Parents Yatnal: ಪಾಲಕರನ್ನು ಸರಿಯಾಗಿ ನೋಡದಿದ್ದರೆ ಅವರ ಆಸ್ತಿಯನ್ನು ಕೇಳುವ ಹಕ್ಕು ನಿಮಗಿಲ್ಲ- ಶಾಸಕ ಪಾಟೀಲ ಯತ್ನಾಳ ಚಾಟಿ

ವಿಜಯಪುರ: ನೀವು ಹಿರಿಯರನ್ನು ಅವರ ಮುಪ್ಪಾವಸ್ಥೆಯಲ್ಲಿ ಸರಿಯಾಗಿ ನೋಡಿಕೊಳ್ಳದಿದ್ದರೆ ಅವರ ಆಸ್ತಿಯಲ್ಲಿ ಪಾಲು ಕೇಳುವ ಹಕ್ಕೂ ನಿಮಗಿಲ್ಲ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಚಾಟಿ  ಬೀಸಿದ್ಳಿದಾರೆ.

ವಿಜಯಪುರ ಜಿಲ್ಲೆಯ ಅರಕೇರಿ ಎಲ್ ಟಿ ಬಳಿ ನೂತನವಾಗಿ ಆರಂಭವಾಗಿರುವ ವೃದ್ಧಾಶ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪಾಲಕರನ್ನು ಮಕ್ಕಳು ಪ್ರೀತಿಯಿಂದ ನೋಡಿಕೊಳ್ಳಬೇಕು.  ನಿಮ್ಮ ಕೆಲಸದ ಒತ್ತಡದಲ್ಲಿ ಅವರನ್ನು ನೀವು ಸರಿಯಾಗಿ ಆರೈಕೆ ಮಾಡದಿದ್ದರೆ ಅವರಿಗೆ ನೀವು ನಿಮ್ಮ ನೌಕರಿಯ ಒತ್ತಡದಲ್ಲಿ ನೋಡಲಾಗದಿದ್ದರೆ ಇಂಥ ಓಲ್ಡೇಜ್ ಹೋಮ್‌(ವೃದ್ಧಾಶ್ರಮ) ಗಳಲ್ಲಿ ವ್ಯವಸ್ಥೆ ಮಾಡಿಯಾದರೂ ಇಡಬೇಕು ಎಂದು ಅವರು ಹೇಳಿದರು.

ವೃದ್ಧಾಶ್ರಮ ಉದ್ಘಾಟಿಸಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು

ಈ ಹಿಂದೆ ಸಿದ್ಧೇಶ್ವರ ಸಂಸ್ಥೆಯ ಅಡಿಯಲ್ಲಿ ಪ್ರಶಾಂತ ಆಶ್ರಮ ಎಂದು ಮಾಡಿದ್ದೇವು.  ಆಗ, ಯಾರಾದರೂ ತಮ್ಮ ಪೋಷಕರನ್ನು ಇಲ್ಲಿ ಬಿಟ್ಟರೆ ಅವರನ್ನು ಸರಿಯಾಗಿ ನೋಡಿಕೊಳ್ಳಲಾಗುವುದು.  ಅಲ್ಲದೇ, ಅವರ ಆಸ್ತಿಯನ್ನು ಶ್ರೀ ಸಿದ್ಧೇಶ್ವರ ಸಂಸ್ಥೆಗೆ ಕೊಡಬೇಕಾಗುತ್ತದೆ ಎಂದು ಹೇಳಿದ್ದೆವು.  ಇದನ್ನು ಹೇಳಿದ್ದೇ ತಡ, ಆಸ್ತಿ ತಪ್ಪುವ ಭಯದಿಂದ ಯಾರೂ ತಮ್ಮ ಪಾಲಕರನ್ನು ಬಿಡಲೇ ಇಲ್ಲ.  ಇಷ್ಟರ ಮಟ್ಟಿಗಾದರೂ ನಮ್ಮ ಉದ್ದೇಶ ಸಫಲವಾಗಿದೆ.  ಸದ್ಯ ಆಪ್ಟೆ ಕುಟುಂಬ ಸೇವಾ ಮನೋಭಾವದಿಂದ ವೃದ್ಧಾಶ್ರಮ ಮಾಡುತ್ತಿರುವುದು ಒಳ್ಳೆಯದು.  ಹಿರಿಯ ಜೀವಿಗಳಿಗೆ ಅವರ ಮುಸ್ಸಂಜೆ ಹೊತ್ತಲ್ಲಿ ನೆಮ್ಮದಿಯ ಬದುಕು ಸಿಗುವಂತಾಗಲಿ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ವೇದಿಕೆಯ ಮೇಲೆ ವಿಜಯಪುರ ಮಹಾನಗರ ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ, ಲೋಕಾಯುಕ್ತ ಡಿವೈಎಸ್ಪಿ ಮಹೇಂದ್ರಕುಮಾರ ನಾಯಕ, ಪ್ರತಿಭಾ ಪಾಟೀಲ್ ಉಪಸ್ಥಿತರಿದ್ದರು.

ಸ್ವಾಭಿಮಾನ ಓಲ್ಡಏಜ್ ಹೋಮ್ ಆರಂಭಿಸಿರುವ ಆಪ್ಟೆ ಕುಟುಂಬ ಸದಸ್ಯರು

ಶಿವಾನಂದ ರೇಶ್ಮೆ, ಸುನಂದಾ ತೋಳಬಂದಿ, ರಾಮಸಿಂಗ ರಜಪೂತ, ಚೇತನ ರಜಪೂತ, ಯೋಧ ಪ್ರವೀಣ ಜುಗ್ನು ಪೂಜಾರಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಸುಧೀರ ಆಪ್ಟೆ, ಲತಾ ಆಪ್ಟೆ, ಉದಯ, ಸ್ಮಿತಾ, ಕೌಸ್ತುಬ್, ಅರುಣಾ, ರಾಹುಲ, ಪ್ರಾಜಕ್ತಾ, ಶ್ರೇಯಸ, ಶ್ರದ್ಧಾ, ರಿದ್ಧಿ, ರೋಹನ, ಶೀತಲ ಹಾಗೂ ಸುಪ್ರಿಯಾ ಕುಲಕರ್ಣಿ ಕಿರಣ ಕೊಳುರಗಿ, ಪ್ರೇಮ ಕಲಕುಟಗಿ, ಆದಿತ್ಯ ಬಡಿಗೇರ , ವಿಕ್ರಮ ತಾಂಬೇಕರ, ಶ್ರೀಪಾದ ಸಾಳುಂಕೆ, ಪ್ರದೀಪ ಮುಂಜಿ ಪ್ರೀತಿ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