ಪಂಚಮಸಾಲಿ ಮೀಸಲಾತಿ ವಿಚಾರ: ಪರ, ವಿರೋಧ ಕುರಿತು ಯಾವುದೇ ಹೇಳಿಕೆ ನೀಡದಂತೆ ಬಿಜೆಪಿ ಹೈಕಮಾಂಡ್ ಯತ್ನಾಳ ಬಾಯಿ ಮುಚ್ಚಿಸಿದೆ- ಡಿ. ಕೆ. ಶಿವಕುಮಾರ ಆರೋಪ

ವಿಜಯಪುರ: ಪಂಚಮಸಾಲಿಗಳಿಗೆ ಮೀಸಲಾತಿ ನೀಡುವ ವಿಚಾರದಲ್ಲಿ ಏನಾದರೂ ಮಾತನಾಡಿದರೆ ಪಕ್ಷದಿಂದ ಉಚ್ಛಾಟಿಸುವುದಾಗಿ ಬಿಜೆಪಿ ಹೈಕಮಾಂಡ ಎಚ್ಚರಿಕೆ ನೀಡಿ ಅವರ ಬಾಯಿ ಮುಚ್ಚಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ ಆರೋಪಿಸಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸರಕಾರ ಹೊರದಾಗಿ ಘೋಷಿಸಿರುವ ಮೀಸಲಾತಿ ವಿಚಾರ ಕುರಿತು ಖಾರವಾಗಿ ಪ್ರತಿಕ್ರಿಯೆ ನೀಡಿದರು.

ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಬಾಯಿ ಮುಚ್ಚಿಸಿದೆ.  ಏನಾದ್ರೂ ಬಾಯಿ ತೆಗೆದರೆ ಪಾರ್ಟಿಯಿಂದ ಕಿತ್ತಾಕಿ ಬಿಡುತ್ತೇವೆ ಎಂದು ಯತ್ನಾಳಗೆ ಹೇಳಿದ್ದಾರಂತೆ.  ಹೀಗಾಗಿ ಮೀಸಲಾತಿ ವಿಚಾರದಲ್ಲಿ ಯತ್ನಾಳ‌ ಉಸಿರೇ ಇಲ್ಲ.  ಈ ವಿಚಾರದಲ್ಲಿ ಈಗ ಸ್ಟೇಟ್ಮೆಂಟ್ ಕೊಡಲು ಯತ್ನಾಳಗೆ ಕೇಳಿ.  ಮೀಸಲಾತಿ ವಿಚಾರದಲ್ಲಿ ಯತ್ನಾಳ ಬೆಂಬಲವನ್ನಾದರೂ ನೀಡಬೇಕು ಅಥವಾ ವಿರೋಧವನ್ನಾದರೂ ಕೊಡಬೇಕು.  ಯತ್ನಾಳ‌ ಯಾಕೆ ಬಾಯಿ ಮುಚ್ಚಿಕೊಂಡು ಕೂತಿದ್ದಾರೆ? ಅಷ್ಟೆಲ್ಲ ಮಾತನಾಡುತ್ತಿದ್ದ ಯತ್ನಾಳ ಈಗ ಯಾಕೆ ಮಾತನಾಡುತ್ತಿಲ್ಲ ಎಂದು ಡಿ. ಕೆ. ಶಿವಕುಮಾರ ಪ್ರಶ್ನೆ ಮಾಡಿದರು.

ಇದೇ ವಿಚಾರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಯಾಕೆ ಪ್ರೆಸ್ ಮೀಟ್ ಮಾಡಲಿಲ್ಲ? ಈ‌ ಮೀಸಲಾತಿಯನ್ನು ಯಾರು ಒಪ್ಪಲು ಸಾಧ್ಯವಿಲ್ಲ.  ಈ ಚಾಕಲೇಟು ಅದು ಎಲ್ಲ ಬರಿಯಲ್ಲಾ ಬರೀ ಮೋಸ.  ಇದೆಲ್ಲ ಬರೀ ಮೋಸ.  ಟೋಪಿ ಹಾಕಿದ್ದರು.  ಟೋಪಿ ತೆಗೆದು ಈಚೆ ಇಡಬಹುದಿತ್ತು.  ಎಲ್ಲಾ ಸಮಾಜಕ್ಕೂ ಇದು ಬ್ರಹ್ಮಾಂಡ ಮೋಸ ಮಾಡಿದಂತಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷರು ವಾಗ್ದಾಳಿ ನಡೆಸಿದರು.

