University Protest: ರಾಣಿ ಚನ್ನಮ್ಮ ವಿವಿ ಸಮಸ್ಯೆಗಳ ಆಗರವಾಗುತ್ತಿದೆ- ಎಬಿವಿಪಿ ಮಹಾನಗರ ಕಾರ್ಯದರ್ಶಿ ಸುರೇಖಾ ಕುಲಕರ್ಣಿ ಆರೋಪ

ವಿಜಯಪುರ:ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಜೀವನವನ್ನು ರೂಪಿಸಬೇಕಾದ ಶಿಕ್ಷಣದ ಕಾರ್ಖಾನೆಗಳಾಗಬೇಕು.  ವಿದ್ಯಾರ್ಥಿಗಳಿಗೆ ಪೂರಕವಾದ ಶೈಕ್ಷಣಿಕ ವಾತಾವರಣವನ್ನು ನಿರ್ಮಾಣ ಮಾಡುವುದು ವಿಶ್ವವಿದ್ಯಾಲಯಗಳ ಕರ್ತವ್ಯವಾಗಿದೆ ಎಂದು ಎಬಿವಿಪಿ ಮಹಾನಗರ ಕಾರ್ಯದರ್ಶಿ ಸುರೇಖಾ ಕುಲಕರ್ಣಿ ಹೇಳಿದ್ದಾರೆ. 

ವಿಜಯಪುರ ನಗರದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಅವರು ಮಾತನಾಡಿದರು.

ಬೆಳಗಾವಿಯ ರಾಣಿ ಚೆನ್ನಮ್ಮ ವಿವಿಯ ವಿರುದ್ಧ ಎಬಿವಿಪಿ ಪ್ರತಿಭಟನಾ ಮೆರವಣಿಗೆಯ ಆಯೋಜಿಸಿತ್ತು.  ವಿಜಯಪುರ ನಗರದ ಗ್ರಾಮದೇವತೆ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿಯವರೆಗೆ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇತ್ತೀಚಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳ ಸಮಸ್ಯೆಗಳಿಂದ ಚರ್ಚೆಗೆ ಗ್ರಾಸವಾಗುತ್ತಿದೆ.  ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದನೆ ನೀಡಿ ವಿಶ್ವವಿದ್ಯಾಲಯವು ಶಿಕ್ಷಣದ ಘನತೆಯನ್ನು ಎತ್ತಿ ಹಿಡಿಯಬೇಕು.  ಒಂದು ವೇಳೆ ಸಮರ್ಪಕವಾದ ಸ್ಪಂದನೆ ಸಿಗದದಿದ್ದರೆ ವಿವಿ ವಿರುದ್ದ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ರಾಣಿ ಚೆನ್ನಮ್ಮ ವಿವಿ ವಿರುದ್ಧ ವಿಜಯಪುರದಲ್ಲಿ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು

ಎಬಿವಿಪಿ ನಗರ ಉಪಾಧ್ಯಕ್ಷ ಓಂಕಾ ನಾವಿ ಮಾತನಾಡಿ, ರಾಣಿ ಚನ್ನಮ್ಮ ವಿವಿ ದಿನನಿತ್ಯ ಯಾವುದೋ ಒಂದು ಶೈಕ್ಷಣಿಕ ಸಮಸ್ಯೆಗಳಿಂದ ಚರ್ಚೆಯಲ್ಲಿದೆ.  ಇದರಿಂದಾಗಿ ವಿದ್ಯಾರ್ಥಿಗಳು ಮಾನಸಿಕವಾಗಿ ಕುಗ್ಗುತ್ತಿರುವುದ್ದಾರೆ.  ವಿವಿ ಶೈಕ್ಷಣಿಕ ಕ್ಷೇತ್ರದ ವಿಫಲತೆಯನ್ನು ತೋರಿಸುತ್ತಿದೆ.  ಪದವಿ ಪರೀಕ್ಷೆಯ ಫಲಿತಾಂಶವನ್ನು ಪ್ರತಿಬಾರಿಯೂ ತಡವಾಗಿ ಪ್ರಕಟಿಸುತಿದ್ದು, ನಿಗದಿತ ಸಮಯದೊಳಗೆ ಪ್ರಕಟಿಸಬೇಕು.  ಪದೇ ಪದೇ ವಿದ್ಯಾರ್ಥಿಗಳ ಪಠ್ಯಕ್ರಮವನ್ನು ಬದಲಾಯಿಸುತ್ತಿದ್ದು, ಇದನ್ನು ಮರುಕಳಿಸದಂತೆ ವಿವಿ ಎಚ್ಚರ ವಹಿಸಬೇಕು.  ಒಂದು ಕಾಲೇಜಿನಿಂದ ಇನ್ನೊಂದು ಕಾಲೇಜಿಗೆ ವರ್ಗಾವಣೆ ಪಡೆಯಲು ರೂ. 5000 ಭರಿಸಿಕೊಳ್ಳುತಿದ್ದು, ಮೊದಲು ನಿಗದಿಸಿದ್ದ ರೂ. 1500 ಮಾತ್ರ ಪಡೆಯಬೇಕು.  ಆರ್ಟಿಫಿಸಿಯಲ್ ಇಂಟಲಿಜನ್ಸಿ ವಿಷಯದ ಕಂಟೆಂಟ್ ಬಳಕೆ ಮಾಡಲು ಪ್ರತಿ ವಿದ್ಯರ್ಥಿಗಳಿಂದ ರೂ. 150 ವಸೂಲಿ ಮಾಡುತ್ತಿರುವದು ಖಂಡನೀಯ.  ಈಗಾಗಲೆ ಪದವಿ ವಿದ್ಯಾರ್ಥಿಗಳ ತರಗತಿಗಳು ಆರಂಭವಾಗಿದ್ದು ಎರಡು ತಿಂಗಳ ನಂತರ ದಿಢೀರನೇ ನಾನಾ ಕೋರ್ಸಗಳ ಪಠ್ಯಕ್ರಮ ಬದಲಾವಣೆ ಮಾಡಲಾಗಿದೆ.  ಇದರಿಂದ ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಸಿದಂತಾಗಿದೆ.  ವಿವಿ ಕೂಡಲೇ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ ಬಗೆಹರಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಎಬಿವಿಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ  ನಾಗರಾಜ ಬಟಗೇರಾ, ಜಿಲ್ಲಾಸಂಚಾಲಕ ಅಕ್ಷಯ ಯಾದವಾಡ, ಮುಖಂಡರಾದ ಮಹಾಂತೇಶ ಕಂಬಾರ, ಮಂಜುನಾಥ ಹಳ್ಳಿ, ಪಾಂಡು ಮೋರೆ, ನಿಂಗಣ್ಣ ಮನಗೂಳಿ, ಸಂತೋಷ ದೊಡಮನಿ, ಪ್ರವೀಣ ಬಿರಾದಾರ, ಅಭಿಷೇಕ ಗುಡದಿನ್ನಿ, ಮೇಘಾ ಕನಮೡಿ, ಅಪ್ಪು ಹೂಗಾರ, ಸ್ವಾತಿ ಚಿಮ್ಮಲಗಿ, ಅರ್ಜುನ ಹಾದಿಮನಿ, ಹಿರಗಪ್ಪಾ ಪೂಜಾರಿ, ಯಲ್ಲಾಲಿಂಗ ಗುಗ್ಗರಿ, ಶ್ರೀಕಾಂತ ಕಡಮಗೇರಾ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