ವಿಜಯಪುರ: ಕನ್ನಡ ದಿನಪತ್ರಿಕೆಗಳು ಸ್ವಾತಂತ್ರ್ಯ ಪೂರ್ವದಿಂದಲೂ ರಾಜ್ಯದಲ್ಲಿ ನಾಗರಿಕತೆಯ ಬೆಳವಣಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿವೆ ಎಂದು ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಸಂಸ್ಥೆಯ ನಿದೇಶಕ ಬಸನಗೌಡ(ರಾಹುಲ) ಎಂ. ಪಾಟೀಲ ಹೇಳಿದ್ದಾರೆ.
ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣದ ವಿರಕ್ತ ಮಠದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕಾನಿಪ ತಿಕೋಟಾ ತಾಲೂಕು ಉದ್ಘಾಟನೆ ಮಾಡಿದುವುದು ಸಂತಸ ತಂದಿದೆ. ನಾನು ಸದಾ ನಿಮ್ಮೊಂದಿಗೆ ಇರುತ್ತೇನೆ. ಪತ್ರಕರ್ತರು ಸಮಾಜಮುಖಿ ಕೆಲಸಗಳ ಮೂಲಕ ತಿಕೋಟಾ ತಾಲೂಕಿನ ಘನತೆಯನ್ನು ಹೆಚ್ಚಿಸಬೇಕು ಎಂದು ಬಸನಗೌಡ ಪಾಟೀಲ ಕರೆ ನೀಡಿದರು.
ಕಾನಿಪ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ ಮಾತನಾಡಿ, ನೂತನ ಪದಾಧಿಕಾರಿಗಳು ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ನ್ಯಾಯೋಚಿತ ವರದಿಗಳನ್ನು ಮಾಡುಬ ಮೂಲಕ ಜಿಲ್ಲೆಯಲ್ಲಿ ಮಾದರಿ ಘಟಕವಾಗಿ ಕೆಲಸ ಮಾಡಬೇಕು. ಜಿಲ್ಲೆಯ ಎಲ್ಲ ತಾಲೂಕು ಘಟಕಗಳಿಗೆ ಚುನಾವಣೆ ನಡೆದಿದೆ. ಆದರೆ, ತಿಕೋಟಾದಲ್ಲಿ ಮಾತ್ರ ಅವಿರೋಧ ಆಯ್ಕೆ ನಡೆದಿರುವುದು ಹೆಚ್ಚು ಸಂತಸ ತಂದಿದೆ ಎಂದು ಹೇಳಿದರು.
ಭಾರತೀಯ ಕಾರ್ಯನಿರತ ಪತ್ರಕರ್ತರ ಪತ್ರಕರ್ತರ ಸಂಘದ ಒಕ್ಕೂಟದ ರಾಷ್ಟ್ರೀಯ ಮಂಡಳಿ ಸದಸ್ಯ ಮಹೇಶ ವಿ. ಶಟಗಾರ ಮಾತನಾಡಿ, ಅಭಿವೃದ್ಧಿ ಪತ್ರಿಕೋದ್ಯಮಕ್ಕೆ ಒತ್ತು ನೀಡಬೇಕು. ಋಣಾತ್ಮಕ ವಿಚಾರಗಳಿಗಿಂತ ಧನಾತ್ಮಕ ಸಂಗತಿಗಳ ಬಗ್ಗೆ ಹೆಚ್ಚು ಬೆಳಕು ಚೆಲ್ಲಬೇಕು ಎಂದು ಹೇಳಿದರು.
ತಿಕೋಟಾ ತಾಲೂಕಿನ ಕಾನಿಪ ಸಂಘದ ನೂತನ ಅಧ್ಯಕ್ಷ ಚಂದ್ರಶೇಖರಯ್ಯ ಹಿರೇಮಠ, ಉಪಾಧ್ಯಕ್ಷ ಸಾತಲಿಂಗಯ್ಯ ಸಾಲಿಮಠ, ಪ್ರಧಾನ ಕಾರ್ಯದರ್ಶಿ ದರೇಪ್ಪ ಸಿದ್ದನಾಥ, ಕಾರ್ಯದದರ್ಶಿ ಸಿದ್ದಲಿಂಗ ಜತ್ತಿ, ಖಜಾಂಚಿ ಲಕ್ಷ್ಮಣ ಕುಲಕರ್ಣಿ, ಕಾರ್ಯಕಾರಿಣಿ ಸದಸ್ಯರಾದ ಸಂಜೀವ ಕಟ್ಟಿ, ನಿಂಗಪ್ಪ ಸಂಗಾಪೂರ, ಸಲೀಮ ಅಥಣಿಕರ, ಎನ್. ವಿ. ಸಜ್ಜನ, ಇಸ್ಮಾಯಲ್ ಮುಲ್ಲಾ ಇವರಿಗೆ ವಿಜಯಪುರ ಜಿಲ್ಲಾ ಉಪಾಧ್ಯಕ್ಷ ಇಂದುಶೇಖರ ಮಣೂರ ಪ್ರತಿಜ್ಞಾವಿಧಿ ಭೋಧಿಸಿದರು.
ಪಟ್ಟಣದ ಹಿರಿಯ ಮುಖಂಡ ರಾಮರಾವ ದೇಸಾಯಿ ಮಾತನಾಡಿದರು,
ತಿಕೋಟಾ ಹಿರೇಮಠದ ಶಿವಬಸವ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಪ. ಪಂ. ಮುಖ್ಯಾಧಿಕಾರಿ ಎಚ್. ಎ. ಡಾಲಾಯತ ಡಿವಿಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಮುಖಂಡರಾದ ಜಗದೀಶಗೌಡ ಪಾಟೀಲ, ಕನಮಡಿ ಜಿ. ಪಂ. ಮಾಜಿ ಸದಸ್ಯ ಸಾಬು ಮಾಶ್ಯಾಳ, ಭೀಮುನಾಟೀಕಾರ, ವಾಮನರಾವ ಸೊಂಡೂರ, ರಾಮರಾವ ದೇಸಾಯಿ,ಬಸಯ್ಯ ವಿಭೂತಿ, ರಾಹುಲ ಆಪ್ಟೆ, ಅವಿನಾಶ ಬಿದರಿ ಉಪಸ್ಥಿತರಿದ್ದರು.
ತಿಕೋಟಾ ಪಟ್ಟಣದ ಹಿರಿಯ ಪತ್ರಕರ್ತ್ರ ಸೋಮಶೇಖರ ಜತ್ತಿ ಯವರಿಗೆ ಸಂಘದ ವತಿಯಿಂದ ಸನ್ಮಾನಿಲಾಯಿತು. ವಿ. ಎಸ್. ಬಂದಿ ನಿರೂಪಿಸಿದರು.