Namma Clinic: ವಿಜಯಪುರ ಜಿಲ್ಲೆಯ ನಮ್ಮ ಕ್ಲಿನಿಕ್- ಮುಖ್ಯಮಂತ್ರಿಗಳಿಂದ ವರ್ಚುವಲ್ ಮೂಲಕ ಲೋಕಾರ್ಪಣೆ

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಸ್ಥಾಪಿಸಲಾದ ಐದು ನಮ್ಮ ಕ್ಲಿನಿಕ್‍ ‘ಗಳು ಸೇರಿದಂತೆ ರಾಜ್ಯಾದ್ಯಂತ ಸ್ಥಾಪಿಸಲಾದ 114 ನಮ್ಮ ಕ್ಲಿನಿಕ್‍ಗಳನ್ನು ವರ್ಚುವಲ್ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲೋಕಾರ್ಪಣೆ ಮಾಡಿದ್ದಾರೆ.  ಖಾಸಗಿ ಆಸ್ಪತ್ರೆಯಲ್ಲಿ ಸಿಗುವ ವೈದ್ಯಕೀಯ ಸೇವೆಯನ್ನು ಜನಸಾಮಾನ್ಯರಿಗೆ ಅತಿ ಕಡಿಮೆ ವೆಚ್ಚದಲ್ಲಿ ಉತ್ತಮ ವೈದ್ಯಕೀಯ ಸೇವೆ ಒದಗಿಸುವ ನಿಟ್ಟಿನಲ್ಲಿ ಜನಸಾಮಾನ್ಯರಿಗೆ ಅನೂಕೂಲ ಕಲ್ಪಿಸಲು ರಾಜ್ಯ ಸರ್ಕಾರ ಮೊದಲ ಹಂತದಲ್ಲಿ 114 ನಮ್ಮ ಕ್ಲಿನಿಕ್‍ಗಳನ್ನು ಸ್ಥಾಪಿಸಿ ಲೋಕಾರ್ಪಣೆ ಮಾಡಲಾಗಿದೆ. ಬಡತನ ಮತ್ತು ಅನಾರೋಗ್ಯ ಎರಡು ಅಭಿವೃದ್ದಿಯ ಶತ್ರುಗಳು, […]

Open Toilet Free: ಗುಮ್ಮಟ ನಗರಿಯ 35 ವಾರ್ಡಗಳು ಬಯಲು ಶೌಚಮುಕ್ತ- ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮಕ್ಕಳಕಿ

ವಿಜಯಪುರ:  ಮಹಾನಗರ ಪಾಲಿಕೆ ವ್ಯಾಪ್ತಿಯ 35 ವಾರ್ಡಗಳನ್ನು ಬಯಲು ಶೌಚಮುಕ್ತ ವಾರ್ಡಗಳೆಂದು ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಅವರು ಘೋಷಿಸಿದ್ದಾರೆ. ಮಹಾನಗರ ಪಾಲಿಕೆ ವ್ಯಾಪ್ತಿಯ 35 ವಾರ್ಡಗಳನ್ನು  ಬಯಲು ಶೌಚಮುಕ್ತ ವಾರ್ಡಗಳೆಂದು ಘೋಷಿಸಲು ನಾನಾ ವಾರ್ಡಗಳಲ್ಲಿ ಶೌಚಾಲಯರಹಿತ ಅರ್ಹ ಫಲಾನುಭವಿಗಳಿಗೆ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿ,  ಶೌಚಾಲಯ ಸೌಲಭ್ಯದಿಂದ ವಂಚಿತರಾದ ಕುಟುಂಬಗಳು, ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರು, ಶಾಲಾ ಮುಖ್ಯಸ್ಥರು ಹಾಗೂ ಭಾದಿತರಾಗಬಹುದಾದ ವ್ಯಕ್ತಿ, ಸಂಘ, ಸಂಸ್ಥೆಗಳಿಂದ ಆಕ್ಷೇಪಣೆ-ಸಲಹೆಗಳನ್ನು ಸಲ್ಲಿಸಲು ಡಿ. 7ರ ವರೆಗೆ ದಿನಾಂಕವನ್ನು ನಿಗದಿ […]