ಪಂಚಮಸಾಲಿ ಅವರ ಬೇಡಿಕೆಯನ್ನು ಈಡೇರಿಸಬೇಕಿತ್ತು.  ಎಸ್ಸಿ ಮತ್ತು ಎಸ್ಟಿ ಮೀಸಲಾತಿ ಹೆಚ್ಚಿಸಿದ್ದಾರೆ.  ಆದರೆ, ಪಾರ್ಲಿಮೆಂಟ್ ನಲ್ಲಿ ತೆಗೆದುಕೊಂಡು ನೈನ್ತ್ ಷೆಡ್ಯೂಲ್ ನಲ್ಲಿ ಸೇರಿಸಬೇಕಿತ್ತು.  ಇಲ್ಲಿಯವರೆಗೂ ಕೇಂದ್ರ ಸರಕಾರಕ್ಕೆ ಕಾಗದಗಳು ಸಲ್ಲಿಕೆಯಾಗಿಲ್ಲ. ಯಾರಿಗೂ ಅವಕಾಶ ಸಿಗದೆ ಇರಲಿ ಎಂದುಕೊಂಡು ಪ್ರತಿಯೊಂದುನ್ನು ಕಾನೂನು ವಿಚಾರದಲ್ಲಿ ತೊಡಕು ಹಾಕಿಕೊಂಡಿದ್ದಾರೆ.  ಇದು ರಾಜಕೀಯವಾಗಿ ಹೆದರಿಕೊಂಡು ಮಾಡಿದ ಒಂದು ತೀರ್ಮಾನವಾಗಿದೆ.  ನಾವೆಲ್ಲ ನಾಯಕರು ಹೈಕಮಾಂಡ್ ಜೊತೆ ಚರ್ಚೆ ಮಾಡಿ ಲಿಟಲ್ ಸ್ಟಡಿ ಮಾಡಿ ಮುಂದಿನ ದಿನಗಳಲ್ಲಿ ಸಂಪೂರ್ಣ ವಿಚಾರ ಬಿಚ್ಚಿಡುತ್ತೇವೆ ಎಂದು ಡಿ. ಕೆ. ಶಿವಕುಮಾರ ತಿಳಿಸಿದರು.

ಮುಸ್ಲಿಂ ಸಮುದಾಯದ ಮೀಸಲಾತಿಯನ್ನು ಕಡಿತ ಮಾಡಿ ವಿಚಾರ

ಮುಸ್ಲಿಂ ಮೀಸಲಾತಿಯನ್ನು ಕಡಿತ ಮಾಡಿ ಆ ಮೀಸಲಾತಿಯನ್ನು ಇಲ್ಲಿ ಸರಿ ಮಾಡಲಾಗುತ್ತಿದೆ ಎಂಬ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಹಾಯ ಮಾಡಿದವರಿಗೆ ಅವರ ಜೊತೆ ಗುರುತಿಸಿದ ಜನರಿಗೆ ಮೋಸ ಮಾಡಿದ್ದಾರೆ.  ಇನ್ನು ಮುಸ್ಲಿಂ ಸಮಾಜದವರನ್ನು ಬಿಡುತ್ತಾರಾ ಎಂದು ಅವರು ಟಾಂಗ್ ನೀಡಿದರು.

ಎಲ್ಲರಿಗೂ ಹಂಡ್ರೆಡ್ ಪರ್ಸೆಂಟ್ ಮೀಸಲಾತಿ ಕೊಡಲಾಗುವುದಿಲ್ಲ ಎಂದು ಸಚಿವ ನಿರಾಣಿ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಮೇಲಿನಂತೆ ಖಾರವಾಗಿ ಪ್ರತಿಕ್ರಿಯೆ ನೀಡಿದರು.

