ಜೀವನದ ಪಾಠ ಕಲಿಸಿದ ಗುರುಗಳಿಗೆ ಪಾದಪೂಜೆ ನೆರವೇರಿಸಿ ಧನ್ಯರಾದ ವಿಜಯಪುರ ಜಿಲ್ಲಾಧಿಕಾರಿ, ಸಹಪಾಠಿಗಳು- ಸೈನಿಕ ಶಾಲೆಯಲ್ಲೋಂದು ವಿಶಿಷ್ಠ ಕಾರ್ಯಕ್ರಮ

ವಿಜಯಪುರ: ಸ್ವಲ್ಪ ಅಧಿಕಾರ ಸಿಕ್ಕರೆ ಸಾಕು ಮನೆಯವರನ್ನೇ ಕ್ಯಾರೆ ಎನ್ನದ ಜನ ಹೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಹುದ್ದೆಯಲ್ಲಿದ್ದರೂ ಅದರ ಬಗ್ಗೆ ಯಾವುದೇ ಹಂಗು ಬಿಂಗಿಲ್ಲದೇ ಪಾಠ ಮಾಡಿದ ಗುರುಗಳ ಪಾದಪೂಜೆ ಮಾಡುವ ಮೂಲಕ ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಮತ್ತು ಸಹಪಾಠಿಗಳು ಗಮನ ಸೆಳೆದಿದ್ದಾರೆ. ವಿಜಯಪುರ ಜಿಲ್ಲಾಧಿಕಾರಿಗಳು ಮೂಲತಃ ಗದಗ ಜಿಲ್ಲೆಯವರು.  ಆದರೆ, ಅವರು ಓದಿದ್ದು ಮಾತ್ರ ರಾಜ್ಯದ ಮೊದಲ ಮತ್ತು ದೇಶಕ್ಕೆ ನಾನಾ ಕ್ಷೇತ್ರಗಳಿಗೆ ನೂರಾರು ಅಧಿಕಾರಿಗಳನ್ನು ಹಾಗೂ ರಾಜಕಾರಣಿಗಳನ್ನು ನೀಡಿದ […]

ಇಬ್ರಾಹಿಂಪೂರ ರೇಲ್ವೆ ಮೇಲ್ಸೇತುವೆ ಸಂಚಾರಕ್ಕೆ ಮುಕ್ತ- ಸಂಸದರಿಗೆ ಅಪ್ಪು ಪಟ್ಟಣಶೆಟ್ಟಿ ಕೃತಜ್ಞತೆ ಸಲ್ಲಿಕೆ

ವಿಜಯಪುರ; ವಿಜಯಪುರ ನಗರದ ಇಬ್ರಾಹಿಂಪುರ ರೇಲ್ವೆ ಮೇಲ್ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಮತ್ತು ಕಾರ್ಪೊರೇಟರ್ ಮಳುಗೌಡ ಪಾಟೀಲ ಮುಂತಾದವರು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಇಂದಿನಿಂದ ನಗರದ ಈ ಭಾಗದ ಜನತೆಯ ಸುಗಮ ಸಂಚಾರಕ್ಕೆ ಅನುಕೂಲವಾಗಿದೆ. ಈ ಕಾಮಗಾರಿಗೆ ಕಾರಣರಾದ ಕೇಂದ್ರ ಮಾಜಿ ಸಚಿವ ಮತ್ತು ವಿಜಯಪುರ ಹಾಲಿ ಸಂಸದ ರಮೇಶ ಜಿಗಜಿಣಗಿ ಕಾರಣರಾಗಿದ್ದಾರೆ. ಕಾಮಗಾರಿ ನಾನಾ ಕಾರಣಗಳಿಂದ ವಿಳಂಬವಾಗಿದ್ದರೂ, ಸಂಸದರ ಮುತುವರ್ಜಿಯಿಂದ […]

