25 ಲಕ್ಷಕ್ಕೂ ಹೆಚ್ಚು ಭಕ್ತರಿಂದ ನಡೆದಾಡಿದ ದೇವರ ಅಂತಿಮ ದರ್ಶನ- ಸಾರ್ವಜನಿಕರು, ಅಧಿಕಾರಿಗಳು, ಸಿಬ್ಬಂದಿಗೆ ಡಿಸಿ ಡಾ. ದಾನಮ್ಮನವರ ಕೃತಜ್ಞತೆ

ವಿಜಯಪುರ: ಸುಮಾರು 25 ಲಕ್ಷಕ್ಕೂ ಹೆಚ್ಚು ಭಕ್ತರು ಲಿಂ. ಸಿದ್ಧೇಶ್ವರ ಸ್ವಾಮೀಜಿಗಳ ಅಂತಿಮ ದರ್ಶನ ಪಡೆದಿದ್ದಾರೆ ಎಂದು ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ತಿಳಿಸಿದ್ದಾರೆ. ನಗರದ ಜ್ಞಾನಯೋಗಾಶ್ರಮದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜ. 2ರ ಮಧ್ಯರಾತ್ರಿಯಿಂದ ಜ. 3ರ ರಾತ್ರಿ ಅಂತ್ಯಕ್ರಿಯೆಯವರೆಗೂ ಸುಮಾರು 25 ಲಕ್ಷಕ್ಕೂ ಹೆಚ್ಚು ಭಕ್ತರು ಸಿದ್ಧೇಶ್ವರ ಸ್ವಾಮೀಜಿಗಳ ಅಂತಿಮ ದರ್ಶನ ಪಡೆದಿದ್ದಾರೆ.  ವಿಜಯಪುರ ಜಿಲ್ಲೆ ಮಾತ್ರವಲ್ಲ ಬೇರೆ ಬೇರೆ ಜಿಲ್ಲೆಗಳು ಮತ್ತು ರಾಜ್ಯಗಳಿಂದಲೂ ಆಗಮಿಸಿದ ಭಕ್ತಾದಿಗಳು ಶಾಂತಿಯುತವಾಗಿ ದರ್ಶನ […]

ನದಿ, ಸಾಗರ ಸೇರಿದಂತೆ ಐದು ಕಡೆಗಳಲ್ಲಿ ಲಿಂ. ಸಿದ್ಧೇಶ್ವರ ಸ್ವಾಮೀಜಿ ಚಿತಾಭಸ್ಮ ವಿಸರ್ಜನೆ – ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ ಮಾಹಿತಿ

ವಿಜಯಪುರ: ಬಸವನಾಡಿನ ನಡೆದಾಡಿದ ದೇವರು ಲಿಂ. ಸಿದ್ಧೇಶ್ವರ ಸ್ವಾಮೀಜಿ ಅವರ ಚಿತಾಭಸ್ಮವನ್ನು ಒಂದು ಸಾಗರ ಮತ್ತು ನಾಲ್ಕು ನದಿಗಳಲ್ಲಿ ವಿಸರ್ಜಿಸಲಾಗುವುದು ಎಂದು ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಬಸವಲಿಂಗ ಸ್ವಾಮೀಜಿ ತಿಳಿಸಿದ್ದಾರೆ. ವಿಜಯಪುರದಲ್ಲಿ ಜ್ಞಾನಯೋಗಾಶ್ರಮದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬುದ್ದೀಜಿಯವರ ಅಂತ್ಯಕ್ರಿಯೆ ಶಾಂತಿಯುತವಾಗಿ ಮತ್ತು ಸುವ್ಯವಸ್ಥಿತವಾಗಿ ನಡೆದಿದೆ.  ನಮ್ಮ ನಿರೀಕ್ಷೆಗೂ ಮೀರಿ ಭಕ್ತರು ಅಂತಿಮ ದರ್ಶನ ಪಡೆದಿದ್ದಾರೆ ಎಂದು ತಿಳಿಸಿದರು. ಸರಕಾರ, ಸಂಘ ಸಂಸ್ಥೆಗಳು, ಸ್ವಯಂ ಪ್ರೇರಿತರಾಗಿ ಕೆಲಸ ಮಾಡಿದ್ದಾರೆ.  ಕೆಲವರಂತೂ ಸ್ವಯಂ ಪ್ರೇರಿತರಾಗಿ ತಂತಮ್ಮ ಮನೆಗಳಲ್ಲಿ […]

