ಕಾಶಿ ಯಾತ್ರಾರ್ಥಿಗಳ ಮಾದರಿಯಲ್ಲಿ ಅಯ್ಯಪ್ಪಸ್ವಾಮಿ ವ್ರತ ಆಚರಿಸುವ ಮಾಲಾಧಾರಿಗಳೂ ಸರಕಾರ ಸಹಾಯಧನ ನೀಡಲು ಆಗ್ರಹ

ವಿಜಯಪುರ: ರಾಜ್ಯ ಸರಕಾರ ಕಾಶಿ ಯಾತ್ರಾರ್ಥಿಗಳಿಗೆ ನೀಡುವ ಸಹಾಯ ಧನವನ್ನು ಅಯ್ಯಪ್ಪಸ್ವಾಮಿ ವೃತ ಆಚರಿಸುವ ಮಾಲಾಧಾರಿಗಳಿಗೂ ನೀಡಬೇಕು ಎಂದು ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಮುಖಂಡ ದತ್ತಾತ್ರೇಯ ಗುರುಸ್ವಾಮಿಗಳು ಮತ್ತು ವಿಜಯಪುರ ಮಹಾನಗರ ಪಾಲಿಕೆ ಬಿಜೆಪಿ ಸದಸ್ಯ ಶಿವರುದ್ರ ಬಾಗಲಕೋಟ ಆಗ್ರಹಿಸಿದ್ದಾರೆ.

ವಿಜಯಪುರದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ರಾಜ್ಯ ಘಟಕದ ಉಪಾಧ್ಯಕ್ಷ ಸಂಪತಕುಮಾರ್ ಗುರೂಜಿ 2008 ರಲ್ಲಿ ಈ ಸಂಘಟನೆ ಸ್ಥಾಪಿಸಿದರು.  ದಿ. ಶಿವರಾಂ ಗುರುಗಳ ಮಾರ್ಗದರ್ಶನದಲ್ಲಿ ನಂದಿಯಾರ್ ಸ್ವಾಮಿ ಮಾರ್ಗದರ್ಶನದಲ್ಲಿ ದೇಶದ 22 ರಾಜ್ಯದಲ್ಲಿ ಮತ್ತು ರಾಜ್ಯದ 28 ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಧರ್ಮೋ ರಕ್ಷತಿ ರಕ್ಷಿತಹ ಎಂಬ ಧ್ಯೇಯ ವಾಕ್ಯದೊಂದಿಗೆ ಅಯ್ಯಪ್ಪ ಸ್ವಾಮಿ ಪವಿತ್ರ ವ್ರತ ಧಾರಣೆ ಸಂದರ್ಭ ಮತ್ತು ವರ್ಷಪೂರ್ತಿ ದೇಶದ ಪವಿತ್ರ ನದಿಗಳ ಸ್ವಚ್ಛತೆ, ದೇವಸ್ಥಾನಗಳ ಸ್ವಚ್ಛತೆ ,ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡಲಾಗುತ್ತಿದೆ.  ಅಯ್ಯಪ್ಪ ದಾರಿ ವ್ರತ ಆಚರಣೆ ಸಂದರ್ಭದಲ್ಲಿ ಪವಿತ್ರ ಕ್ಷೇತ್ರ ಶಬರಿಮಲೆಗೆ ಹೋಗುವ ಮಾರ್ಗದಲ್ಲಿ ತಮಿಳುನಾಡು, ಕೇರಳ, ನಂಜನಗೂಡು, ಕಾಸರಗೋಡು ಸೇರಿದಂತೆ 160ಕ್ಕೂ ಹೆಚ್ಚು ಸ್ಥಳಗಳಲ್ಲಿ ಮಾಲಾಧಾರಿಗಳಿಗೆ ಅನ್ನಪ್ರಸಾದ, ವಸತಿ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮುಂತಾದ ಸೇವೆಗಳನ್ನು ಮಾಡುತ್ತಿದೆ.  ಅಲ್ಲದೇ, ಜೊತೆಗೆ ಪರಿಸರ ಜಾಗೃತಿ ಗಾಗಿ ಮತ್ತು ಮಾಲಿನ್ಯ ತಡೆಗಟ್ಟಲು ಇರುಮುಡಿಯಲ್ಲಿ ಕಟ್ಟುವಂತ ಪೂಜಾ ಸಾಮಾನುಗಳನ್ನು ಪ್ಲಾಸ್ಟಿಕ್ ಬಳಸದೆ ಬಟ್ಟೆಯ ಚೀಲಗಳನ್ನು ಬಳಸಲು ಕುರಿತು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಶಬರಿಮಲೆ ಪಂಪಾ ನದಿ ಮುಂತಾದ ಪವಿತ್ರ ಕ್ಷೇತ್ರಗಳನ್ನು ಸುತ್ತಮುತ್ತ ಪ್ಲಾಸ್ಟಿಕ್ ಮುಕ್ತ ಮಾಡಲು ಸಂಕಲ್ಪ ದೊಂದಿಗೆ ನಿರಂತರ ಪ್ರಯತ್ನ ಮಾಡುತ್ತಾ ಬಂದಿದ್ದೇವೆ.  2023 ನೇ ವರ್ಷಕ್ಕೆ ಖ್ಯಾತ ಗಾಯಕಿಯರಾದ ಎಸ್. ಜಾನಕಿ ಅವರು ಹಾಡಿರುವ ಹರಿಹರಸನಮ್ ವಿಶ್ವ ಮೋಹನ0 ಹಾಡಿಗೆ ನೂರು ವರ್ಷ ತುಂಬುವುದರಿಂದ ಜನೇವರಿ 2023 ರಿಂದ ಜನೇವರಿ 2024ರ ವರೆಗೆ ಪ್ರತಿ ದಿನ ಆಯಾ ಭಕ್ತರು ಅಷ್ಟಕಮ್ ಪಟ್ಟಣ ಮಾಡಲಿದ್ದಾರೆ.  2024 ಜನೇವರಿ 14 ರಂದು ಸಂ. 6.30 ರಿಂದ 7.30ರ ವರೆಗೆ ದೇಶಾದ್ಯಂತ ಪಠಣ ಮಾಡುವ ಕುರಿತು ಜೊತೆಗೆ ವರ್ಷಪೂರ್ತಿ ನಾನಾ ಕಾರ್ಯಕ್ರಮಗಳನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ದತ್ತಾತ್ರೆಯ ಗುರುಸ್ವಾಮಿಗಳು ಮತ್ತು ಶಿವರುದ್ರ ಬಾಗಲಕೋಟ ತಿಳಿಸಿದರು.

ಈ ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ರಮೇಶ ಮುಧೋಳ, ರಾಹುಲ, ಶಂಕರ, ಪ್ರೇಮಸಿಂಗ್, ನಾಗಠಾಣ, ಜುಮನಾಳ, ಅಥರ್ಗಾ, ಕುಮಾರ, ಸುನಿಲ, ಏಕನಾಥ, ಚಂದ್ರು, ಪರಶುರಾಮ, ವೆಂಕಟೇಶ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