ಬಸವನಾಡಿನ ಬಾಲಕಿಯರು 15 ವರ್ಷದೊಳಗಿನ ಮಹಿಳೆಯರ ಏಕದಿನ ಕರ್ನಾಟಕ ಕ್ರಿಕೆಟ್ ತಂಡಕ್ಕೆ ಆಯ್ಕೆ

ವಿಜಯಪುರ: ಬಸವ ನಾಡಿನ ಬಾಲಕಿಯರಾದ ಪ್ರಿಯಾ ಎಸ್. ಚವ್ಹಾಣ ಮತ್ರು ಶ್ರೇಯಾ ಎಸ್ ಚವ್ಹಾಣ ರಾಜ್ಯ 15 ವರ್ಷದೊಳಗಿನವರ ಮಹಿಳಾ ಏಕದಿನ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದಾರೆ‌. ಬಿಸಿಸಿಐ ಇತ್ತೀಚೆಗೆ ನಡೆಸಿದ ಆಯ್ಕೆ ಪ್ರಕ್ರಿಯೆಯಲ್ಲಿ ವಿಜಯಪುರ ನಗರದ ಈ ಇಬ್ಬರು ವಿದ್ಯಾರ್ಥಿನಿಯರು ಆಯ್ಕೆಯಾಗುವ ಮೂಲಕ ಬಸವನಾಡಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ‌. ಪ್ರಿಯಾ ಎಸ್. ಚವ್ಹಾಣ ವಿಜಯಪುರ ನಗರದ ಸರಕಾರಿ ಶಾಲೆ ಸಂಖ್ಯೆ 8ರಲ್ಲಿ ಏಳನೇ ತರಗತಿಯಲ್ಲಿ ಓದುತ್ತಿದ್ದು, ಇವರ ತಂದೆ ಬಸ್ ಕಂಡಕ್ಟರ್ ಆಗಿ ಕೆಲಸ […]

Doni Flood: ಡೋಣಿ ನದಿ ಪ್ರವಾಹ ಹಾನಿ- 15 ದಿನಗಳೊಳಗೆ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಸೂಚನೆ

ವಿಜಯಪುರ: ಅವೈಜ್ಞಾನಿಕವಾಗಿ ಡೋಣಿ ನದಿಗೆ ಬ್ರಿಡ್ಜ್ ನಿರ್ಮಿಸಿರುವುದರಿಂದ ಪ್ರತಿವರ್ಷ ಪ್ರವಾಹದಿಂದ ಡೋಣಿ ನದಿ ತೀರದಲ್ಲಿರುವ ಗ್ರಾಮಗಳಿಗೆ ನೀರು ಹರಿದು ಬೆಳೆ ನಾಶವಾಗಿರುವುದರಿಂದ ಪರಿಹಾರ ದೊರಕಿಸುವ ನಿಟ್ಟಿನಲ್ಲಿ 15 ದಿನಗಳೊಳಗೆ ಸರ್ವೇ ಕಾರ್ಯ ನಡೆಸಿ ವರದಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಮಹಾಂತೇಶ ಬಿ. ದಾನಮ್ಮನವರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.  ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಡೋಣಿ ನದಿ ಪಾತ್ರದಲ್ಲಿರುವ ಗ್ರಾಮಗಳಿಗೆ ಪ್ರವಾಹದಿಂದ ಹಾನಿಯಾದ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  ಪ್ರವಾಹದಿಂದ ಡೋಣಿ ಪಾತ್ರದ […]

ದೇಶದಲ್ಲಿ ಶಾಂತಿ, ಸೌಹಾರ್ಧತೆ ಸಂದೇಶ ಸಾರಲು ರಾಜಸ್ಥಾನದಿಂದ ಕನ್ಯಾಕುಮಾರಿಗೆ ಅಬ್ದುಲ್ ಗಫೂರ್ ಸೈಕಲ್ ಯಾತ್ರೆ- 7000 ಕಿ. ಮೀ. ಸಂಚಾರ ಕೈಗೊಂಡಿರುವ ದೇಶಭಕ್ತ

ವಿಜಯಪುರ: ದೇಶದಲ್ಲಿ ಕೋಮು ಸೌಹಾರ್ಧತೆ ಸೂಕ್ಷ್ಮವಾಗಿರುವ ಈ ದಿನಗಳಲ್ಲಿ ಶಾಂತಿ, ಸೌಹಾರ್ಧತೆಯ ಸಂದೇಶ ಸಾರಲು ರಾಜಸ್ತಾನದ ಪೇಂಟರೊಬ್ಬರು ಸೈಕಲ್ ಮೂಲಕ ಭಾರತ ಯಾತ್ರೆ ಕೈಗೊಂಡು ಗಮನ ಸೆಳೆದಿದ್ದಾರೆ. ರಾಜಸ್ತಾನದ ಜೋಧಪುರದ ಸೂರ್ಯನಗರಿಯಿಂದ ಸೈಕಲ್ ಯಾತ್ರೆ ಕೊಗೊಂಡಿರುವ 47 ವರ್ಷದ ಅಬ್ದುಲ್ ಗಫೂರ ಬಸವ ನಾಡು ವಿಜಯಪುರಕ್ಕೆ ಆಗಮಿಸಿದ್ದಾರೆ.  ತಮ್ಮ ಸಂಚಾರದುದ್ದಕೂ ಸಿಗುವ ದರ್ಗಾ, ದೇವಸ್ಥಾನ, ಚರ್ಚಗಳಿಗೆ ಭೇಟಿ ನೀಡುವ ರೂಢಿ ಇಟ್ಟುಕೊಂಡಿರುವ ಅಬ್ದುಲ್ ಗಫೂರ ಗುಮ್ಮಟ ನಗರಿ ವಿಜಯಪುರದ ಹಳೆಯ ಐಬಿಯಲ್ಲಿರುವ ದರ್ಗಾಕ್ಕೆ ಭೇಟಿ ನೀಡಿ ಪ್ರಯಾಣ […]