ಲಿಂ. ಸಿದ್ದೇಶ್ವರ ಸ್ವಾಮೀಜಿ ಜೀವನಗಾಥೆಯನ್ನು ಪಠ್ಯದಲ್ಲಿ ಸೇರಿಸಬೇಕೆಂಬುದು ಭಕ್ತರ ಆಶಯ- ಎಂ. ಬಿ. ಪಾಟೀಲ

ವಿಜಯಪುರ: ಶತಮಾನದ ಸಂತ, ನಡೆದಾಡಿದ ದೇವರು ಲಿಂ. ಸಿದ್ಧೇಶ್ವರ ಶ್ರೀಗಳ ಕುರಿತು ಪಠ್ಯಪುಸ್ತಕಗಳಲ್ಲಿ ಇರಬೇಕು ಎಂಬುದು ಎಲ್ಲರ ಆಶಯವಾಗಿದೆ.  ಆದರೆ, ಇದನ್ನು ನಾನು ರಾಜಕೀಯವಾಗಿ ಹೇಳುವುದಿಲ್ಲ ಎಂದು ಕೆ ಪಿ ಸಿ ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದ್ದಾರೆ.  ವಿಜಯಪುರ ಜ್ಞಾನಯೋಗಾಶ್ರಮದಲ್ಲಿ ಲಿಂ. ಶ್ರೀ ಸಿದ್ದೇಶ್ವರ ಸ್ವಾಮೀಜಿ ಚಿತಾಭಸ್ಮದ ದರ್ಶನ ಪಡೆದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಲಿಂ. ದೇವರು ಸಿದ್ದೇಶ್ವರ ಸ್ವಾಮೀಜಿ ಜೀವನಗಾಥೆ ಕುರಿತು ಪಠ್ಯಪುಸ್ತಕದಲ್ಲಿ ಇರಬೇಕು ಎನ್ನುವುದು ಎಲ್ಲರ […]

ಜ್ಞಾನಯೋಗಾಶ್ರಮಕ್ಕೆ ಹರಿದು ಬರುತ್ತಿದೆ ಭಕ್ತಸಾಗರ- ಕಣ್ಣೀರಿನಲ್ಲಿಯೇ ಲಿಂ. ಸಿದ್ಧೇಶ್ವರ ಸ್ವಾಮೀಜಿ ಚಿತಾಭಸ್ಮದ ದರ್ಶನ ಪಡೆಯುತ್ತಿರುವ ಜನತೆ

ವಿಜಯಪುರ: ಬಸವನಾಡಿನ ನಡೆದಾಡುವ ದೇವರಾಗಿದ್ದ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅಂತ್ಯಕ್ರಿಯೆ ಮಂಗಳವಾರವೇ ಮುಕ್ತಾಯವಾಗಿದ್ದರೂ, ಭಕ್ತರು ಮಾತ್ರ ಈಗಲೂ ಆಶ್ರಮಕ್ಕೆ ಆಗಮಿಸುತ್ತಿದ್ದಾರೆ. ಜ್ಞಾನ ದಾಸೋಹದ ಮೂಲಕ ಕೋಟ್ಯಂತರ ಜನಮನಗಳಲ್ಲಿ ನೆಲೆಸಿರುವ ಶ್ರೀಗಳ ಅಂತಿಮ ದರ್ಶನ ಸಾಧ್ಯವಾಗದವರು ಹಾಗೂ ಅಂತಿಮ ದರ್ಶನ ಪಡೆದರೂ ಶ್ರೀಗಳ ಮೇಲಿನ ಅಪಾರ ಭಕ್ತಿಯಿಂದಾಗಿ ಸಹಸ್ರಾರು ಭಕ್ತರು ಈಗಲೂ ತುಂಬಿದ ಕಣ್ಣಾಲಿಯೊಂದಿಗೆ ಜ್ಞಾನಯೋಗಾಶ್ರಮಕ್ಕೆ ಭೇಟಿ ನೀಡುತ್ತಿದ್ದಾರೆ. ಜ್ಞಾನಯೋಗಿಯ ಅಗಲಿಕೆಯಿಂದಾಗಿ ಆಶ್ರಮದಲ್ಲಿ ನೀರವ ಮೌನ ಆವರಿಸಿದೆ.  ಆದರೆ, ಭಕ್ತರು ಮಾತ್ರ ಸ್ವಾಮೀಜಿಗಳ ಚಿತಾಭಸ್ಮದ ದರ್ಶನಕ್ಕೆ […]

