ವಿಜಯಪುರ: ಬಿ ಎಲ್ ಡಿ ಈ ಸಂಸ್ಥೆಯ ಎವಿಎಸ್ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ 2022ನೇ ನೇ ವರ್ಷದ ವಿದ್ಯಾರ್ಥಿಗಳ ಪದವಿ ಪ್ರಧಾನ ಸಮಾರಂಭ ಇಂದು ನಡೆಯಿತು.
ಕಾಲೇಜಿನ ವಾಗ್ಭಟ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲಬುರ್ಗಿ ಹಿಂಗುಲಾಂಬಿಕ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಮತ್ತು ಬೆಂಗಳೂರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಿನೆಟ್ ಸದಸ್ಯ ಡಾ. ಅಲ್ಲಮಪ್ರಭು ಗುಡ್ಡಾ ಪದವಿ ಪ್ರಧಾನ ಮಾಡಿದರು.
ಬಳಿಕ ಮಾತನಾಡಿದ ಅವರು, ವೈದ್ಯಕೀಯ ವೃತ್ತಿಯ ಪ್ರಾಮುಖ್ಯತೆ, ಮಹತ್ವ, ಆಯುರ್ವೇದ ಹಾಗೂ ಆಯುರ್ವೇದ ವೆಲನೆಸ್ ಸೆಂಟರ್ ಗಳ ಕುರಿತು ಉದಾಹರಣೆಗಳೊಂದಿಗೆ ಸಮಗ್ರ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ಸಂಜಯ, ಉಪಪ್ರಾಚಾರ್ಯ ಡಾ. ಶಶಿಧರ ನಾಯಕ ಹಾಗೂ ಪ್ರಾಧ್ಯಾಪಕಿ ಡಾ. ಎಂ. ಎಚ್. ಬಿರಾದಾರ ಉಪಸ್ಥಿತರಿದ್ದರು.
ಈ ಸಂದರ್ಬದಲ್ಲಿ 57 ವಿದ್ಯಾರ್ಥಿಗಳಿಗೆ ಪದವಿ ಮತ್ತು 11 ವಿದ್ಯಾರ್ಥಿಗಳಿಗೆ ಸ್ನಸತಕೋತ್ತರ ಪದವಿ ಪ್ರಧಾನ ಮಾಡಲಾಯಿತು. ಅಲ್ಲದೇ, ಬಿಎಎಂಎಸ್ ಅಂತಿಮ ವರ್ಷದ ಪದವಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳಾದ ಡಾ. ಅಭಿಷೇಕ್ ಪಾಟೀಲ ಮತ್ತು ಡಾ. ಮುಸ್ಕಾನ್ ಭಾಗವಾನ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಪ್ರಾಧ್ಯಾಪಕ ಡಾ. ಶ್ರೀಕರ್ ಹಿರೇಮಠ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ವಿದ್ಯಾರ್ಥಿನಿ ಜೇಜಮ್ಮ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಡಾ. ಅಶ್ವಿನಿ ಸಜ್ಜನ ವಂದಿಸಿದರು.