Health Camp: ಜನತೆ ಉಚಿತ ಆರೋಗ್ಯ ತಪಾಸಣೆ ಶಿಬಿರಗಳ ಪ್ರಯೋಜ‌ ಪಡೆಯಬೇಕು- ಬಸನಗೌಡ ಪಾಟೀಲ

ವಿಜಯಪುರ: ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಮುಂಚೂಣಿಯಲ್ಲಿರುವ ಬಿ ಎಲ್ ಡಿ ಆಸ್ಪತ್ರೆ ಜಿಲ್ಲೆಯ ನಾನಾ ಕಡೆಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಬೃಹತ್ ಶಿಬಿರಗಳನ್ನು ಆಯೋಜಿಸುತ್ತಿದೆ. ಇದನ್ನು ಸದುಪಯೋಗ ಪಡಿಸಿಕೊಂಡು ಎಲ್ಲರೂ ಆರೋಗ್ಯವಂತರಾಗಬೇಕು ಎಂದು ಬಿ ಎಲ್ ಡಿ ಇ ಸಂಸ್ಥೆಯ ನಿರ್ದೇಶಕ ಬಸನಗೌಡ(ರಾಹುಲ) ಪಾಟೀಲ ಕರೆ ನೀಡಿದ್ದಾರೆ.

ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಹೊನವಾಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ವತಿಯಿಂದ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಬೃಹತ್ ಶಿಬಿರ ಉದ್ಘಾಟಿಸಿ ಅವರು ಗ್ರಾಮಸ್ಥರೊಂದಿಗೆ ಮಾತನಾಡಿದರು.

ಹೊನವಾಡದಲ್ಲಿ ರಕ್ತದಾನ ಮಾಡಿದವರಿಗೆ ಬಸನಗೌಡ ಪಾಟೀಲ ಪ್ರಮಾಣ ಪತ್ರ ವಿತರಿಸಿದರು

ಈಗ ಮತ್ತೆ ಕೊರೊನಾ ಆತಂಕ ಶುರುವಾಗಿದ್ದು, ಎಲ್ಲರೂ ಸಾಮಾಜಿಕ ಅಂತರ ಕಾಪಾಡಿಕೊಂಡು, ಮಾಸ್ಕ್ ಬಳಸಬೇಕು. ಅಲ್ಲದೇ, ಈ ನಿಟ್ಟಿನಲ್ಲಿ ಜಾರಿಯಾಗಿರುವ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಬೇಕು. ಈ ಮೂಲಕ ಆರೋಗ್ಯಯುತ ಸಮಾಜಕ್ಕೆ ಪೂರಕವಾಗಿ ಕೆಲಸ ಮಾಡಬೇಕು ಎಂದು ಬಸನಗೌಡ ಪಾಟೀಲ ಹೇಳಿದರು.
ಈ ಸಂದರ್ಭದಲ್ಲಿ ಹೊನವಾಡ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಡಾ. ಎಸ್ ಜಿ ಕಿಣಗಿ, ತಾ. ಪಂ. ಮಾಜಿ ಅಧ್ಯಕ್ಷ ಸಿದ್ದು ಬೆಳಗಾವಿ, ಗ್ರಾ. ಪಂ. ಅಧ್ಯಕ್ಷೆ ಅಕ್ಕುತಾಯಿ ಧನಗೊಂಡ, ಸದಸ್ಯರಾದ ಶಂಕರ ಪಡತಾರೆ, ತುಕಾರಾಮ ಧಡಕೆ, ಗ್ರಾಮದ ಮುಖಂಡರಾದ ರಾಜಕುಮಾರ ಚಾವರ, ಮುತ್ತು ಹಿರೇಮಠ, ಸಿದ್ದು ಬೆಳಗಾವಿ, ಬೀರಪ್ಪ ನಿಪ್ಪಾಣಿ, ಸುರೇಶ ಪಾಟೀಲ, ಸಾಬು ಖಂಡೇಕಾರ, ಧರೆಪ್ಪ ಸೊರಡಿ, ಮಾಯಪ್ಪ ಪೂಜಾರಿ, ಸುನೀಲ ತುದಿಗಾಲ, ಶಂಕರ ಪಡತಾರೆ, ನರಸಿಂಹ ಬೋಸಲೆ, ಸುರೇಶ ನರಳೆ, ಸಿದ್ದು ಸಾಲಿಕೇರಿ, ಬಸವರಾಜ ಕಾಳಿ, ಉಮೇಶ ಗುಗಾಡ, ಅರವಿಂದ ಮಾಲಗಾರ ಮುಂತಾದವರು ಉಪಸ್ಥಿತರಿದ್ದರು.