ಭಕ್ತರ ಮನದಲ್ಲಿ ನೆಲೆಸಿ ನಿಸರ್ಗದಲ್ಲಿ ಲೀನರಾದ ಸಿದ್ದೇಶ್ವರ ಶ್ರೀಗಳು ಚಿಕಿತ್ಸೆ ನಿರಾಕರಿಸಿದ್ದೇಕೆ? ಅಂತ್ಯಕ್ರಿಯೆಗೆ ಅಗ್ನಿಯರ್ಪಿತವನ್ನೇ ಯಾಕೆ ಆಯ್ದುಕೊಂಡರು?

ಮಹೇಶ ವಿ. ಶಟಗಾರ ವಿಜಯಪುರ: ಬಸವನಾಡಿನ ನಡೆದಾಡುವ ದೇವರು ಲಿಂಗೈಕ್ಯರಾಗಿರುವುದು ಕೋಟ್ಯಾಂತರ ಜನರಲ್ಲಿ ದುಃಖವನ್ನುಂಟು ಮಾಡಿದೆ. ಅವರ ಪ್ರವಚನಗಳ ಶಕ್ತಿ ಎಷ್ಟಿತ್ತೆಂದರೆ ಅಂತ್ಯಕ್ರಿಯೆಗೆ ಸಾಗರೋಪಾದಿಯಲ್ಲಿ ಹಗಲಿರುಳು ಹರಿದು ಬಂದ ಜನಸಾಮಾನ್ಯರೇ ಸಾಕ್ಷಿ. ಜನರ ಮನದಲ್ಲಿ ಶಾಶ್ವತವಾಗಿ ನೆಲೆಯೂರಿರುವ ಶ್ರೀಗಳು ಅನಾರೋಗ್ಯ ಪೀಡಿತರಾಗಿದ್ದಾಗ ವೈದ್ಯರಿಂದ ಚಿಕಿತ್ಸೆಯನ್ನು ನಿರಾಕರಿಸಿದರು. ಇಂದಿನ ಆಧುನಿಕ ಯುಗದಲ್ಲಿ ಅತ್ಯಾಧುನಿಕ ಚಿಕಿತ್ಸೆಗಳು ಲಭ್ಯವಿದ್ದರೂ ಅವುಗಳ ಸಹವಾಸವೇ ಬೇಡ ಎಂದು ವಿನಂತಿಪೂರಕವಾಗಿಯೇ ನಿರಾಕರಿಸಿದರು. ಇದನ್ನು ವೈದ್ಯರ ಬಳಿಯೂ ಹೇಳಿಕೊಂಡಿದ್ದರು. ನಿಸರ್ಗಪ್ರೀಯ ಸ್ವಾಮೀಜಿ ನೈಸರ್ಗಿಕವಾಗಿಯೇ ಎಲ್ಲವೂ ಆಗಲಿ ಎಂದು […]

ತಮ್ಮಿಚ್ಛೆಯಂತೆ ನಿಸರ್ಗದಲ್ಲಿ ಲೀನರಾದ ಬಸವ ನಾಡಿನ ನಡೆದಾಡಿದ ದೇವರು- ಸಂಪೂರ್ಣ ಶಾಂತಿಯತವಾಗಿ ಎಲ್ಲ ವಿಧಿವಿಧಾನ ನೆರವೇರಿಸಿದ ಜಿಲ್ಲಾಡಳಿತ

