ಲಿಂ. ಸ್ವಾಮಿ ಸಿದ್ಧೇಶ್ವರ ಚಿತಾಭಸ್ಮ ಸಂಗ್ರಹ- ರವಿವಾರ ಸುಕ್ಷೇತ್ರ ಕೂಡಲ ಸಂಗಮ, ಗೋಕರ್ಣದಲ್ಲಿ ಅಸ್ತಿ ವಿಸರ್ಜನೆ- ಬಸವಲಿಂಗ ಸ್ವಾಮೀಜಿ

ವಿಜಯಪುರ: ಸೋಮವಾರ ಜನೇವರಿ 2 ರಂದು ವೈಕುಂಠ ಏಕಾದಶಿ ದಿನ ಲಿಂಗೈಕ್ಯರಾದ ಬಸವನಾಡಿನ ನಡೆದಾಡಿದ ದೇವರ ಚಿತಾಭಸ್ಮವನ್ನು ಜ್ಞಾನಯೋಗಾಶ್ರಮದ ಸ್ವಾಮೀಜಿಗಳು ಸಂಗ್ರಿಸಿದ್ದಾರೆ. 

ಜ. 3 ರಂದು ರಾತ್ರಿ ಶ್ರೀಗಳ ಅಂತ್ಯಕ್ರಿಯೆ ನಡೆಸಲಾಗಿತ್ತು.  ಅಂತ್ಯಕ್ರಿಯೆ ನಡೆಸಿ ಮೂರು ದಿನಗಳಾದ ಹಿನ್ನೆಲೆಯಲ್ಲಿ ಜ್ಞಾನಯೋಗಾಶ್ರಮದಲ್ಲಿ ಬಸವಲಿಂಗ ಸ್ವಾಮೀಜಿ ನೇತೃತ್ವದಲ್ಲಿ ನಾನಾ ಸ್ವಾಮೀಜಿ ಲಿಂ. ಸ್ವಾಮಿ ಸಿದ್ಧೇಶ್ವರ ಅವರ ಚಿತಾಭಸ್ಮ ಸಂಗ್ರಹಿಸಿದರು. ಮಣ್ಣಿನ ಮಡಿಕೆಗಳು ಸೇರಿದಂತೆ ಒಟ್ಟು ಏಳು ನಾನಾ ಪಾತ್ರೆಗಳಲ್ಲಿ ಚಿತಾಭಸ್ಮವನ್ನು ಸಂಗ್ರಹಿಸಿದ ಸ್ವಾಮೀಜಿಗಳು ಆ ಪಾತ್ರೆಗಳ ಮೇಲ್ಭಾಗದಲ್ಲಿ ಕೇಸರಿ ಬಣ್ಣದ ಬಟ್ಟೆಯನ್ನು ಕಟ್ಟಿ ವಿಸರ್ಜನೆಗೆ ಸಿದ್ಧವಾಗಿ ಇಟ್ಟರು.

 

ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಚಿತಾಭಸ್ಮ ಸಂಗ್ರಹ ಮುಕ್ತಾಯವಾದ ಬಳಿಕ ಮಾತನಾಡಿದ ಜ್ಞಾನಯೋಗಾಶ್ರಮದ ಅಧ್ಯಕ್ಷ ಮತ್ತು ಗುರುಗಳಾದ ಶ್ರೀ ಬಸವಲಿಂಗ ಸ್ವಾಮೀಜಿ, ಇವತ್ತು ಪೂಜ್ಯ ಗುರುದೇವರ ಚಿತಾಭಸ್ಮವನ್ನ ಅವರ ಇಚ್ಚೆಯಂತೆ ಸಂಗ್ರಹ ಮಾಡಿದ್ದೇವೆ.  ರವಿವಾರ ಅಂದರೆ ಅಂತ್ಯಕ್ರಿಯೆ ನೆರವೇರಿದ 7ನೇ ದಿನದಂದು ನದಿ ಮತ್ತು ಸಾಗರಗಳಲ್ಲಿ ಶ್ರೀಗಳ ಅಸ್ತಿಯನ್ನು ವಿಸರ್ಜನೆ ಮಾಡಲಾಗುವುದು ಎಂದು ತಿಳಿಸಿದರು.

