ವಿಜಯಪುರ: ನಗರದ ಬಿ.ಎಲ್.ಡಿ. ಇ. ಸಂಸ್ಥೆಯ ಶ್ರೀಮತಿ ಬಂಗಾರಮ್ಮ ಸಜ್ಜನ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಿಳಾ ಮಹಾವಿದ್ಯಾಲಯದ ಏಳು ಜನ ವಿದ್ಯಾರ್ಥಿನಿಯರು ಕ್ರಮವಾಗಿ ಬಿಸಿಎ, ಬಿಎ ಮತ್ತು ಎಂ.ಕಾಂ. ಪರೀಕ್ಷೆಗಳಲ್ಲಿ ವಿಶ್ವವಿದ್ಯಾಲಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಆಗಷ್ಟನಲ್ಲಿ ನಡೆಸಿದ ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಈ ವಿದ್ಯಾರ್ಥಿನಿಯರು ಪ್ರಥಮ, ದ್ವಿತೀಯ ಸ್ಥಾನ ಹಾಗೂ ಚಿನ್ನದ ಪದಕ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಬಿಸಿಎ ವಿಭಾಗ
ಬಿಸಿಎ ವಿಭಾಗದಲ್ಲಿ ಕಾಲೇಜಿನ ವಿದ್ಯಾರ್ಥಿನಿ ತೈಜಿನ್ ಎಂ. ಬೇಪಾರಿ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನದ ಪಡೆಯುವುದರ ಜೊತೆಗೆ ಚಿನ್ನದ ಪದಕ ಗಳಿಸಿದ್ದಾರೆ.
ಇದೇ ವಿಭಾಗದಲ್ಲಿ ಗೀತಾ ಬಿ. ಹರನಟ್ಟಿ ದ್ವಿತೀಯ ಮತ್ತು ಸವಿತಾ ಬಿ. ಯಾಳವಾರ ತೃತಿಯ ಸ್ಥಾನ ಪಡೆದಿದ್ದಾರೆ.
ಬಿಎ ವಿಭಾಗ
ಬಿಎ ಪದವಿ ಪರೀಕ್ಷೆಯಲ್ಲಿ ಪಲ್ಲವಿ ಯರನಾಳ- ಮೊದಲನೇ ಸ್ಥಾನ ಪಡೆದಿದ್ದಾರೆ. ಅಷ್ಟೇ ಅಲ್ಲ, ಅತೀ ಹೆಚ್ಚು ಅಂಕ ಮತ್ತು ಅರ್ಥಶಾಸ್ತ್ರದಲ್ಲಿ ಅತೀ ಹೆಚ್ಚು ಅಂಕ ಗಳಿಸಿ ಎರಡು ಚಿನ್ನದ ಪಕದ ಬಾಚಿಕೊಂಡಿದ್ದಾರೆ.
ಸುಹಾಸಿನಿ ಎಸ್. ಚೌಗುಲೆ 7ನೇ ಮತ್ತು ಪಲ್ಲವಿ ಡಿ. ತರಸೆ ವ 10ನೇ ಸ್ಥಾನ ಸ್ಥಾನ ಗಳಿಸಿದ್ದಾರೆ.
ಎಂ.ಕಾಂ ವಿಭಾಗ
ಸ್ನಾತಕೋತ್ತರ ವಿಭಾಗದಲ್ಲಿ ಸಾವಿತ್ರಿ ಬಿ. ಹಾದಿಮನಿ ಎಂ. ಕಾಂ ನಲ್ಲಿ ಪ್ರಥಮ ಸ್ಥಾನ ಮತ್ತು ಚಿನ್ನದ ಪಡೆಯುವ ಮೂಲಕ ಕಾಲೇಜು ಹಾಗೂ ವಿಜಯಪುರ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಉತ್ತಮ ಸಾಧನೆಯ ಮೂಲಕ ಮಹಿಳಾ ಮಹಾವಿದ್ಯಾಲಯದ ಕೀರ್ತಿಯನ್ನು ಹೆಚ್ಚಿಸಿದ ವಿದ್ಯಾರ್ಥಿನಿಯರ ಸಾಧನೆಯನ್ನು ಬಿ ಎಲ್ ಡಿ ಇ ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ, ಪ್ರಧಾನ ಕಾರ್ಯದರ್ಶಿ ಜಿ. ಕೆ. ಪಾಟೀಲ, ಪ್ರಾಚಾರ್ಯ ಡಾ. ಆರ್. ಎನ್. ಮಿರ್ದೆ, ಆಡಳಿತ ಅಧಿಕಾರಿಗಳು, ಪ್ರಾಚಾರ್ಯರು ಬೋಧಕ ಮತ್ತು ಬೋಧಕರ ಹೊರತಾದ ಸಿಬ್ಬಂದಿ ಅಭಿನಂದಿಸಿದ್