ಸಿಎಂ, ಸಹಕಾರ ಸಚಿವರನ್ನು ಭೇಟಿ ಮಾಡಿದ ಡಾ. ಎಲ್. ಎಚ್. ಬಿದರಿ ನೇತೃತ್ವದ ವೈದ್ಯರ ನಿಯೋಗ- ಯಶಸ್ವಿನಿ ಯೋಜನೆ ಪ್ಯಾಕೇಜ್ ದರ ಪರಿಷ್ಕರಣೆಗೆ ಆಗ್ರಹ
ಬೆಳಗಾವಿ: ಯಶಸ್ವಿನಿ ಯೋಜನೆಯ ಪ್ಯಾಕೇಜ್ ದರಗಳನ್ನು ಪರಿಷ್ಕರಿಸಬೇಕು ಎಂದು ಆಗ್ರ್ರಹಿಸಿ ಐಎಂಎ ಮತ್ತು ಕೆಪಿಎಂಇಎ ವತಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಹಕಾರ ಸಚಿವ ಎಸ್. ಟಿ. ಸೋಮಶೇಖರ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಯಶಸ್ವಿನಿ ಯೋಜನೆಯ ಮಾಜಿ ಲೈಫ್ ಟ್ರಸ್ಟಿ ಡಾ|| ಎಲ್.ಎಚ್. ಬಿದರಿ, ಯಶಸ್ವಿನಿ ಯೋಜನೆಯ ಪ್ಯಾಕೇಜ್ ದರಗಳನ್ನು ವೈಜ್ಞಾನಿಕವಾಗಿ ಚಿಂತನೆ ಮಾಡಿ, ಚರ್ಚಿಸಿ ಪರಿಷ್ಕರಣೆಗೆ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಯಶಸ್ವಿನಿ […]
ಶೈಕ್ಷಣಿಕ, ಕ್ರೀಡಾ ಚಟುವಟಿಕೆಗಳನ್ನು ಸಮವಾಗಿ ನಿಭಾಯಿಸಿ ವೃತ್ತಿ ಜೀವನ ರೂಪಿಸಿಕೊಳ್ಳಬೇಕು- ಅಂತಾರಾಷ್ಟ್ರೀಯ ಕ್ರೀಡಾಪಟು ಭಾರತಿ ಬಿ. ಎಲ್
ವಿಜಯಪುರ: ಶೈಕ್ಷಣಿಕ ಚಟುವಟಿಕೆಗಳು ಮತ್ತು ಕ್ರೀಡಾ ಚಟುವಟಿಕೆಗಳನ್ನು ಸಮ ಸಮವಾಗಿ ನಿಭಾಯಿಸುವ ಮೂಲಕ ವೃತ್ತಿ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಕರ್ನಾಟಕ ಅಥ್ಲೇಟಿಕ್ಸ್ ಸಂಸ್ಥೆಯ ಉಪಾಧ್ಯಕ್ಷೆ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಪಟು ಭಾರತಿ ಬಿ. ಎಲ್ ಸಲಹೆ ನೀಡಿದರು. ವಿಜಯಪುರ ಜಿಲ್ಲೆಯ ತೊರವಿ ಬಳಿ ಇರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕ್ರೀಡಾಂಗಣದಲ್ಲಿ 16ನೆಯ ಮಹಿಳಾ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ್ ಕ್ರೀಡಾಕೂಟ- 2022 ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡಾಪಟುಗಳು ಕೇವಲ ಕ್ರೀಡಾ ಸಾಧನೆಯಲ್ಲಿಯೇ ಮುಳುಗಿ ಶಿಕ್ಷಣ ನಿರ್ಲಕ್ಷಿಸುವುದು ಸರಿಯಲ್ಲ. ಎರಡರಲ್ಲಿಯೂ […]