Adilshahi Dynasty: ಕಾಲಗರ್ಭದಲ್ಲಿ ಹುದುಗಿ ಹೋಗಿದ್ದ ಆದಿಲಶಾಹಿ ಸಾಮ್ರಾಜ್ಯದ ಪ್ರಮುಖಾಂಶಗಳ 19 ಕನ್ನಡ ಸಂಪುಟಗಳು ಲೋಕಾರ್ಪಣೆಗೆ ಸಜ್ಜು

ವಿಜಯಪುರ: ಬಸವ ನಾಡು ವಿಜಯಪುರ ಎಂದರೆ ಸಾಕು ತಟ್ಟನೆ ನೆನಪಿಗೆ ಬರುವುದು ಐತಿಹಾಸಿಕ ಗೋಳಗುಮ್ಮಟ.  ಈ ಪ್ರಾಚೀನ ಸ್ಮಾರಕದ ನಿರ್ಮಾಪಕರಾದ ಆದಿಲ್ ಶಾಹಿ ಮನೆತನದ ಬಗ್ಗೆ ಇತಿಹಾಸದಲ್ಲಿ ಸಾಕಷ್ಟು ಸಂಗತಿಗಳು ದಾಖಲಾಗಿವೆ.  ಆದರೆ, ಕಾಲಗರ್ಭದಲ್ಲಿ ಹುದುಗಿ ಹೋಗಿದ್ದ ಈ ಸಾಮ್ರಾಜ್ಯದ ಬಾದಷರು ನಾಡಿನ ಸಮೃದ್ಧಿಗೆ ನೀಡಿರುವ ಕೊಡುಗಳನ್ನು ವರ್ಷಾನುಗಟ್ಟಲೆ ಸಂಶೋಧಿಸಿ ಸಂಗ್ರಹಿಸಲಾಗಿರುವ 19 ಕನ್ನಡ ಸಂಪುಟಗಳು ಲೋಕಾರ್ಪಣೆಗೆ ಸಜ್ಜಾಗಿವೆ. ವಿಜಯಪುರದ ಪ್ರತಿಷ್ಠಿತ ಬಿ. ಎಲ್. ಡಿ. ಇ ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನ […]

Health Camp: ಬಸವಣ್ಣನವರ ತವರಿನಲ್ಲಿ ಅಗರವಾಲ ಕುಟುಂಬದಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ

ವಿಜಯಪುರ: ಬಸವನ ಬಾಗೇವಾಡಿಯ ಶ್ರೀ ಸತ್ಯನಾರಾಯಣ ದೇವಸ್ಥಾನ ವಾರ್ಷಿಕೋತ್ಸವದ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಅಗರವಾಲ ಪರಿವಾರದವರಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು. ಈ ಕಾರ್ಯಕ್ರಮಕ್ಕೆ ಬಸವನ ಬಾಗೇವಾಡಿ ವಿರಕ್ತಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ, ಬಸವನ ಬಾಗೇವಾಡಿಯ ಹಿರೇಮಠದ ಶ್ರೀ ಶಿವಪ್ರಕಾಶ ಶಿವಾಚಾರ್ಯರು ಚಾಲನೆ ನೀಡಿದರು. ಖ್ಯಾತ ವೈದ್ಯರಾದ ಡಾ.ನಿತೀನ ಅಗರವಾಲ, ಡಾ. ಆನಂದ ಕಣಬೂರ ಮತ್ತು ಡಾ. ಮನಿಷಾ ಅಗರವಾಲ ಶಿಬಿರದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಿದರು. ಮಧುಮೇಹ, ರಕ್ತದೊತ್ತಡ, ಸಾಮಾನ್ಯ ರೋಗ, ನೇತ್ರ ತಪಾಸಣೆ, ಸ್ತ್ರಿರೋಗ […]