ಶಾಲೆಯ ಮುಖ್ಯ ಶಿಕ್ಷಕ ಶ್ರೀಕಾಂತ ಕುಂಬಾರ ಸ್ವಾಗತಿಸಿದರು. ಈ ಕಾರ್ಯಕ್ರಮದಲ್ಲಿ ಬಸನಗೌಡ ಪಾಟೀಲ ಅವರನ್ನು ಗ್ರಾಮದ ಹಿರಿಯರಾದ ಧರೆಪ್ಪಾ ಸೊರಡಿ, ಗೌರಿಶಂಕರ ಹಿರೇಮಠ ಅವರು ಗ್ರಾಮದ ಪರವಾಗಿ ಸನ್ಮಾನಿಸಿದರು.
ಈ ಶಿಬಿರದಲ್ಲಿ ಬಿ ಎಲ್ ಡಿ ಇ ಆಸ್ಪತ್ರೆಯ ವೈದ್ಯರಾದ ಡಾ. ಕೆ. ಭೀಮಾಶಂಕರ, ಡಾ. ಆಶೀಶ, ಡಾ. ಕೋಣ ಸಾಯಿಶ್ರೀ, ಡಾ. ಪ್ರದೀಪ ಜಾಜು, ಡಾ. ನೇಹಾ ಬಾಬರ, ಡಾ. ಅಂಕಿತಾ ಕುಮಾರಿ, ಡಾ. ಕಿಶಿತಿಝ ರಂಗಾ, ಡಾ. ಲಕ್ಷ್ಣಿ ಸಂಗೊಳ್ಳಿ, ಡಾ. ಪೂಜಾ ಕೆ., ಡಾ. ಅನ್ನಪೂರ್ಣ, ಡಾ. ನಿತಿನ್ ಪಿ. ಎಸ್., ಡಾ. ಮೋಹನ ರಾಜ, ಡಾ. ಸೌರಭ ಶ್ರೀಖಾನೆ, ಡಾ. ಸಂದೀಪ ನಾಯಕ, ಡಾ. ಅಮೃತ ಆನಂದ, ಡಾ. ಸಿ. ಮೊಹಮ್ಮದ ಯಝ್ದಾನ್, ಡಾ. ಎಚ್. ಆರ್. ಬಿಜಾಪುರೆ, ಡಾ. ತೇಡಸ, ಡಾ. ರೋಹಿತ, ಡಾ. ಆಯುಶಿ ಸರ್ಮಾ ಸೇರಿದಂತೆ ನಾನಾ ವೈದ್ಯರು ಶಿಬಿರಕ್ಕೆ ಆಗಮಿಸಿದ ಜನರ ಆರೋಗ್ಯ ತಪಾಸಣೆ ನಡೆಸಿದರು.

ಈ ಶಿಬಿರದಲ್ಲಿ 1080 ಜನರ ಆರೋಗ್ಯ ತಪಾಸಣೆ ನಡೆಸಲಾಯಿತು. ಆರು ಜನರು ರಕ್ತದಾನ ಮಾಡಿದರು.

