಿಕರೆಡ್ಡಿ, ಮಾದುರಾಯಗೌಡ ಬಿರಾದಾರ, ಚಂದ್ರಕಾಂತ ವಾಲಿ, ಕಲ್ಲಪ್ಪ ವಾಲಿ, ಈಶ್ವರಗೌಡ ಮ. ಕೋಟಿ, ಸದಾಶಿವ ಬಿದರಿ, ಮಹಾದೇವ ನಾಟೀಕಾರ, ಸುರೇಶ ಚಲವಾದಿ, ಬಿ. ಎಲ್. ಡಿ. ಇ ಆಸ್ಪತ್ರೆಯ ನವಜಾತ ಶಿಶು ತಜ್ಞ ಡಾ. ಸಿದ್ದು ಚರ್ಕಿ, ಪ್ರಮೋದ ಚಿಕರೆಡ್ಡಿ, ಮಾದೇವ ನಾಟಿಕಾರ, ಸುರೇಶ ಚಲವಾದಿ, ಸೋಮಗೊಂಡ ತೆನಹಳ್ಳಿ ಸೇರಿದಂತೆ ಸಾರವಾಡ ಗ್ರಾಮಸ್ಥರು ಮತ್ತು ಮುಖಂಡರು ಉಪಸ್ಥಿತರಿದ್ದರು.

ರಕ್ತದಾನ ಮಾಡಿದ ಅಯ್ಯಪ್ಪನ ಮಾಲಾಧಾರಿಗಳು

ಈ ಆರೋಗ್ಯ ತಪಾಸಣೆ ಶಿಬಿರದಲ್ಲಿ ಗ್ರಾಮದ ಮುಖಂಡ ನಿಂಗಪ್ಪ ಫತ್ತೆಪುರ, ಅಯ್ಯಪ್ಪಸ ಸ್ವಾಮಿ ಮಾಲಾಧಾರಿಗಳು ಸೇರಿದಂತೆ ಒಟ್ಟು 16 ಜನ ರಕ್ತದಾನ ಮಾಡಿದರು.  ಅಲ್ಲದೇ, ಸಾರವಾಡ ಗ್ರಾಮದ 925 ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

Leave a Reply

ಹೊಸ ಪೋಸ್ಟ್‌