ವಿದ್ಯಾರ್ಥಿಗಳು ಓದಿನ ಜೊತೆಗೆ ಕ್ರೀಡೆಗೂ ಮಹತ್ವ ನೀಡಬೇಕು- ಡಾ. ಜಾವೀದ ಜಮಾದಾರ

ವಿಜಯಪುರ: ವಿದ್ಯಾರ್ಥಿಗಳು ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಲು ಕ್ರೀಡೆಗಳು ಅಗತ್ಯವಾಗಿವೆ ಎಂದು ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಡಾ. ಜಾವೀದ ಜಮಾದಾರ ಹೇಳಿದ್ದಾರೆ. 

ವಿಜಯಪುರ ನಗರದ ಪ್ರತಿಷ್ಠಿತ ಛತ್ರಪತಿ ಶಿವಾಜಿ ಮಹಾರಾಜರ ಎಜ್ಯುಕೇಷನ್ ಸೊಸೈಟಿಯ ರವೀಂದ್ರನಾಥ ಠಾಗೋರ್ ಶಾಲಾ ಕಾಲೇಜಿನ ವಾರ್ಷಿಕ ಕ್ರೀಡಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡೆಗಳಲ್ಲಿ ಭಾಗವಹಿಸದ ಕಾರಣ ಮಕ್ಕಳ ದೈಹಿಕ ಬೆಳವಣಿಗೆ ಕುಂಠಿತವಾಗುತ್ತಿದೆ.  ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸಿ ಮೂಲಕ ಹೆಚ್ಚಿನ ಸಾಧನೆ ಮಾಡಿ ಅಂತರರಾಷ್ಟ್ರೀಯ ಮಟ್ಟದ ಕ್ರೀಡೆ ಗಳಲ್ಲಿ ಭಾರತ ಕೀರ್ತಿ ಪತಾಕೆಯನ್ನು ಹಾರಿಸಬೇಕಾಗಿದೆ ಎಂದು ಅವರು ಹೇಳಿದರು.

ಓಲಂಪಿಕ್ಸ್ ಗಳಲ್ಲಿ ಭಾರತ ಕೇವಲ ಒಂದು ಅಥವಾ ಎರಡು ಪದಕಗಳನ್ನು ಗಳಿಸಿದರೆ ನಾವು ಸಂತಸ ಪಡುತ್ತಿದ್ದೇವೆ.  ಆದರೆ, ಆ ಪದಕಗಳ ಸಂಖ್ಯೆ ಇನ್ನೂ ಹೆಚ್ಚಾಗಬೇಕಾದರೆ ಪೋಷಕರೂ ಕೂಡ ತಮ್ಮ ಮಕ್ಕಳು ಶಿಕ್ಷಣದ ಜೊತೆಗೆ ಕ್ರೀಡೆಗಳಲ್ಲಿ ಪಾಲ್ಗೋಳ್ಳಲು ಪ್ರೋತ್ಸಾಹಿಸಬೇಕು.  ಅಲ್ಲದೇ, ಪೋಷಕರೂ ಕೂಡ ದಿನಿನಿತ್ಯ ಒತ್ತಡಗಳಿಂದ ಬಿಡುವು ಮಾಡಿಕೊಂಡು ನಾನಾ ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದು ಡಾ. ಜಾವೀದ ಜಮಾದಾರ ಹೇಳಿದರು.

ರವೀಂದ್ರಾನಥ ಠ್ಯಾಗೋರ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಡದ ಅಂಗವಾಗಿ ತರಲಾದ ಜ್ಯೋತಿಯನ್ನು ಗಣ್ಯರು ಸ್ವೀಕರಿಸಿದರು

ವಿಜಯಪುರ ಮಹಾನಗರ ಪಾಲಿಕೆ ಸದಸ್ಯ ರಾಹುಲ ಜಾಧವ ಮಾತನಾಡಿ, ನನಗೆ ಶಾಲಾ ದಿನಗಳಲ್ಲಿ ಕ್ರಿಕೆಟ್ ಆಟದ ಬಗ್ಗೆ ಆಸಕ್ತಿ ಇತ್ತು ಎಂದು ತಮ್ಮ ವಿದ್ಯಾರ್ಥಿ ಜೀವನದ ಮೆಲಕು ಹಾಕಿದರು.  ಅಲ್ಲದೇ, ವಿದ್ಯಾರ್ಥಿಗಳು ಕ್ರೀಡೆಗಳತ್ತ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಶಾಲಾ ಕ್ರೀಡಾ ವಾರ್ಷಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಂದ ಆಕರ್ಷಕ ಫಥ ಸಂಚಲನ ನಡೆಯಿತು.  ಬಳಿಕ ಪ್ರತಿಜ್ಞಾ ವಿಧಿ ಭೋಧಿಸಲಾಯಿತು.  ವಿದ್ಯಾರ್ಥಿಗಳಿಂದ ಆಕರ್ಷಕ ಮನರಂಜನಾ ಹಾಗೂ ಯೋಗ ಕಾರ್ಯಕ್ರಮಗಳು ನಡೆದವು.

ಈ ಕಾರ್ಯಕ್ರಮದದಲ್ಲಿ ಮಹಾನಗರ ಪಾಲಿಕೆ ಸದಸ್ಯ ಆಸೀಫ್ ಶಾನವಾಲೆ, ರಾಹುಲ ಜಾಧವ, ಉದ್ಯಮಿ ಇರ್ಫಾನ್ ಶ್ಯಾನವಾಲೆ, ಛತ್ರಪತಿ ಶಿವಾಜಿ ಮಹಾರಾಜರ ಎಜ್ಯುಕೇಷನ್ ಸೊಸೈಟಿ ಸಂಸ್ಥಾಪಕ ಅಧ್ಯಕ್ಷ ವಸಂತ ಗಾಯಕವಾಡ, ಅಧ್ಯಕ್ಷ ಶಿವಾಜಿ ಗಾಯಕವಾಡ, ಕಾರ್ಯದರ್ಶಿ ರೀತಾ ಗಾಯಕವಾಡ, ಪ್ರಿನ್ಸಿಪಾಲ್ ಫರೀನಖಾನ್ ಹಾಗೂ ಕಾಲೇಜು ಪ್ರಿನ್ಸಿಪಾಲ ಜಯರಾಮ ಸೇರಿದಂತೆ ಸಂಸ್ಥೆಯ ಪಿ ಆರ್ ಓ ವಿಜಯಕುಮಾರ ಸಾರವಾಡ ಉಪಸ್ಥಿತರಿದ್ದರು.

ಕಾರ್ಯಕ್ರಮದ ಬಳಿಕ ಅತಿಥಿಗಳು ಅಥ್ಲೆಟಿಕ್ಸ್ ಮತ್ತು ವಾಲಿಬಾಲ್ ಪಂದ್ಯಾವಳಿಗಳಲ್ಲಿ ಪಾಲ್ಗೋಂಡು ಗಮನ ಸೆಳೆದರು.

Leave a Reply

ಹೊಸ ಪೋಸ್ಟ್‌