ಉತ್ತರ ಕರ್ನಾಟಕದ ವಿಶೇಷ ಹಬ್ಬ ಎಳ್ಳಮವಾಸ್ಯೆ ಚೆರಗಾ ಚೆಲ್ಲಿ ಸಂಭ್ರಮಿಸಿದ ರೈತಾಪಿ ಜನರು
ವಿಜಯಪುರ: ಉತ್ತರ ಕರ್ನಾಟಕದಲ್ಲಿ ಮುಂಗಾರು ಬೆಳೆಗಳನ್ನು ಕಟಾವು ಮಾಡಿ ಭೂಮಿತಾಯಿಗೆ ಅರ್ಪಿಸುವ ಪ್ರಮುಖ ಹಬ್ಬ ಎಳ್ಳ ಅಮವಾಸ್ಯೆ ಆಚರಣೆ ಜೋರಾಗಿ ನಡೆಯಿತು. ಭೂಮಿ ತಾಯಿಗೆ ಸೀಮಂತ ಮಾಡುವ ಹಬ್ಬ ಎಂದೂ ಕರೆಯಲಾಗುವ ಚೆರಗಾ ಚೆಲ್ಲುವ ಕಾರ್ಯಕ್ರಮದ ಅಂಗವಾಗಿ ನಗರ ವಾಸಿಗಳೂ ಕೂಡ ಗ್ರಾಮೀಣ ಭಾಗಕ್ಕೆ ತೆರಳಿ ತಮ್ಮ ಮತ್ತು ತಮ್ಮ ಸಂಬಂಧಿಕರ ಹಾಗೂ ಸ್ನೇಹಿತರ ಹೊಲ ಮತ್ತು ತೋಟಗಳಿಗೆ ಹೋಗಿ ಮೃಷ್ಠಾನ್ನ ಭೋಜನ ಸವಿದು ಸಂಭ್ರಮಿಸಿದರು. ಮುಂಗಾರು ಬೆಳೆಗಳ ಕಟಾವು ಮತ್ತು ಹಿಂಗಾರು ಬೆಳೆಗಳ ಬಿತ್ತನೆ ಸಮಯದಲ್ಲಿ […]
ರೈತನ ಮಗ ವೈದ್ಯನಾಗುವ ಕನಸು ನನಸಾಗಲು ನೆರವಾದ ಎಂ. ಬಿ. ಪಾಟೀಲ- ಎಂಬಿಬಿಎಸ್ ಪ್ರವೇಶಕ್ಕೆ ಆರ್ಥಿಕ ನೆರವು
ವಿಜಯಪುರ: ಬ್ಯಾಂಕ್ ನಿಂದ ಸಾಲವೂ ಸಿಗದೇ, ವೈದ್ಯನಾಗುವ ಕನಸು ಕೈಚೆಲ್ಲಿ ಕುಳಿತಿದ್ದ ಬಡರೈತನ ಮಗನಿಗೆ ಆರ್ಥಿಕ ನೆರವು ನೀಡುವ ಮೂಲಕ ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಮತ್ತೊಮ್ಮೆ ಸಹಾಯ ಹಸ್ತ ಚಾಚಿದ್ದಾರೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಂಗಾಪುರ ಎಸ್.ಎಚ್ ಗ್ರಾಮದ ರಾಹುಲ ಮುರೆಗೇಪ್ಪ ಕುರುಬರ ನೀಟ್ ಪಾಸಾಗಿ ಸರಕಾರಿ ಕೋಟಾದಡಿ ಬೆಂಗಳೂರಿನ ಈಸ್ಟ್ ಪಾಯಿಂಟ್ ಮೆಡಿಕಲ್ ಖಾಸಗಿ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಸೀಟ್ ಪಡೆದಿದ್ದರು. ಆದರೆ, ಪ್ರವೇಶಕ್ಕೆ ಹಣ ಹೊಂದಿಸಲು ಪ್ರಯತ್ನಿಸಿದರೂ […]