Varsity Convocation: ಡಿ.19ರಂದು ಅಕ್ಕಮಹಾದೇವಿ ಮಹಿಳಾ ವಿವಿ 13, 14ನೇ ಘಟಿಕೋತ್ಸವ- ರಾಜ್ಯಪಾಲರು ಭಾಗಿ

ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 13 ಮತ್ತು 14ನೇ ಘಟಿಕೋತ್ಸವ ಡಿ.19ರಂದು ಡಿ. 19ರಂದು ಸೋಮವಾರ ನಡೆಯಲಿದೆ ಎಂದು ಕುಲಪತಿ ಪ್ರೊ. ಬಿ. ಕೆ. ತುಳಸಿಮಾಲಾ ತಿಳಿಸಿದ್ದಾರೆ.

ವಿಜಯಪುರ ಜಿಲ್ಲೆಯ ತೊರವಿಯಲ್ಲಿರುವ ವಿವಿ ಯಲ್ಲಿ ಜಂಟಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವವಿದ್ಯಾಲಯದ ಜ್ಞಾನಶಕ್ತಿ ಕ್ಯಾಂಪಸ್‍ನಲ್ಲಿ ಈ ಘಟಿಕೋತ್ಸವ ನಡೆಯಲಿದೆ ಎಂದು ತಿಳಿಸಿದರು.

ನಾಳೆ ಸೋಮವಾರ ಮಧ್ಯಾಹ್ನ 12 ಗಂಟೆಗೆ ನಡೆಯುವ ಘಟಿಕೋತ್ಸವ ವಿಶ್ವವಿದ್ಯಾಲಯಗಳ ಕುಲಾಧಿಪತಿಗಯಾಗಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಉನ್ನತ ಶಿಕ್ಷಣ, ಐಟಿ ಮತ್ತು ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಶ್ವತ್ಥ ನಾರಾಯಣ ಸಿ. ಎನ್., ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಇನ್ನೂ ಘಟಿಕೋತ್ಸವದಲ್ಲಿ ಸಮಾಜ ಸೇವಕಿ ಡಾ. ಎಸ್. ಜಿ. ಸುಶೀಲಮ್ಮ, ಗುಜರಾತಿನ ಇಂದುಮತಿ ಕಾಟಾರೆ ಹಾಗೂ ರೇಷ್ಮಾ ಕೌರ್ ಅವರಿಗೆ ವಿಶ್ವವಿದ್ಯಾಲಯದ ಕುಲಾಧಿಪತಿ ಆಗಿರುವ ಥಾವರ್ ಚಂದ್‌ ಗೆಹ್ಲಟ್ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಿದ್ದಾರೆ. ಎಂದು ಪ್ರೊ. ಬಿ. ಕೆ. ತುಳಸಿಮಾಲಾ ತಿಳಿಸಿದರು.

ಈ ಘಟಿಕೋತ್ಸವದಲದಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಿಂದ ನಾನಾ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಗರಿಷ್ಠ ಅಂಕಗಳನ್ನು ಗಳಿಸಿ ತೇರ್ಗಡೆಯಾದ ಒಟ್ಟು 167 ವಿದ್ಯಾರ್ಥಿನಿಯರಿಗೆ 202 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗುತ್ತಿದೆ. ಈ ಪೈಕಿ 81 ವಿದ್ಯಾರ್ಥಿನಿಯರು 13ನೆಯ ಮತ್ತು 37 ವಿದ್ಯಾರ್ಥಿನಿಯರು 14ನೆಯ ಘಟಿಕೋತ್ಸವದ ಚಿನ್ನದ ಪದಕಗಳನ್ನು ಪಡೆಯಲಿದ್ದಾರೆ ಎಂದು ಕುಲಪತಿ ತಿಳಿಸಿದರು.

ಈ ಘಟಿಕೋತ್ಸವದಲ್ಲಿ ಸ್ನಾತಕ, ಸ್ನಾತಕೋತ್ತರ ಮತ್ತು ಪಿಜಿ ಡಿಪ್ಲೋಮಾ ಸೇರಿ ಒಟ್ಟು 23911 ವಿದ್ಯಾರ್ಥಿನಿಯರು ಪದವಿ ಪಡೆಯಲು ಅರ್ಹರಾಗಿದ್ದಾರೆ. ಅಲ್ಲದೇ, ಒಟ್ಟು 55 ವಿದ್ಯಾರ್ಥಿನಿಯರಿಗೆ ಪಿ. ಎಚ್. ಡಿ ಪದವಿ ಪ್ರದಾನ ಮಾಡಲಾಗುವುದು. ಅಷ್ಟೇ ಅಲ್ಲ, ಈ ಘಟಿಕೋತ್ಸವದಲ್ಲಿ ಒಟ್ಟು 2169 ವಿದ್ಯಾರ್ಥಿನಿಯರಿಗೆ ನಾನಾ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

13ನೆಯ ಘಟಿಕೋತ್ಸವದಲ್ಲಿ ಒಟ್ಟು 1033 ವಿದ್ಯಾರ್ಥಿನಿಯರಿಗೆ ಸ್ನಾತಕೋತ್ತರ ಪದವಿ ನೀಡಲಾಗುವುದು. ಈ ಪೈಕಿ ಎಂ. ಎ.- 342, ಎಂ. ಕಾಂ.- 250, ಎಂ. ಬಿ. ಎ. 42, ಎಂ. ಎಸ್. ಸಿ.- 302, ಎಂ. ಈಡಿ 11, ಎಂ. ಪಿ. ಈಡಿ- 16, ಎಂ. ಎಲ್. ಆಯ್. ಎಸ್‌.- 10, ಎಂ. ಎಸ್. ಡಬ್ಲ್ಯೂ 28, ಮತ್ತು ಎಂ. ಸಿ. ಎ.- 16 ವಿದ್ಯಾರ್ಥಿನಿಯರು ಪದವಿಗೆ ಅರ್ಹರಾಗಿದ್ದಾರೆ ಎಂದು ಅವರು ತಿಳಿಸಿದರು.

ಈ ಸುದ್ದಿಗೋಷ್ಠಿಯಲ್ಲಿ ಕುಲಸಚಿವ ಪ್ರೊ. ಬಿ. ಎಸ್. ನಾವಿ, ಮೌಲ್ಯಮಾಪನ ಕುಲಸಚಿವ ಪ್ರೊ. ರಮೇಶ ಕೆ,ಲಲ ಹಣಕಾಸು ಅಧಿಕಾರಿ ಪ್ರೊ. ಎಸ್. ಬಿ. ಕಾಮಶೆಟ್ಟಿ, ಘಟಿಕೋತ್ಸವ ಸಂಯೋಜನಾಧಿ ಲಕಾರಿ ಪ್ರೊ ನಾಮದೇವಗೌಡ, ಮಾಧ್ಯಮ ಸಮಿತಿ ಅಧ್ಯಕ್ಷ ಪ್ರೊ. ಓಂಕಾರ ಕಾಕಡೆ ಹಾಗೂ ಸಂಯೋಜಕಿ ಡಾ. ತಹಮೀನಾ ಕೋಲಾರ, ಐ. ಸಿ. ಟಿ ಸಂಯೋಜಕ ಸಂದೀಪ್ ನಾಯಕ್‌ ಮತ್ತಿತರರ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