ಶ್ರೀಗಳ ಅಂತಿಮ ದರ್ಶನ, ಅಂತಿಮ ಯಾತ್ರೆ, ಅಂತ್ಯಕ್ರಿಯೆ ಶಾಂತಿಯುತವಾಗಿ ನಡೆಸಲು ಸಹಕರಿಸಿ- ಸಿಎಂ ಬಸವರಾಜ ಬೊಮ್ಮಾಯಿ ಮನವಿ- ಜಿಲ್ಲಾಡಳಿತ ಕಾರ್ಯಕ್ಕೆ ಮೆಚ್ಚುಗೆ
ವಿಜಯಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಬಸವನಾಡು ವಿಜಯಪುರಕ್ಕೆ ಆಗಮಿಸಿ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಅಂತಿಮ ದರ್ಶನ ಪಡೆದಿದ್ದಾರೆ. ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಅಡಿದಾಳಗಳಲ್ಲಿ ನಮಸ್ಕರಿಸಿ, ಇಲ್ಲಿ ನೆರೆದ ಎಲ್ಲ ಪರಮಪೂಜ್ಯರು ಮತ್ತು ಎಲ್ಲ ಮುಖಂಡರಲ್ಲಿ ನಮಸ್ಕರಿಸಿ, ಅಪಾರ ಸಂಖ್ಯೆಯಲ್ಲಿ ಬಂದಿರುವ ಭಕ್ತಾದಿಗಳಲ್ಲಿ ಒಂದು ಮನವಿ ಮಾಡು್ತತಿದ್ದೇೆ. ಇವತ್ತು ದೊಡ್ಡ ಸಂಖ್ಯೆಯಲ್ಲಿ ಭಕ್ತಾದಿಗಳು ಹರಿದು […]
ಶುದ್ಧ ಮನಸ್ಸು, ಶ್ವೇತ ಬಟ್ಟೆ, ಜ್ಞಾನ ದಾಸೋಹದ ಮೂಲಕ ಜನಮನದಲ್ಲಿ ಶಾಶ್ವತವಾಗಿ ನೆಲೆಸಿದ ವಿಶ್ವಶ್ರೇಷ್ಠ ಸಂತ ಶ್ರೀ ಸಿದ್ಧೇಶ್ವರ ಸ್ವಾಮೀಜಿ
ಮಹೇಶ ವಿ. ಶಟಗಾರ ವಿಜಯಪುರ: ಶುದ್ಧ ಮನಸ್ಸು, ಶ್ವೇತ ಬಟ್ಟೆ, ಸುಂದರ ಸಂದೇಶಗಳನ್ನು ಜ್ಞಾನದಾಸೋಹದ ಮೂಲಕ ಭಕ್ತರಿಗೆ ಉಣಬಡಿಸಿ ಜಾಗೃತಿ ಮೂಡಿಸಿದವರು ನಡೆದಾಡುವ ದೇವರೆಂದೆ ಹೆಸರಾಗಿದ್ದ ಬಸವನಾಡಿನ ಸಂತ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು. ಪಾಲಿಸಿಕೊಂಡು ಬಂದ ತತ್ವಗಳು, ನುಡಿದಿದ್ದಕ್ಕಿಂತಲೂ ಹೆಚ್ಚಾಗಿ ಮಾದರಿ ಜೀವನ ಸಾಗಿಸಿ ಇತರರಿಗೂ ಸ್ಪೂರ್ತಿಯಾಗಿರುವ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಭಕ್ತರು ಭಾರತವಷ್ಟೇ ಅಲ್ಲ, ಸಾಗರದಾಚೆಯ ವಿದೇಶಗಳಲ್ಲಿಯೂ ಇದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ, ಪರ್ಶಿಯನ್ ಸೇರಿದಂತೆ ಬಹುಭಾಷೆಗಳನ್ನು ಬಲ್ಲವರಾಗಿದ್ದ ಇವರು ಈ ಎಲ್ಲ ಭಾಷೆಗಳಲ್ಲಿ […]
ಶತಮಾನದ ಸಂತನ ಕುರಿತು ವೈದ್ಯೆ ಡಾ. ವಿದ್ಯಾ ಪಾಟೀಲ ರಚಿಸಿದ ಕವನ
