ವಿಜಯಪುರ: 2014ರ ಮೇ 26ರಂದು ನರೇಂದ್ರ ಮೋದಿ ಮೊದಲ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ವಿಜಯಪುರ ನಗರದಲ್ಲಿ ಗಲಾಟೆ ನಡೆದಿತ್ತು.
ಅಂದು ನರೇಂದ್ರ ಮೋದಿ ಪ್ರಧಾನಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ವಿಜಯೋತ್ಸವ ಮೆರವಣಿಗೆ ನಡೆಯುತ್ತಿತ್ತು. ವಿಜಯಪುರ ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಆರಂಭವಾದ ಈ ಮೆರವಣಿಗೆ ಗಾಂಧಿ ಚೌಕಿಗೆ ಬಂದಾಗ ಪರಸ್ಪರ ಕಲ್ಲು ತೂರಾಟ ನಡೆದು ಗಲಾಟೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಶಾಸಕ ಯತ್ನಾಳ ಸೇರಿದಂತೆ ಹಲವಾರು ಜನರ ವಿರುದ್ಧ ಒಟ್ಟು 22 ನಾನಾ ಪ್ರಕರಣಗಳು ದಾಖಲಾಗಿದ್ದವು.
ಯತ್ನಾಳ ಪರ ನ್ಯಾಯವಾದಿ ಶ್ರೀನಾಥ ಕುಲಕರ್ಣಿ ವಾದ ಮಂಡಿಸಿದ್ದರು.
ರಾಘವ ಅಣ್ಣಿಗೇರಿ ಪ್ರತಿಕ್ರಿಯೆ
ಈ ಪ್ರಕರಣ ಇತ್ಯರ್ಥವಾದ ನಂತರ ಪ್ರತಿಕ್ರಿಯೆ ನೀಡಿದರು ಸ್ವಾಮಿ ವಿವೇಕಾನಂದ ಸೇನೆಯ ಸಂಸ್ಥಾಪಕ ಅಧ್ಯಕ್ಷ ರಾಘವ ಅಣ್ಣಿಗೇರಿ, ಈ ಪ್ರಕರಣ ರಾಜಕೀಯ ಪ್ರೇರಿತವಾಗಿತ್ತು. ಅಲ್ಲದೇ, ಸುಳ್ಳು ಪ್ರಕರಣ ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ನಮ್ಮ ವಾದವನ್ನು ಎತ್ತಿ ಹಿಡಿದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಅಲ್ಲದೇ, ಅಂದು ಈ ಸುಳ್ಳು ಪ್ರಕರಣ ದಾಖಲಿದ ಅಂದಿನ ಪೊಲೀಸರು ಮತ್ತು ಅಂದಿನ ಬೆಳಗಾವಿ ಐಜಿ ಭಾಸ್ಕರರಾವ ಜನತೆಯ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಪ್ರಕರಣದ ಕುರಿತು ವಿಚಾರಣೆ ನಡೆಸಿದ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್, ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮತ್ತು ಇತತ 58 ಕಾರ್ಯಕರ್ತರು ನಿರ್ದೋಷಿಗಳು ಎಂದು ತೀರ್ಪು ನೀಡಿ ಆದೇಶ ಹೊರಡಿಸಿದ್ದಾರೆ.
ಈ ಗಲಾಟೆಗೆ ಸಂಬಂಧಿಸಿದಂತೆ ಒಟ್ಟು 22 ಪ್ರಕರಣಗಳು ದಾಖಲಾಗಿದ್ದವು. ಇವುಗಳಲ್ಲಿ ಈಗಾಗಲೇ ನಾಲ್ಕು ಪ್ರಕರಣಗಳು ಇತ್ಯರ್ಥವಾಗಿದ್ದವು. ಉಳಿದ 18 ಪ್ರಕರಣಗಳನ್ನು ಸೇರಿಸಿ ಒಂದೇ ಕೇಸ್ ಮಾಡಲಾಗಿತ್ತು. ಈ ಮೊದಲು ವಿಜಯಪುರದಲ್ಲಿ ನಡೆಯುತ್ತಿದ್ದ ಕೇಸದ ವಿಚಾರಣೆ ನಂತರ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ದಿಟಿ ಸಿವಿಲ್ ಕೋರ್ಟ್ ಗೆ ವರ್ಗಾವಣೆಯಾಗಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಪ್ರೀತಿ ಅವರು, ಗಲಾಟೆಗೆ ಸಂಬಂಧಿಸಿದಂತೆ ಸಾಕ್ಷಾಧಾರಗಳನ್ನು ಪರಿಶೀಲಿಸಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೇರಿ ಎಲ್ಲ 58 ಜನರು ನಿರ್ದೋಷಿಗಳೆಂದು ತೀರ್ಪು ನೀಡಿ ಆದೇಶ ಹೊರಡಿಸಿದ್ದಾರೆ. ಯತ್ನಾಳ ಪರವಾಗಿ ನ್ಯಾಯವಾದಿ ಶ್ರೀಕಾಂತ ಕುಲಕರ್ಣಿ ವಾದಿಸಿದ್ದರು.