ವಿಜಯಪುರ ನಗರದಲ್ಲಿ ‌ಕಾಂಗ್ರೆಸ್ಸಿನಿಂದ ‌ನಿನ್ನೆ ನಡೆದ ಕೃಷ್ಣಾ ಜಲಾಂದೋಲನ ಸಮಾವೇಶ ಕುರಿತು ಪ್ರತಿಕ್ರಿಯೆ ನೀಡಿದ ಡಿ. ಕೆ. ಶಿವಕುಮಾರ, ಅದು ಭರ್ಜರಿ ಸಮಾವೇಶ ಅಲ್ಲ.  ಅದು ಜನರ ಅಭಿಪ್ರಾಯ.  ಪ್ರಜೆಗಳ ಧ್ವನಿಯದು.  ಜನರು ತಾಳ್ಮೆಯಿಂದ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 8 ಗಂಟೆಯವರೆಗೂ ಕಾಯ್ದು ಕುಳಿತು ಸಮಾವೇಶದಲ್ಲಿ ಭಾಗಿಯಾಗಿದ್ದಾರೆ.  ಈ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಅವರ ಅಕ್ರೋಶವನ್ನು‌ ವ್ಯಕ್ತಪಡಿಸಿದ್ದಾರೆ.  ಬಿಜೆಪಿಯವರು ಮಾಡಿದ ಅನ್ಯಾಯದ ವಿರುದ್ಧ ಪ್ರತಿಭಟಿಸಿದ್ದಾರೆ ಎಂದು ಅವರು ಹೇಳಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಪ್ರವಾಸ ವಿಚಾರ

ಕೇಂದ್ರ ಗೃಹ ಸಚಿವ ಅಮಿತ ಶಾ ಪ್ರವಾಸದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಅಧಿಕಾರ ಇದ್ದಾಗ ಏನೂ ಮಾಡಲು ಆಗದೆ ಈಗ, ಅಧಿಕಾರ ಹೋಗುವ ಟೈಮಿನಲ್ಲಿ ಯಾವ ಘೋಷಣೆ ಮಾಡಿದರೆ ಏನು ಸುಖ ಪ್ರಯೋಜನ? ಅಧಿಕಾರ ಇನ್ನು ಕೇವಲ 100 ದಿನ ಇದೆ.  ಯಾವುದಾದರೂ ಘೋಷಣೆಯನ್ನು ಇಂಪ್ಲಿಮೆಂಟ್ ಮಾಡೋಕಾಗುತ್ತಾ ಎಂದು ಪ್ರಶ್ನಿಸಿದರು.

ಇದೆಲ್ಲ ಬರೀ ಪೇಪರ್ ಅಷ್ಟೇ.  ಎಲೆಕ್ಷನ್ ಟೈಮಲ್ಲಿ ಆಶ್ವಾಸನೆ ಕೊಡಲಿಕ್ಕೆ ಹೋಗುತ್ತಿದ್ದಾರೆ.  ನಾವು ಹಾಗಲ್ಲ.  ನಾವು ಮುಂದೆ ಏನು ಮಾಡುತ್ತೇವೆ ಎಂದು ಹೇಳುತ್ತೇವೆ.  ಬಿಜೆಪಿಯವರು ತಮ್ಮ ಪ್ರಣಾಳಿಕೆಯಲ್ಲಿ 600 ಭರವಸೆಗಳನ್ನು ನೀಡಿ ಕೇವಲ ಐವತ್ತು ಭರವಸೆಗಳನ್ನು ಮಾತ್ರ ಈಡೇರಿಸಿದ್ದಾರೆ.  ನಾವು 169 ಭರವಸೆಗಳನ್ನು ನೀಡಿದ್ದೇವು.  ಅದರಲ್ಲಿ 165 ಭರವಸೆಗಳನ್ನ ಈಡೇರಿಸಿದ್ದೇವೆ ಎಂದು ಅವರು ಹೇಳಿದರು.

