ಬಿ ಎಲ್ ಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕೊಹಾ ಓಪನ್ ಕೋರ್ಸ್ ಲೈಬ್ರರಿ ಸಿಸ್ಟಂ ಉದ್ಘಾಟನೆ

ವಿಜಯಪುರ: ನಗರದ ಪ್ರತಿಷ್ಠಿತ ಬಿ. ಎಲ್. ಡಿ. ಸಂಸ್ಥೆಯ ವಚನಪಿತಾಮಹ ಡಾ. ಪ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನ ಗ್ರಂಥಾಲಯ ವಿಭಾಗವು ಪೂರ್ಣ ಪ್ರಮಾಣದಲ್ಲಿ ಕೊಹಾ- ಓಪನ್ ಸೊರ್ಸ್ ಲೈಬ್ರರಿ ಸಿಸ್ಟಮ್ ಉದ್ಘಾಟನೆ ಸಮಾರಂಭ ನಡೆಯಿತು.

ಈ ಕಾರ್ಯಕ್ರಮವನ್ನು ಕಾಲೇಜಿನ ಪ್ರಾಚಾರ್ಯ ಡಾ. ವಿ. ಜಿ. ಸಂಗಮ ಚಾಲನೆ ನೀಡಿದರು.

ಈ ಸಿಸ್ಟಮ್ ನ್ನು ಉಪಯೋಗಿಸುವುದರಿಂದ ವಿದ್ಯಾರ್ಥಿಗಳು ಸುಲಭವಾಗಿ ಪುಸ್ತಕಗಳ ಶಿರ್ಷಿಕೆ, ಲೇಖಕರ ಮಾಹಿತಿ, ಪ್ರಕಾಶಕರ ಮಾಹಿತಿ, ಲಭ್ಯವಿರುವ ಪುಸ್ತಕಗಳ ಮಾಹಿತಿ ಸಿಗುತ್ತಲಿದೆ. ಇದಲ್ಲದೆ ಓಪೆಕ್‍ನಲ್ಲಿ ಸಾಕಷ್ಟು ಮಾಹಿತಿಗಳು ವಿದ್ಯಾರ್ಥಿಗಳಿಗೆ ಸುಲಭವಾಗಿ ಪಡೆಯಬಹುದಾಗಿದೆ.  ಎಲೆಕ್ಟ್ರಾನಿಕ್ಸ್ ಜರ್ನಲ್ಸ್ ಮತ್ತು ಈ ಬುಕ್ಸಗಳ ಮಾಹಿತಿ ಓಪೆಕ್‍ನಲ್ಲಿ ಇರಲಿವೆ.

ಈ ಕಾಲೇಜಿನ ಪ್ರಾಚಾರ್ಯ ಡಾ. ವಿ. ಜಿ. ಸಂಗಮ ಗ್ರಂಥಾಲಯ ಸಮಿತಿಯ ಸಭೆಯನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಕೊಹಾ ಲೈಬ್ರರಿ ಸಿಸ್ಟಮ್ ಸಾಕಷ್ಟು ವೈಶಿಷ್ಠತೆ ಒಳಗೊಂಡಿದೆ.  ಅಲ್ಲದೇ, ನಮ್ಮ ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಉಚಿತವಾಗಿ ಸಿಗುವ ಸೊರ್ಸ್ ಕೋಡನ್ನು ಬಳಸಿಕೊಂಡು ಅಭಿವೃದ್ಧಿ ಪಡಿಸಲಾಗಿದೆ.  ಇಂಥ ಸೌಲಭ್ಯಗಳಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.  ಇದಕ್ಕೆ ಕಾರಣರಾದ ಗ್ರಂಥಪಾಲಕ ಡಾ. ಎಂ. ಎಂ. ಬಾಚಲಾಪುರ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿನೀಯವಾಗಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಕಾಲೇಜಿನ ಉಪಪ್ರಾಚಾರ್ಯ ಡಾ. ಪ್ರದೀಪ ಮಾಳಜಿ, ಡಾ, ಸ್ವಸ್ತಿಕಾ ದಾಸ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