ಬಸವನಾಡಿನ ಬಾಲಕಿಯರು 15 ವರ್ಷದೊಳಗಿನ ಮಹಿಳೆಯರ ಏಕದಿನ ಕರ್ನಾಟಕ ಕ್ರಿಕೆಟ್ ತಂಡಕ್ಕೆ ಆಯ್ಕೆ

ವಿಜಯಪುರ: ಬಸವ ನಾಡಿನ ಬಾಲಕಿಯರಾದ ಪ್ರಿಯಾ ಎಸ್. ಚವ್ಹಾಣ ಮತ್ರು ಶ್ರೇಯಾ ಎಸ್ ಚವ್ಹಾಣ ರಾಜ್ಯ 15 ವರ್ಷದೊಳಗಿನವರ ಮಹಿಳಾ ಏಕದಿನ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದಾರೆ‌.

ಬಿಸಿಸಿಐ ಇತ್ತೀಚೆಗೆ ನಡೆಸಿದ ಆಯ್ಕೆ ಪ್ರಕ್ರಿಯೆಯಲ್ಲಿ ವಿಜಯಪುರ ನಗರದ ಈ ಇಬ್ಬರು ವಿದ್ಯಾರ್ಥಿನಿಯರು ಆಯ್ಕೆಯಾಗುವ ಮೂಲಕ ಬಸವನಾಡಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ‌.
ಪ್ರಿಯಾ ಎಸ್. ಚವ್ಹಾಣ ವಿಜಯಪುರ ನಗರದ ಸರಕಾರಿ ಶಾಲೆ ಸಂಖ್ಯೆ 8ರಲ್ಲಿ ಏಳನೇ ತರಗತಿಯಲ್ಲಿ ಓದುತ್ತಿದ್ದು, ಇವರ ತಂದೆ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ.

ಶ್ರೇಯಾ ಎಸ್. ಚವ್ಹಾಣ ನಗರದ ಖಾಸಗಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ಸು, ಇವರ ತಂದೆ ರೇಲ್ವೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಶ್ರೇಯಾ ಚವ್ಹಾಣ, ಪ್ರೀಯಾ ಚವ್ಹಾಣ

ವಿಜಯಪುರ ನಗರದ ಓಂ ಕ್ರಿಕೆಟ್ ಅಕಾಡೆಮಿ ಅಂಡ್ ಸ್ಪೋರ್ಟ್ಸ್ ಅರೆನಾ ಕ್ಲಬ್ ನಲ್ಲಿ ತರಬೇತಿ ಪಡೆಯುತ್ತಿರುವ ಬಾಲಕಿಯರು ಕರ್ನಾಟಕ ತಂಡಕ್ಕೆ ಆಯ್ಕೆಯಾಗುವ ಮೂಲಕ ಗುಮ್ಮಟ ನಗರಿಯ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದ್ದಾರೆ. ಈ ಮೂಲಕ ಡಿ. 27ರಿಂದ ಗುಜರಾತಿನ ರಾಜಕೋಟ್ ನಲ್ಲಿ ನಡೆಯಲಿರುವ 15 ವರ್ಷದೊಳಗಿನ ಮಹಿಳಾ ಕ್ರಿಕೆಟ್ ತಂಡದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ. ಈ ಬಾರಿ ಕರ್ನಾಟಕ ತಂಡ ರಾಜಸ್ಥಾನ, ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ ನಾಗಾಲ್ಯಾಂಡ ಮತ್ತು ಅರುಣಾಚಲ ಪ್ರದೇಶ ವಿರುದ್ಧ ಏಕದಿನ ಪಂದ್ಯಗಳನ್ನು ಆಡಲಿದೆ.

ಓಂ ಕ್ರಿಕೆಟ್ ಅಕ್ಯಾಡೆಮಿ ಅಂಡ್ ಸ್ಪೋರ್ಟ್ಸ್ ಅರೆನಾ ಕ್ಲಬ್ ನಲ್ಲಿ ಕೋಚ್ ಮುರಳಿ ಎಸ್ ಬೀಳಗಿ ಮಾರ್ಗದರ್ಶನದಲ್ಲಿ ಈ ಯುವತಿಯರು ಉತ್ತಮ ಸಾಧನೆ ಮಾಡಿದ್ದಾರೆ. ಇವರ ಕಠಿಣ ಶ್ರಮ ಹಾಗೂ ಆತ್ಮವಿಶ್ವಾಸ ಕರ್ನಾಟಕ ತಂಡಕ್ಕೆ ಆಯ್ಕೆಯಾಗಲು ಕಾರಣವಾಗಿದೆ ಎಂದು ಕ್ಲಬ್ ನ ಕಾರ್ಯದರ್ಶಿ ರಾಜೇಶ ಎನ್. ತೊರವಿ ಸಂತಸ ವ್ಯಕ್ತಪಡಿಸಿದ್ದಾರೆ.

ಅಷ್ಟೇ ಅಲ್ಲ, ಪೋಷಕರು ತಮ್ಮ ಮಕ್ಕಳಿಗೆ ಅವರು ಪ್ರೋತ್ಸಾಹ ನೀಡಿದರೆ ಅವರು ಖಂಡಿತವಾಗಿಯೂ ಉತ್ತಮ ಸಾಧನೆ ಮಾಡಬಲ್ಲರು. ಕರ್ನಾಟಕ ಅಷ್ಟೇ ಅಲ್ಲ,ಭಾರತ ತಂಡಕ್ಕೂ ಆಯ್ಕೆಯಾಗಲಿದ್ದಾರೆ ಎಂದು ಅವರು ರಾಜೇಶ್ ಎನ್. ತೊರವಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ವಿದ್ಯಾರ್ಥಿನಿಯರ ಸಾಧನೆಗೆ ಕ್ರಿಕೆಟ್ ತರಬೇತುದಾರರಾದ ರಾಜು ನಾಗಾನಂದ, ಬಸವರಾಜ ಕಟ್ಟಿ, ಮಹದೇವ ಪಡಸಲಗಿ, ಸುನೀಲ ರಾಠೋಡ, ಮಲ್ಲಿಕಾರ್ಜುನ ಬಿರಾದಾರ, ಮಹೇಶ ಕೋಟ್ಯಾಳಕರ, ಸಂತೋಷ ಮತ್ತಿತರರು ಶುಭ ಕೋರಿದ್ದಾರೆ.

Leave a Reply

ಹೊಸ ಪೋಸ್ಟ್‌