ಇಬ್ರಾಹಿಂಪೂರ ರೇಲ್ವೆ ಮೇಲ್ಸೇತುವೆ ಸಂಚಾರಕ್ಕೆ ಮುಕ್ತ- ಸಂಸದರಿಗೆ ಅಪ್ಪು ಪಟ್ಟಣಶೆಟ್ಟಿ ಕೃತಜ್ಞತೆ ಸಲ್ಲಿಕೆ

ವಿಜಯಪುರ; ವಿಜಯಪುರ ನಗರದ ಇಬ್ರಾಹಿಂಪುರ ರೇಲ್ವೆ ಮೇಲ್ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ.

ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಮತ್ತು ಕಾರ್ಪೊರೇಟರ್ ಮಳುಗೌಡ ಪಾಟೀಲ ಮುಂತಾದವರು ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಇಂದಿನಿಂದ ನಗರದ ಈ ಭಾಗದ ಜನತೆಯ ಸುಗಮ ಸಂಚಾರಕ್ಕೆ ಅನುಕೂಲವಾಗಿದೆ. ಈ ಕಾಮಗಾರಿಗೆ ಕಾರಣರಾದ ಕೇಂದ್ರ ಮಾಜಿ ಸಚಿವ ಮತ್ತು ವಿಜಯಪುರ ಹಾಲಿ ಸಂಸದ ರಮೇಶ ಜಿಗಜಿಣಗಿ ಕಾರಣರಾಗಿದ್ದಾರೆ. ಕಾಮಗಾರಿ ನಾನಾ ಕಾರಣಗಳಿಂದ ವಿಳಂಬವಾಗಿದ್ದರೂ, ಸಂಸದರ ಮುತುವರ್ಜಿಯಿಂದ ಬೇಗ ಮುಗಿದಿದೆ. ಆದರೂ ಸಹ ಅನೇಕ ಬಾರಿ ಅಧಿಕಾರಿಗಳ ಸಭೆ, ಪರಿಶೀಲನೆ ನಡೆಸಿ ಸಂಸದರು ತಾವು ನೀಡಿದ ಮಾತನ್ನು ಉಳಿಸಿಕೊಂಡು ನಗರದ ಸಂಚಾರ ದಟ್ಟಣೆ ತಪ್ಪಿಸಲು ಮಹತ್ವದ ಕೊಡುಗೆ ನೀಡಿದ್ದಾರೆ. ಬೆಳೆಯುತ್ತಿರುವ ವಿಜಯಪುರ ಮಹಾನಗರ ಸಂಚಾರ ದಟ್ಟಣೆ ತಪ್ಪಿಸುವ ದೃಷ್ಟಿಯಿಂದ ಈ ಮೇಲ್ಸೇತುವೆ ನಿರ್ಮಿಸಿರುವುದು ಮಹತ್ವದ್ದಾಗಿದೆ. ರೈಲ್ವೆ ಕ್ರಾಸಿಂಗ್ ನಿಂದ ಸುಮಾರು ಹೊತ್ತು ವಾಹನ ನಿಲ್ಲುವ ತಾಪತ್ರಯಕ್ಕೆ ಈಗ ಮುಕ್ತಿ ದೊರಕದೆ. ‌ ಕಾಮಗಾರಿಗಾಗಿ‌ ರೂ. 23 ಕೋ. ಅನುದಾನ ಸಿಗಲು ಸಂಸದ ರಮೇಶ ಜಿಗಜಿಣಗಿ ಅವರು ವಿಶೇಷ ಮುತವರ್ಜಿ ವಹಿಸಿರುವುದು ಪ್ರಮುಖ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸಂಸದರಿಗೆ ಹೃತ್ಪೂರ್ವ ಕೃತಜ್ಞತೆ ಸಲ್ಲಿಸುವುದಾಗಿ‌ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ತಿಳಿಸಿದರು.

ಈ ಸಂದರ್ಭದಲ್ಲಿ‌ ಬಿಡಿಎ ಮಾಜಿ‌ ಅಧ್ಯಕ್ಷ ಭೀಮಾಶಂಕರ ಹದನೂರು, ಬಿಜೆಪಿ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಭರತ ಕೋಳಿ, ಪಾಪುಸಿಂಗ್ ರಜಪೂತ, ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾದ ಅಧ್ಯಕ್ಷ ಸೈಯ್ಯದ್ ನಿಡೋಣಿ, ಮಝರ ಇನಾಮದಾರ, ಜಿಲ್ಲಾ ಮಾಧ್ಯಮ ಪ್ರಮುಖ ವಿಜಯ ಜೋಶಿ, ರೈತ ಮೋರ್ಚಾ ನಗರದ ಅಧ್ಯಕ್ಷ ಸಂಪತ ಕೊವಳ್ಳಿ, ಮುಖಂಡರಾದ ರಾಜೇಂದ್ರ ವಾಲಿ.ಲ, ಸಿದ್ದು ಮಲ್ಲಿಕಾರ್ಜುನಮಠ, ಬಸವರಾಜ ತನ್ಶಾಳ, ವಿಕಾಸ ಪದಕಿ, ನವೀನ ಕುಂಬಾರ, ಇಬ್ರಾಹಿಂಪುರ ಬಡಾವಣೆ ನಾಗರಿಕರಾದ ಸಂತೋಷ ಶಹಾಪುರ ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು‌.

Leave a Reply

ಹೊಸ ಪೋಸ್ಟ್‌