ವಿಜಯಪುರ: ನಡೆ, ನುಡಿ ಮೂಲಕ ಜನಮನಗೆದ್ದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಬಸವನಾಡು ವಿಜಯಪುರವಷ್ಟೇ ಅಲ್ಲ, ಇಡೀ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ನಾನಾ ರಾಜ್ಯಗಳು ಹಾಗೂ ವಿದೇಶಗಳಲ್ಲಿಯೂ ಅಪಾರ ಭಕ್ತರನ್ನು ಹೊಂದಿದ್ದಾರೆ. ಸ್ವಾಮೀಜಿಗಳ ಜೊತೆ ಬಾಲ್ಯದಿಂದಲೆ ಒಡನಾಟ ಹೊಂದಿರುವ ವೈದ್ಯ ಡಾ. ವಿದ್ಯಾ ಪಾಟೀಲ ತಾವು ಶ್ರೀಗಳಲ್ಲಿ ಕಂಡ ಗುಣಗಳನ್ನು ಲೇಖನಿಯ ಮೂಲಕ ಪ್ರಸ್ತುತ ಪಡಿಸಿದ್ದಾರೆ. ಅವರು ರಚಿಸಿರುವ ಕವನ ಇಲ್ಲಿದೆ. ನಮ್ಮ ಸಿದ್ಧೇಶ್ವರ ಅಪ್ಪಗೋಳ್ ನಮ್ಮ ಸಿದ್ಧೇಶ್ವರ ಅಪಗೊಳ್ ನೀರೇಷ್ಟು ನಿಷ್ಕಲ್ಮಶ? ಅದಕ್ಕಿಂತಲೂ ನಿಷ್ಕಲ್ಮಶ ನಮ್ಮ ಸಿದ್ಧೇಶ್ವರ […]
ಸಿದ್ದೇಶ್ವರ ಶ್ರೀ ಗಳ ಅಂತ್ಯಕ್ರಿಯೆಗೆ ಶಾಂತಿಯಿಂದ ಸಹಕರಿಸಿ- ಸಿಎಂ ಬಸವರಾಜ ಬೊಮ್ಮಾಯಿ ಮನವಿ
ಬೆಂಗಳೂರು: ಸೋಮವಾರ ನಿಧನರಾದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಎಲ್ಲಾ ಭಕ್ತರು ಶಾಂತಿ, ಸಂಯಮ ಹಾಗೂ ಶಿಸ್ತಿನಿಂದ ದರ್ಶನ ಪಡೆದು ಅಂತ್ಯಕ್ರಿಯೆಗೆ ಸಹರಿಸಬೇಕೆಂದು ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ. ಅವರು ಬೆಂಗಳೂರಿನಲ್ಲಿ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು. ವಿಜಯಪುರ ಜಿಲ್ಲಾಡಳಿತ, ಎಲ್ಲಾ ಜನಪ್ರತಿನಿಧಿಗಳು, ಮುಖಂಡರಾದ ಎಂ.ಬಿ.ಪಾಟೀಲ್, ಬಸನಗೌಡರು, ಶಾಸಕರು ಎಲ್ಲರೂ ಅಚ್ಚುಕಟ್ಟಾಗಿ ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನ ಕ್ಕೆ ವ್ಯವಸ್ಥೆ ಕಲ್ಪಿಸಿದ್ದಾರೆ ಎಂದರು. ಸಿದ್ದೇಶ್ವರ ಶ್ರೀಗಳು ಒಂದು ಸಂಸ್ಕೃತಿ ಯನ್ನೇ ಬಿಟ್ಟುಹೋಗಿದ್ದಾರೆ ವಿಜಯಪುರದ ಜನ ದೊಡ್ಡ ಪ್ರಮಾಣದಲ್ಲಿ […]
ಬಸನನಾಡಿನ ನಡೆದಾಡುವ ದೇವರ ಧ್ಯಾನ ಚಿತ್ರ ಸಂಯೋಜನೆ ಮಾಡಿದ ಖ್ಯಾತ ವ್ಯಂಗ್ಯಚಿತ್ರ ಕಲಾವಿದ ಶರಣು ಚೆಟ್ಟಿ
ವಿಜಯಪುರ: ಬಸವನಾಡಿನ ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮಿ ಎಂದರೆ ಸಾಕು ಧ್ಯಾನ ಮತ್ತು ಧ್ಯಾನದಿಂದಾಗುವ ಲಾಭಗಳನ್ನು ಭಕ್ತರಿಗೆ ದಾಸೋಹ ಮಾಡಿದರವರು. ಅವರಿಗೆ ಬಾಲ್ಯದಲ್ಲಿಯೇ ದೈವದತ್ತವಾಗಿ ಬಂದಿದ್ದ ಧ್ಯಾನ ಮತ್ತು ಈಗ ಅಂತಿಮ ದರ್ಶನದ ಸಂದರ್ಭದಲ್ಲಿ ಅವರು ಧ್ಯಾನ ಮಾಡುವ ರೀತಿಯಲ್ಲಿಯೇ ಭಕ್ತರು ಅಂತಿಮ ದರ್ಶನ ಪಡೆಯುತ್ತಿರುವ ಕುರಿತು ಖ್ಯಾತ ವ್ಯಂಗ್ಯಚಿತ್ರಕಾರ ಶರಣು ಚೆಟ್ಟಿ ಚಿತ್ರ ಸಂಯೋಜನೆ ಮಾಡಿರುವುದು ಗಮನ ಸೆಳೆಯುತ್ತಿದೆ. ಈ ಮೂಲಕ ಮೇಷ್ಟು ಆಗಿರುವ ಶರಣು ಚೆಟ್ಟಿ ಶ್ರೀ ಸಿದ್ದೇಶ್ವರ ಸ್ವಾಮೀಜಿಗೆ ಭಾವಪೂರ್ಣ ಶ್ರದ್ಧಾಂಜಲಿ […]