ನಾಳೆ ಶುಕ್ರವಾರ ಹುಣ್ಣಿಗೆ ಇರುವುದರಿಂದ ಅಸ್ತಿ ವಿಸರ್ಜನೆ ಮಾಡುವುದಿಲ್ಲ.  ಹೀಗಾಗಿ ಅಂತ್ಯಕ್ರಿಯೆ ನೆರವೇರಿದ 7ನೇ ದಿನವಾದ ರವಿವಾರ ಚಿತಾಭಸ್ಮ ವಿಸರ್ಜನೆ ಮಾಡಲಾಗುವುದು.  ಮೂರು ನದಿಗಳು ಒಂದೆಡೆ ಸೇರುವ ತ್ರಿವೇಣಿ ಸಂಗಮವಾದ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಸುಕ್ಷೇತ್ರ ಕೂಡಲ ಸಂಗಮ ಮತ್ತು ಕರಾವಳಿ ತೀರದಲ್ಲಿರುವ ಸುಕ್ಷೇತ್ರ ಗೋಕರ್ಣದ ಬಳಿ ಸಾಗರದಲ್ಲಿ ವಿದಿವಿಧಾನಗಳನ್ನು ಕೈಗೊಂಡು ಅಸ್ತಿಯನ್ನು ವಿಸರ್ಜನೆ ಮಾಡಲಾಗುವುದು ಎಂದು ತಿಳಸಿದರು.

ಜನೇವರಿ 7 ರಂದು ರವಿವಾರ ಬೆಳಗ್ಗೆ 5 ಗಂಟೆಗೆ ಆಶ್ರಮದಿಂದ ಅಸ್ತಿಯೊಂದಿಗೆ ಹೊರಡುತ್ತೇವೆ.  ಸಿದ್ದೇಶ್ವರ ಅಪ್ಪನವರಿಗೆ ಕೃಷ್ಣೆಯ ಮೇಲೆ ಪ್ರೀತಿ ಇತ್ತು.  ಅದರಂತೆ ಅವರ ಆಶಯದ ಮೇಲೆ ಅಸ್ತಿಯನ್ನು ವಿಸರ್ಜನೆ ಮಾಡಲಾಗುವುದು ಎಂದು ತಿಳಿಸಿದರು.

ಎಂದಿನಂತೆ ನಡೆದ ಬೆಳಗಿನ ಪ್ರಾರ್ಥನೆ

ಇದಕ್ಕೂ ಮುನ್ನ ವಿಜಯಪುರ ನಗರದ ಜ್ಞಾನಯೋಗಾಶ್ರಮದಲ್ಲಿ ಎಂದಿನಂತೆ ಬೆಳಗ್ಗೆ 5ಗಂಟೆಗೆ ಆಶ್ರಮದ ಸುಮಾರು ಎಂಟ್ಹತ್ತು ಜನ ಸ್ವಾಮೀಜಿಗಳು ಸಾಮೂಹಿಕ ಪ್ರಾರ್ಥನೆ ನಡೆಸಿದರು.  ಪ್ರತಿನಿತ್ಯ ನಡೆಯುವ ಸಂಪ್ರದಾ ಇದಾಗಿದ್ದು, ಲಿಂ. ಸಿದ್ಧೇಶ್ವರ ಸ್ವಾಮೀಜಿಗಳ ಗುರುಗಳಾದ ಲಿಂ. ವೇದಾಂತ ಕೇಸರಿ ಮಲ್ಲಿಕಾರ್ಜುನ ಸ್ವಾಮೀಜಿಗಳ ಗದ್ದುಗೆಯ ಬಳಿ ಪ್ರಾರ್ಥನೆ ಈ ಪ್ರಾರ್ಥನೆ ನಡೆಸಲಾಯಿತು.

Leave a Reply

ಹೊಸ ಪೋಸ್ಟ್‌