ವಿಜಯಪುರ: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಅವರ ಕಾರ್ಯವೈಖರಿಯನ್ನು ಮೆಚ್ಚಿ ಬಿಜ್ಜರಗಿ, ಅಳಗಿನಾಳ, ಘೋಣಸಗಿ ಗ್ರಾಮಗಳ ನಾನಾ ಸಮಾಜದ ಸುಮಾರು 200 ಜನ ಮುಖಂಡರು ಬಿಜೆಪಿ ತೊರೆದೆ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ.
ಬಿಜ್ಜರಗಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಂ. ಬಿ. ಪಾಟೀಲ ಅವರ ಸಮ್ಮುಖದಲ್ಲಿ ಗಾಣಿಗ ಸಮಾಜ, ಜಂಗಮ ಸಮಾಜ, ಮರಾಠ ಸಮಾಜ, ಭೋವಿ ಸಮಾಜ, ಪಂಚಮಸಾಲಿ ಸಮಾಜ ಹಾಗೂ ತಳವಾರ ಸಮಾಜದ ನೂರಾರು ಜನ ಹಿರಿಯ ಮುಖಂಡರು ಮತ್ತು ಯುವಕರು ಕಾಂಗ್ರೆಸ್ಸಿಗೆ ಸೇರ್ಪಡೆಯಾದರು.
ಬಿಜ್ಜರಗಿ ಗ್ರಾಮದ ಮುಖಂಡರಾದ ಸಿದ್ದರಾಯ ಮಸಳಿ, ಮದಗೊಂಡ ಬಿರಾದಾರ, ರಮೇಶ ಮಸಳಿ, ಸುನೀಲ ಲೋಣಿ, ಅಣ್ಣಪ್ಪ ಕನಮಡಿ, ಬಸವರಾಜ ಬರಗಾಲ, ಸುರೇಶ ಹಾದಿಮನಿ, ಶ್ರೀಶೈಲ ಬರಗಾಲ, ಸುರೇಶ ಬರಗಾಲ, ಸುರೇಶ ಹಾದಿಮನಿ ಸೇರಿದಂತೆ ಒಟ್ಟು 150 ಜನ ಕಾಂಗ್ರೆಸ್ಸಿಗೆ ಸೇರ್ಪಡೆಯಾದರು.
ಇದೇ ವೇಳೆ, ಅಳಗಿನಾಳ ಗ್ರಾಮದ ಕದಂ ಕುಟುಂಬದ ವಿನೋದ ಬಿ. ಕದಂ, ಸಾಗರ ಕದಂ, ಪಾಂಡುರಂಗ ಕದಂ ಸೇರಿದಂತೆ 25 ಜನರು ಹಾಗೂ ಘೋಣಸಗಿ ಗ್ರಾಮದ ಹಾಲುಮತ ಸಮಾಜದ ಅಪ್ಪಾಶಿ ಸೊರಡಿ ಅವರು ಸೇರಿದಂತೆ 25ಕ್ಕೂ ಹೆಚ್ಚು ಜನ ಬಿಜೆಪಿ ತೊರೆದು ಕಾಂಗ್ರೆಸ್ಸಿಗೆ ಸೇರ್ಪಡೆಯಾದರು.
ನಾನಾ ಸಮುದಾಯದ ಮುಖಂಡರನ್ನು ಕಾಂಗ್ರೆಸ್ಸಿಗೆ ಬರಮಾಡಿಕೊಂಡ ಎಂ. ಬಿ. ಪಾಟೀಲ ಅವರು, ಎಲ್ಲ ಕಾರ್ಯಕರ್ತರು ಒಂದೇ ಕುಟುಂಬದಂತೆ ಕೆಲಸ ಮಾಡುತ್ತ ಪಕ್ಷವನ್ನು ಮತ್ತಷ್ಟು ಬಲಪಡಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಾನಾ ಮುಖಂಡರು, ಎಂ. ಬಿ. ಪಾಟೀಲರು ಯಾರೂ ಊಹಿಸದ ರೀತಿಯಲ್ಲಿ ನಮ್ಮ ಭಾಗದಲ್ಲಿ ನೀರಾವರಿ ಯೋಜನೆಗಳ ಮೂಲಕ ಅಭಿವೃದ್ಧಿ ಮಾಡಿದ್ದಾರೆ. ಸಜ್ಜೆ ಬೆಳೆ ಬೆಳೆಯಲು ಪರದಾಡುತ್ತಿದ್ದ ರೈತರು ಈಗ ದ್ರಾಕ್ಷಿ ಬೆಳೆಯುವಂತೆ ಮಾಡಿದ್ದಾರೆ. ನಮ್ಮೆಲ್ಲರ ಸಮಸ್ಯೆಗಳನ್ನು ಅರಿತುಕೊಂಡು ಆರ್ಥಿಕವಾಗಿ ಸಬಲರಾಗಲು ಕಾರಣರಾಗಿದ್ದಾರೆ. ಅಷ್ಟೇ ಅಲ್ಲ, ಸದಾ ನಮ್ಮ ಹಿತ ಬಯಸುವ ಎಂ. ಬಿ. ಪಾಟೀಲ ಅವರ ನಾಯಕತ್ವ ಮೆಚ್ಚಿ ಅವರ ಕೈ ಬಲಪಡಿಸಲು ಎಲ್ಲ ಸಮಾಜದ ಮುಖಂಡರು ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿರುವುದಾಗಿ ಸಂತಸ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಎ. ಎಂ. ಪಾಟೀಲ, ಜಿ. ಎಂ. ಪಾಟೀಲ, ಎಸ್. ಕೆ. ಚಿನಗುಂಡಿ, ಎಂ. ಎಸ್. ಲೋಣಿ, ಮಲ್ಲಿಕಾರ್ಜುನ ಗುಣಕಿ, ಸುಭಾಷಗೌಡ ಪಾಟೀಲ, ಮೆಹಬೂಬ ಜತ್ತಿ, ಬಸವರಾಜ ನಿಡೋಣಿ, ಸೋಮನಿಂಗ ಚಿಂತಾಮಣಿ, ಸಿದ್ದು ಪೂಜಾರಿ ಉಪಸ್ಥಿತರಿದ್ದರು.