ಅಗ್ನಿಸ್ಪರ್ಷ ಮಾಡಿ- ವಿಧಿವಿಧಾನಗಳು ಬೇಡ- ನದಿ, ಸಾಗರದಲ್ಲಿ ಚಿತಾಭಸ್ಮ ವಿಸರ್ಜಿಸಿ- ಸ್ಮಾರಕ ಬೇಡ- ಸಂಪೂರ್ಣವಾಗಿ ಮರೆಯಲು ಇಷ್ಟಪಡುತ್ತೇನೆ- ಶ್ರೀಗಳ ಉಯಿಲು
ವಿಜಯಪುರ: ಬಸವನಾಡಿನ ನಡೆದಾಡಿದ ದೇವರು ತಮ್ಮ ಅಂತ್ಯಕ್ರಿಯೆಯ ಬಗ್ಗೆಯೂ ಉಯಿಲು(ವಿಲ್) ಬರೆದಿಟ್ಟಿದ್ದಾರೆ. ವೀರಶೈವ ಲಿಂಗಾಯತ ಸಮುದಾಯದಲ್ಲಿ ಜನಿಸಿದರೂ ಶ್ರೀಗಳು ಆ ಸಂಪ್ರದಾಯದಂತೆ ದೇಹವನ್ನು ಭೂಮಿಯಲ್ಲಿಡುವ ಬದಲು ಅಗ್ನಿಸ್ಪರ್ಷ ಮಾಡಬೇಕು ಎಂದು ಉಯಿಲು ಬರೆದಿಟ್ಟಿದ್ದಾರೆ. ಅಂತ್ಯಕ್ರಿಯೆ ಸಂದರ್ಭದಲ್ಲಿ ಯಾವುದೇ ಶ್ರಾದ್ಧಿಕ ವಿಧಿ-ವಿಧಾನಗಳು ಅನಗತ್ಯ. ಅಗ್ನಿಸ್ಪರ್ಷದ ನಂತರ ಚಿತಾಭಸ್ಮವನ್ನು ನದಿ ಅಥವಾ ಸಾಗರದಲ್ಲಿ ವಿಸರ್ಜಿಸುವುದು. ನನ್ನ ನೆನಪಿನಲ್ಲಿ ಯಾವುದೇ ಬಗೆಯ ಸ್ಮಾರಕ ನಿರ್ಮಿಸಬಾರದು. ನಾನು ಸಂಪೂರ್ಣವಾಗಿ ಮರೆಯಲು ಇಷ್ಟಪಡುತ್ತೇನೆ ಎಂದು 2014ರ ಗುರುಪೂರ್ಣಿಮೆಯ ದಿನ ಶ್ರೀಗಳು ತಮ್ಮ ಇಚ್ಛೆಯನ್ನು ದಾಖಲಿಸಿದ್ದಾರೆ. […]
ಬಸವ ನಾಡಿನ ಸಂತನ ದರ್ಶನಕ್ಕೆ ಸಾಗರೋಪಾದಿಯಲ್ಲಿ ಆಗಮಿಸುತ್ತಿರುವ ನಡೆದಾಡಿದ ದೇವರ ಭಕ್ತಸಾಗರ
ವಿಜಯಪುರ: ನಡೆದಾಡುವ ದೇವರೆಂದೆ ಹೆಸರಾಗಿದ್ದ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ದೇಹತ್ಯಾಗ ಮಾಡಿದ್ದು, ಅವರ ಅಂತಿಮ ದರ್ಶನಕ್ಕೆ ಭಕ್ತಸಾಗರವೇ ಹರಿದು ಬರುತ್ತಿದೆ. ಜ್ಞಾನಯೋಗಾಶ್ರಮದಲ್ಲಿ ಸೋಮವಾರ ಸಂಜೆ 6ಕ್ಕೆ ಇಹಲೋಕ ತ್ಯಜಿಸಿದ ಶ್ರೀಗಳ ಅಂತಿಮ ದರ್ಶನಕ್ಕೆ ಬೆಳಗಿನ ಜಾವ 4.30ರ ವರೆಗೂ ಅವಕಾಶ ಕಲ್ಪಿಸಲಾಗಿತ್ತು. ನಂತರ ತೆರೆದ ವಾಹನದಲ್ಲಿ ಶ್ರೀಗಳ ಪಾರ್ಥಿವ ಶರೀರವನ್ನು ವಿಜಯಪುರದ ಸೈನಿಕ ಶಾಲೆಗೆ ಶಿಫ್ಟ್ ಮಾಡಲಾಗಿದೆ. ಹಾರಗಳಿಂದ ಅಲಂಕೃತವಾಗಿದ್ದ ತೆರೆದ ವಾಹನದಲ್ಲಿ ಲಿಂಗಾಯಿತ ಪದ್ಧತಿಯಂತೆ ಶ್ರೀಗಳ ಪಾರ್ಥಿವ ಶರೀರವನ್ನು ಕೂಡಿಸಿ ಸಕಲ ಸರಕಾರಿ […]