ವಿಜಯಪುರ: ಬಸವ ನಾಡಿನ ನಡೆದಾಡಿದ ದೇವರು ನಿಸರ್ಗದಲ್ಲಿ ಲೀನರಾಗಿದ್ದಾರೆ.  ಅವರ ಇಚ್ಛೆಯಂತೆಯೇ ಅಂತ್ಯಕ್ರಿಯೆ ನಡೆದಿದ್ದು, ಮಂಗಳವಾರ ಇಡೀ ದಿನ ಸುಮಾರು 20 ಲಕ್ಷಕ್ಕೂ ಹೆಚ್ಚು ಜನ ಲಿಂ. ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಅಂತಿಮ ದರ್ಶನ ಪಡೆದಿದ್ದಾರೆ. ನಾಡು ಕಂಡ ಅಪರೂಪದ ಸಂತ, ನಡೆದಾಡುವ ದೇವರೆಂದು ಕರೆಯಲಾಗುವ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿಗಳ ಅಂತಿಮ ಸಂಸ್ಕಾರವನ್ನು ರಾತ್ರಿ 8.50ರ ಸುಮಾರಿಗೆ ವಿಜಯಪುರ ನಗರದ ಜ್ಞಾನಯೋಗಾಶ್ರಮದ ಆವರಣದಲ್ಲಿ ನೆರವೇರಿಸಲಾಯಿತು.  ಸಂಜೆ 5 ಗಂಟೆಗೆ ನಗರದ ಸೈನಿಕ ಶಾಲೆಯ ಆವರಣದಲ್ಲಿ ಸಿದ್ದೇಶ್ವರ […]

ನಡೆದಾಡಿದ ದೇವರ ದರ್ಶನಕ್ಕೆ ಬಂದ ಒಂದು ಲಕ್ಷಕ್ಕೂ ಹೆಚ್ಚು ಭಕ್ತಾದಿಗಳಿಗೆ ದಾಸೋಹ ವ್ಯವಸ್ಥೆ ಕಲ್ಪಿಸಿ ಬಸವ ನಾಡಿನ ಬಿ ಎಲ್ ಡಿ ಇ ಸಂಸ್ಥೆ

ವಿಜಯಪುರ: ನಡೆದಾಡುವ ದೇವರು ಶ್ರೀ ಸಿದ್ಧೇಶ್ವರು ಸ್ವಾಮೀಜಿ ಲಿಂಗೈಕ್ಯರಾಗಿರುವ ಸುದ್ದಿ ಭಕ್ತರಿಗೆ ಬರಸಿಡಿಲಿನಂತೆ ಬಂದೆರಗಿದೆ.  ಇದರಿಂದ ಅಘಾತಗೊಂಡಿರುವ ಲಕ್ಷಾಂತರ ಭಕ್ತರು ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಅಂತಿಮ ದರ್ಶನಕ್ಕೆ ಬಸವನಾಡು ವಿಜಯಪುರ ನಗರಕ್ಕೆ ಸಮರೋಪಾದಿಯಲ್ಲಿ ದೌಡಾಯಿಸಿದ್ದಾರೆ. ಈ ಭಕ್ತಾದಿಗಳಿಗೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ವಿಜಯಪುರ ನಗರವನ್ನು ಪ್ರವೇಶಿಸುವ ನಾಲ್ಕೂ ದಿಕ್ಕುಗಳಲ್ಲಿ ಪ್ರಸಾದ ವ್ಯವಸ್ಥೆ ಮಾಡಿದ್ದಾರೆ.  ನಾಲ್ಕೂ ದಿಕ್ಕುಗಳಲ್ಲಿ ಭಕ್ತಾದಿಗಳಿಗೆ ಉಪ್ಪಿಟ್ಟು, ಪಲಾವ, ಚಹಾ ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ. ಈವರೆಗೆ […]