ವಿಜಯಪುರ: ನಡೆ, ನುಡಿ ಮೂಲಕ ಜನಮನಗೆದ್ದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಬಸವನಾಡು ವಿಜಯಪುರವಷ್ಟೇ ಅಲ್ಲ, ಇಡೀ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ನಾನಾ ರಾಜ್ಯಗಳು ಹಾಗೂ ವಿದೇಶಗಳಲ್ಲಿಯೂ ಅಪಾರ ಭಕ್ತರನ್ನು ಹೊಂದಿದ್ದಾರೆ.
ಸ್ವಾಮೀಜಿಗಳ ಜೊತೆ ಬಾಲ್ಯದಿಂದಲೆ ಒಡನಾಟ ಹೊಂದಿರುವ ವೈದ್ಯ ಡಾ. ವಿದ್ಯಾ ಪಾಟೀಲ ತಾವು ಶ್ರೀಗಳಲ್ಲಿ ಕಂಡ ಗುಣಗಳನ್ನು ಲೇಖನಿಯ ಮೂಲಕ ಪ್ರಸ್ತುತ ಪಡಿಸಿದ್ದಾರೆ. ಅವರು ರಚಿಸಿರುವ ಕವನ ಇಲ್ಲಿದೆ.
ನಮ್ಮ ಸಿದ್ಧೇಶ್ವರ ಅಪ್ಪಗೋಳ್
ನಮ್ಮ ಸಿದ್ಧೇಶ್ವರ ಅಪಗೊಳ್
ನೀರೇಷ್ಟು ನಿಷ್ಕಲ್ಮಶ?
ಅದಕ್ಕಿಂತಲೂ ನಿಷ್ಕಲ್ಮಶ
ನಮ್ಮ ಸಿದ್ಧೇಶ್ವರ ಸ್ವಾಮಿಗಳು
ಚಿನ್ನ ಎಷ್ಟು ಶುದ್ಧ?
ಅದಕ್ಕಿಂತಲೂ ಶುದ್ದ
ನಮ್ಮ ಸಿದ್ಧೇಶ್ವರ ಸ್ವಾಮಿಗಳು
ನೀರು ಕುಡಿಯುವುದು ಎಷ್ಟು ಸರಳ?
ಅದಕ್ಕಿಂತಲೂ ಸರಳ
ನಮ್ಮ ಸಿದ್ಧೇಶ್ವರ ಸ್ವಾಮಿಗಳ ಮಾತುಗಳು
ಸಾಗರ ಎಷ್ಟು ಆಳ?
ಅದಕ್ಕಿಂತಲೂ ಆಳ
ನಮ್ಮ ಸಿದ್ಧೇಶ್ವರ ಸ್ವಾಮಿಗಳ ಸರಳ ಮಾತಿನ ಅರ್ಥ
ಜಗತ್ತೆಷ್ಟು ವಿಶಾಲ?
ಅದಕ್ಕಿಂತೂ ವಿಶಾಲ ನಮ್ಮ ಸಿದ್ಧೇಶ್ವರ ಸ್ವಾಮಿಗಳ ತಿಳುವಳಿಕೆ
ಋಷಿ ಮುನಿಗಳದು ಎಂಥ ವೈರಾಗ್ಯ?
ಅದಕ್ಕಿಂತಲೂ ಮಿಗಿಲಾದ ವೈರಾಗ್ಯ
ನಮ್ಮ ಸಿದ್ಧೇಶ್ವರ ಸ್ವಾಮಿಗಳದ್ದು.
ಯಾರೆಲ್ಲ ಸಾಧಿಸಿದ್ದು ಎಷ್ಟು ?
ಎಲ್ಲರಿಗಿಂತಲೂ ಹೆಚ್ಚಿನ ಸಾಧನೆ
ನಮ್ಮ ಸಿದ್ಧೇಶ್ವರ ಸ್ವಾಮಿಗಳ ಜೀವನ
ಅದೆಷ್ಟು ಸಲ ನಮಸ್ಕರಿಸಿದರು
ಮತ್ತೆ ಮತ್ತೆ ನಮಸ್ಕರಿಸಬೇಕು ಅನಿಸುವುದು
ನಮ್ಮ ಸಿದ್ಧೇಶ್ವರ ಸ್ವಾಮಿಗಳ ಪಾದಗಳಿಗೆ
ಅಪ್ಪಾರ ಪಾದಗಳಿಗೆ ನಮಸ್ಕಾರ
ಡಾ. ವಿದ್ಯಾ ಪಾಟೀಲ್ (ತಂಬಾಕೆ)