ಶಿವಣಗಿಯಲ್ಲಿ ಆರೋಗ್ಯ ತಪಾಸಣೆ ಶಿಬಿರ

ಈ ಮಧ್ಯೆ, ಶಿವಣಗಿಯಲ್ಲಿ ಬಿ ಎಲ್ ಡಿ ಇ ಸಂಸ್ಥೆಯ ಎಸ್. ಆರ್. ಮರಿಮಠ ಪ್ರೌಢಶಾಲೆಯಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಬೃಹತ್ ಶಿಬಿರವನ್ನು ಶಾಲೆಯ ಎಸ್ ಡಿ ಎಂ ಸಿ ಉಪಾಧ್ಯಕ್ಷ ಎಸ್. ಎಸ್. ಮರಿಮಠ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಬಿ ಎಲ್ ಡಿ ಇ ಸಂಸ್ಥೆಯ ಅದ್ಯಕ್ಷ ಎಂ. ಬಿ. ಪಾಟೀಲ ಅವರು ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಜಲ, ಶಿಕ್ಷಣ, ವೃಕ್ಷ ಅಭಿಯಾನದ ಜೊತೆಗೆ ಈಗ ಜನರ ಸುಸ್ಥಿರ ಆರೋಗ್ಯದ ಕಡೆಗೂ ಕಾಳಜಿ ವಹಿಸಿದ್ದು, ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ನಡೆಸಿ, ಅನ್ನದಾತರ ಮನೆಬಾಗಿಲಿಗೆ ತಜ್ಞ ವೈದ್ಯರ ಸೇವೆಯನ್ನು ಒದಗಿಸುವ ಮೂಲಕ ಎಲ್ಲರ ಮನಗೆದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಸ್ತ ಗ್ರಾಮಸ್ಥರ ಪರವಾಗಿ ಅವರಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.


ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಎಸ್. ಎನ್. ಅಂತರಗಂಗಿ, ಗ್ರಾ. ಪಂ. ಅಧ್ಯಕ್ಷ ಆರ್. ಆಯ್. ಚಟ್ಟರಕಿ, ಮುಖಂಡರಾದ ಎಂ. ಎಸ್. ಮರಿಮಠ, ವಿವೇಕಾನಂದ ಬಾಗೇವಾಡಿ, ಸಿದ್ದಲಿಂಗ ರಡ್ಡಿ, ಎನ್. ಕೆ. ಬಿರಾದಾರ, ಎನ್. ಎಸ್. ಬಡಿಗೇರ, ರಾಜು ಅಡಳ್ಳಿ, ಬಸು ತೋಟದ ಮತ್ತು ಗ್ರಾಮದ ಹಿರಿಯರು ಉಪಸ್ಥಿತರಿದ್ದರು.
ಈ ಶಿಬಿರದಲ್ಲಿ ಬಿ ಎಲ್ ಡಿ ಇ ಆಸ್ಪತ್ರೆಯ ತಜ್ಞವೈದ್ಯರಾದ ಡಾ. ಅಶೋಕ ನಾಯಕ, ಡಾ. ಎಸ್. ಎಂ. ಬಿರಾದಾರ, ಡಾ. ಅನಿಲ ಸಜ್ಜನ, ಡಾ. ಶೃತಿ ಕುಲಕರ್ಣಿ, ಡಾ. ಅಭಿಜೀತ ದೇವಗೀರಕರ, ಡಾ. ವಾರ್ವತಿ ಡಿ. ಡಿ., ಡಾ. ವಿನೂತಾ ಚಿನಿವಾರ, ಡಾ. ಯು. ಆರ್. ಬಿ. ಶೇಖ ಮತ್ತು ಆಸ್ಪತ್ರೆಯ ಸಿಬ್ಬಂದಿ ಶಿಬಿರಕ್ಕೆ ಆಗಮಿಸಿದ ಜನರ ಆರೋಗ್ಯ ತಪಾಸಣೆ ನಡೆಸಿದರು.

ಈ ಶಿಬಿರದಲ್ಲಿ 805 ಜನರು ಆರೋಗ್ಯ ತಪಾಸಣೆಗೆ ಒಳಗಾದರು. ಅಲ್ಲದೇ, ಓರ್ವ ರಕ್ತದಾನ ಮಾಡಿದರು.

Leave a Reply

ಹೊಸ ಪೋಸ್ಟ್‌