Children Outreach: ಬಿ ಎಲ್ ಡಿ ಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ಚಿಣ್ಣರ ಕಲರವ

ವಿಜಯಪುರ: ನಗರದ ಪ್ರತಿಷ್ಠಿತ ಬಿ ಎಲ್ ಡಿ ಎ ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದಲ್ಲಿ ನಗರದ ಕಕ್ಷಾ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಶಾಲೆಯ ಮಕ್ಕಳು ಹಾಗೂ ಸಿಬ್ಬಂದಿಗಾಗಿ ಮೆಕ್ಯಾನಿಕಲ್ ವಿಭಾಗದಲ್ಲಿರುವ ಎಲ್ಲ ಸೌಕರ್ಯಗಳು, ಕೌಶಾಲ್ಯಾಧಾರಿತ ಕಲಿಕಾ ವಿಧಾನಗಳು, ಸಂಶೋಧನಾ ಕೇಂದ್ರ ಇತ್ಯಾದಿಗಳ ಬಗ್ಗೆ ಔಟ್‍ರೀಚ್ ಕಾರ್ಯಕ್ರಮ ನಡೆಯಿತು. 

ವಿಭಾಗದ ಮುಖ್ಯಸ್ಥ ಡಾ. ರಮೇಶ ಜೀರಗಾಳ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಕ್ಷಾ ಶಾಲೆಯ ಒಟ್ಟು 100 ಮಕ್ಕಳನ್ನು ಆರು ಗುಂಪುಗಳಾಗಿ ವಿಂಗಡಿಸಿ ಪ್ರತಿ ಗುಂಪಿಗೂ ಶಾಲಾ ಸಿಬ್ಬಂದಿ ಹಾಗೂ ಮೆಕ್ಯಾನಿಲ್ ವಿಭಾಗದ ಸಿಬ್ಬಂದಿ ನೇತೃತ್ವದಲ್ಲಿ ವಿಭಾಗದ ನಾನಾ ಪ್ರಯೋಗಾಲಯಗಳು ಹಾಗೂ ಸಂಶೋಧನೆ ಕೇಂದ್ರಕ್ಕೆ ಭೇಟಿ ನೀಡಲಾಯಿತು.  ಈ ಚಟುವಟಿಕೆಯಲ್ಲಿ ಮಷೀನ್ ಶಾಪ ವಿಭಾಗದಲ್ಲಿ ಎಲ್. ಎಸ್. ಹಚಡದ ನೇತೃತ್ವದಲ್ಲಿ ಲೇತ ಮಷೀನ್ ಕಾರ್ಯ ವಿವರಿಸಿ ಪ್ರಾತ್ಯಕ್ಷಿಕೆ ನೀಡಲಾಯಿತು.  3ಡಿ ಪ್ರಿಂಟಿಂಗ ಲ್ಯಾಬೋರೊಟರಿಯಲ್ಲಿ ಫ್ರೊ. ಎಸ್. ವಿ. ಹಿರೇಮಠ ಅವರು ಬೃಹತ್ ಗೋಳಗುಮ್ಮಟದ ಚಿಕ್ಕ ಪ್ರತಿಕೃತಿ ನಿರ್ಮಾಣ ಹಾಗೂ ಹೈಡ್ರಾಲಿಕ್ ನ್ಯುಮ್ಯಾಟಿಕ್ ಯಂತ್ರಗಳ ಕಾರ್ಯಗಳ ಬಗ್ಗೆ ಮಕ್ಕಳಿಗೆ ಮನದಟ್ಟಾಗುವಂತೆ ಮಾಹಿತಿ ನೀಡಿದರು.