ಒಕ್ಕಲಿಗರಿಗೆ 2ಸಿ ಲಿಂಗಾಯತರಿಗೆ 2ಡಿ ಮೀಸಲಾತಿ ಘೋಷಣೆ ವಿಚಾರ

ಒಕ್ಕಲಿಗರಿಗೆ 2ಸಿ ಲಿಂಗಾಯತರಿಗೆ 2ಡಿ ಮೀಸಲಾತಿ ಘೋಷಣೆ ವಿಚಾರ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಮೀಸಲಾತಿ ಘೋಷಣೆ ಸರಕಾರದ ಜಾಣ‌ ನಡೆಯಲ್ಲ.  ನಾವೇನು ಶಾಲಾ ಮಕ್ಕಳು ಎಂದು ತಿಳಿದುಕೊಂಡಿದ್ದಾರೆ.  ಇದು ಯಾರಿಗೆ ಅನುಕೂಲ? ಹೇಗೆ ತೆಗೆದು ಹಾಕಲಾಗುತ್ತದೆ? ಶೇ. 10 ಮೀಸಲಾತಿರುವ ಒಬಿಸಿ ಕೆಟಗರಿಯಿಂದ ಹೇಗೆ ತೆಗೆದು ಹಾಕಲಾಗುತ್ತದೆ? ಓಬಿಸಿಯಿಂದ ತೆಗೆದರೆ ಅವರ ಭವಿಷ್ಯ ಏನಾಗಬೇಕು ಎಂದು ಪ್ರಶ್ನಿಸಿದರು.

ಏನಾದರೂ ಮಾಡಿದರೆ ಸಂವಿಧಾನ ಬದ್ದ ಕಾನೂನು ಬದ್ಧವಾಗಿ ಮಾಡಬೇಕು.  ಇದೇ ಮೀಸಲಾತಿ ಕುರಿತು ಆಯಾ ಸಮಾಜದ ಮುಖಂಡರಿಂದ ಹೇಳಿಸಿ ನೋಡೋಣ.  ಮೂರು ತಿಂಗಳು ಆದ ನಂತರ ಎಷ್ಟು ಪರ್ಸೆಂಟ್ ಮೀಸಲಾತಿ ಎಂಬುದನ್ನು ತೀರ್ಮಾನ ಮಾಡುತ್ತಾರಂತೆ.  ಇಂದು ಒಕ್ಕಲಿಗ ಹಾಗು ಲಿಂಗಾಯತ ಸಮಾಜಕ್ಕೆ ಮೋಸ ಮಾಡುವಂಥದ್ದು.  ಯಾವ ಸಮಾಜಕ್ಕೂ ಬಿಜೆಪಿಯವರು ನ್ಯಾಯ ಒದಗಿಸಿ ಕೊಟ್ಟಿಲ್ಲ.  ಎಲ್ಲರಿಗೂ ಸಮಬಾಳು ಸಮ ಪಾಲು ಎಂದು ನಾವು ಹೇಳುತ್ತೇವೆ.  ಒಕ್ಕಲಿಗ ಸಮುದಾಯಕ್ಕೆ ಶೇ. 12 ಮೀಸಲಾತಿ ಕೇಳಿದ್ದೇವೆ.  ಅವರು ಶೇ. 12 ಮೀಸಲಾತಿ ಕೊಡಬೇಕಿತ್ತು ಎಂದು ಅವರು ಹೇಳಿದರು.

ಹೊಸ ವರ್ಷಾಚರಣೆ ವಿಚಾರ

2023 ಹೊಸ ಪರ್ವ ಬದಲಾವಣೆ ಆಗುತ್ತದೆ.  ಈ‌ ದೇಶಕ್ಕೆ ಸ್ವಾತಂತ್ಯ ‌ತಂದುಕೊಟ್ಟಂಥ ಇತಿಹಾಸದ ಹಿನ್ನಲೆಯಲ್ಲಿ 2023 ಕ್ಕೆ ಕಾಂಗ್ರೆಸ್ ಪಕ್ಷ ತನ್ನ ಕಾಲ ಮೇಲೆ ತಾನು ನಿಲ್ಲುತ್ತದೆ.  ತನ್ನದೇ ಆದ ಕಾಲುಗಳ ಮೇಲೆ ನಿಂತುಕೊಂಡು ಈ ವರ್ಷ ಸರ್ಕಾರ ರಚನೆ ಮಾಡುತ್ತದೆ

ಜನತೆ ಆಶೀರ್ವಾದ ಮಾಡುತ್ತಾರೆ.  ಜನರ ದ್ವನಿ.  ಪ್ರಜಾ ಧ್ವನಿ.  ನಿಮ್ಮ‌ ಧ್ವನಿ ಎಲ್ಲಾ ಸೇರಿಕೊಳ್ಳುತ್ತದೆ ಎಂದು ಡಿ. ಕೆ. ಶಿವಕುಮಾರ ಹೇಳಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಮುಖಂಡೆ ಕಾಂತಾ ನಾಯಕ ಮತ್ತೀತರರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