ಕಂಪ್ಯೂಟರ್ ಎಡೆಡ್ ಮಷೀನ್ ಡ್ರಾಯಿಂಗ ಲ್ಯಾಬೋರೊಟರಿಯಲ್ಲಿ ಫ್ರೊ. ವಿ. ವಿ. ಹೊಕ್ರಾಣಿ ಹಾಗೂ ರಮೇಶ ದೇವರನಾವದಗಿ ಅವರು ಸಾಪ್ಟವೇರ್ ಆಧಾರಿತ ನಾನಾ ಯಂತ್ರೋಪಕರಣಗಳ ಬಿಡಿಭಾಗಗಳ ವಿನ್ಯಾಸ, ಕಾರ್ಯ ನಿರ್ವಹಣೆಯನ್ನು ಧೃಶ್ಯ ಮಾಧ್ಯಮದ ಮೂಲಕ ವಿವರಿಸಿದರು.

ಶಬ್ಧ ಮತ್ತು ಕಂಪನ ಸಂಶೋಧನಾ ಕೇಂದ್ರದಲ್ಲಿ ಫ್ರೊ. ಆರ್. ಎಸ್. ಕಟ್ಟಿಮನಿ ಹಾಗೂ ಸಂಶೋಧನಾ ವಿದ್ಯಾರ್ಥಿ ನಜೀಮ ಅವರು ಕಂಪನದ ಬಗ್ಗೆ ಹಾಗೂ ಡ್ರೋನ್ ತಯಾರಿಕೆಯ ಕಾರ್ಯ ವಿಧಾನದ ಬಗ್ಗೆ ಮಾಹಿತಿ ನೀಡಿದರು.

ಆಂತರಿಕ ದಹನ ಇಂಜಿನ್ ವಿಭಾಗದಲ್ಲಿ ಫ್ರೊ. ಪಿ. ಎಲ್. ಪುಠಾಣಿ ಹಾಗೂ ಸಂಶೋಧನಾ ವಿದ್ಯಾರ್ಥಿ ವೆಂಕಟರಾಜನ ಅವರು ಎಂಜಿನುಗಳ ಬಗ್ಗೆ ವಿವರಿಸಿದರು.  ಅಲ್ಲದೇ, ಫ್ಲೂಯಿಡ್ ಮೆಕ್ಯಾನಿಕ್ಸ್ ಲ್ಯಾಬೋರೊಟರಿಯಲ್ಲಿ ಡಾ. ಚೊಳಕೆ ಅವರು ಬೃಹತ್ ಆಣೆಕಟ್ಟುಗಳಲ್ಲಿ ನೀರಿನ ನಿರ್ವಹಣೆಯನ್ನು ತಿಳಿಸಿದರು.

ಎಲ್ಲ ಮಕ್ಳನ್ನು ಎಂ. ಆರ್. ಹಳಗೊಂಡ, ಎಂ. ಎಸ್. ಹಾವಿನಾಳ, ಪಿ. ಜಿ. ದೇಶಪಾಂಡೆ, ವಿಜಯಕುಮಾರ ಬಿಜ್ಜರಗಿ, ಫ್ರೊ. ಎಸ್. ಎ. ಬಿರಾದಾರ, ಫ್ರೊ. ಎಸ್. ಆರ್. ದೊಡ್ಡಿ, ಪ್ರೊ. ವಿ. ಸಿ. ಹೊನ್ನುಟಗಿ ವಿಭಾಗದ ಎಲ್ಲ ಕಡೆಗೂ ಮಕ್ಕಳನ್ನು ಕರೆದುಕೊಂಡು ಹೋಗಿ ಮಾರ್ಗದರ್ಶನ ನೀಡಿದರು.

ಸಿ. ಎಂ. ಹಿರೇಮಠ ಹಾಗೂ ವರ್ಕಶಾಪ್ ಸಿಬ್ಬಂದಿ, ವಿಭಾಗದ ಮುಖ್ಯಸ್ಥ ಡಾ. ರಮೇಶ ಜೀರಗಾಳ, ಡಾ. ಬಿ. ಎಂ. ಅಂಗಡಿ, ಡಾ. ಆಯ್. ಜಿ. ಭಾವಿ. ಫ್ರೊ. ಎಸ್. ಆರ್. ಬಿರಾದಾರ ಹಾಗೂ ಇನ್ನಿತರ ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ತಿತರಿದ್ದರು.

Leave a Reply

ಹೊಸ ಪೋಸ್ಟ್‌