ಲಿಂ. ಸಿದ್ಧೇಶ್ವರ ಸ್ವಾಮೀಜಿ ಅಂತ್ಯಕ್ರಿಯೆ ಸ್ಥಳದ ದರ್ಶನ ಪಡೆದ ಸಿದ್ದಗಂಗಾ ಮಠಾಧೀಶರು, ಮಹಾದೇವ ಸಾಹುಕಾರ ಭೈರಗೊಂಡ, ವಿದ್ಯಾರ್ಥಿಗಳು

ವಿಜಯಪುರ: ಬಸವನಾಡಿನ ನಡೆದಾಡಿದ ದೇವರು ವಿಜಯಪುರ ಜ್ಞಾನಯೋಗಾಶ್ರಮದ ಲಿಂ. ಸಿದ್ದೇಶ್ವರ ಸ್ವಾಮೀಜಿ ಅವರ ಅಂತ್ಯಕ್ರಿಯೆ ನಡೆದ ಸ್ಥಳಕ್ಕೆ ತುಮಕೂರು ಸಿದ್ದಗಂಗಾ ಸ್ವಾಮೀಜಿ ಭೇಟಿ ನೀಡಿದರು.

ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಅಂತ್ಯಕ್ರಿಯೆ ಮಾಡಿದ ಸ್ಥಳ ದರ್ಶನ ಮಾಡಿದ ಶ್ರೀ ತುಮಕೂರು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ನಂತರ ನಮನ ಸಲ್ಲಿಸಿ ಎರಡು ಸುತ್ತು ಹಾಕಿದರು.  ನಂತರ ಸ್ವಾಮಿ ಸಿದ್ಧೇಶ್ವರ ಅವರು ವಾಸಿಸುತ್ತಿದ್ದ ಕೋಣೆಗೆ ತೆರಳಿ ಅಲ್ಲಿ ಸಂಗ್ರಸಿಹಿ ಇಡಲಾಗಿರುವ ಶ್ರೀಗಳ ಚಿತಾಭಸ್ಮದ ದರ್ಶನ ಪಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಲಿಂ. ಸಿದ್ಧೇಶ್ವರ ಸ್ವಾಮೀಜಿಗಳ ಅಂತ್ಯಕ್ರಿಯೆ ಪವಿತ್ರ ಮಂಗಳ ಕಾರ್ಯಕ್ರಮoಲ್ಲಿ ಭಾಗವಹಿಸಬೇಕಿತ್ತು.  ಆದರೆ, ಬೇರೆ ಎಲ್ಲೋ ದೂರದಲ್ಲಿ ಇರುವುದರಿಂದ ಆ ಸಂದರ್ಭದಲ್ಲಿ ಬರಲು ಸಾಧ್ಯವಾಗಲಿಲ್ಲ.  ಈ ನೋವು ತುಂಬಾ ಕಾಡುತ್ತಿತ್ತು.  ಆದ್ದರಿಂದ ಹಿನ್ನೆಲೆಯಲ್ಲಿ ಈಗ ಬಂದು ಅಂತ್ಯಕ್ರಿಯೆ ನಡೆದ ಸ್ಖಳಕ್ಕೆ ಭೇಟಿ ನೀಡಿ ಅವರ ಚಿತಾಭಸ್ಮ ಮತ್ತು ಆ ಸ್ಥಳಕ್ಕೆ ಗೌರವ, ಭಕ್ತಿ ಅರ್ಪಿಸಲು ಬಂದಿದ್ದೇನೆ ಎಂದು ತಿಳಿಸಿದರು.

ಲಿಂ. ಸ್ವಾಮಿ ಸಿದ್ಧೇಶ್ವರ ಅಂತ್ಯಕ್ರಿಯೆ ನಡೆ ಸ್ಥಳಕ್ಕೆ ಆಗಮಿಸಿದ ತುಮಕೂರು ಶ್ರೀಗಳು ಸೇರಿದಂತೆ ನಾನಾ ಗಣ್ಯರು ದರ್ಶನ ಪಡೆದರು

ಶ್ರೀಗಳ ಅಗಲಿಕೆ ಕೇವಲ ನಮ್ಮ ರಾಜ್ಯ ಮಾತ್ರವಲ್ಲ, ಇಡೀ ದೇಶ ಮತ್ತು ವಿಶ್ವಕ್ಕೆ ದೊಡ್ಡ ನಷ್ಟವಾಗಿದೆ.  ಅವರ ಹೆಸರಿಗೆ ತಕ್ಕ ಹಾಗೆ ಜ್ಞಾನಯೋಶ್ರಮ.  ಅವರು ಜ್ಞಾನಭಾಸ್ಕರರಾಗಿದ್ದರು.  ಶರಣ ಅಲ್ಲಮ ಪ್ರಭು ಹೇಳುವ ವಚನದಂತೆ ಭಊಮಿ ನಿನ್ನದಲ್ಲ, ಹೇಮ ನಿನ್ನದಲ್ಲ.  ಕಾಮಿನಿ ನಿನ್ನವಳಲ್ಲ.  ಈ ನಡುವೆ ಎಂಬುದು ಜ್ಞಾನರತ್ನ.  ಅಂಥ ದಿವ್ಯರತ್ನವನ್ನು ನೀನು ಅಲಂಕರಿಸಿದರೆ, ನಿನ್ನ ಬಿಟ್ಟು  ಎಂಬುದು ಗಳಂತೆ ಅದಕ್ಕೆ ಯಾರಾದರೂ ಸಾಕ್ಷಿಯಾಗಿದ್ದಾರೆ ಎಂದು.  ಅದು ಸಿದ್ಧೇಶ್ವರ ಸ್ವಾಮೀಜಿಗಳು. ಗೆ ಯಾರಾದರೂ ಸಾಕ್ಷಿಯಾಗಿದ್ದಾರೆ ಎಂದು ಹೇಳಿದರು.

ಸಿದ್ಧೇಶ್ವರ ಸ್ವಾಮೀಜಿ ಉದಾಹರಣೆಯಾಗಿದೆ.  ಶರಣರ ವಚನಗಳಿಗೆ ತಕ್ಕಂತೆ ನಡೆದುಕೊಂಡು ಬಂದಿದ್ದಾರೆ.  ಅವರು ಸಂತರಲ್ಲಿ ಸಂತರು.  ಸ್ವಾಮೀಗಳಲ್ಲಿ ಸ್ವಾಮೀಗಳು, ಈ ಎಲ್ಲ ವಿಶೇಷತೆಗಳನ್ನು ನಾವು ಸ್ವಾಮೀಗಳಲ್ಲಿ ಕಾಣಲು ಸಾಧ್ಯ ಎಂದು ಶ್ರೀಗಳು ಹೇಳಿದರು.

 

ಸ್ವಾಮೀಜಿಗಳ ಅವರ ಮಾತೃಹದಯ, ಸಕಲ ಜೀವರಾಶಿಗಳಿಗೆ ಲೇಸನ್ನು ಬಯಸುವ ಮನೋಭಾವ, ಪ್ರಕೃತಿಯನ್ನು ಪ್ರೀತಿಸುವ ಗಿಡಮರಗಳನನು, ಪಕ್ಷಿಗಳನ್ನು ಪ್ರೀತಿಸುವ ಗುಣಗಳನ್ನು ನಾವು ಅನುಕರಣೆ ಮಾಡುವಂಥದ್ದು.  ಇಂಥ ಆದರ್ಶಗಳನ್ನು ಜಗತ್ತಿಗೆ ಕೊಟ್ಟ ಹೋಗಿರುವಂಥ ವಿಭೂತಿ ಪುರುಷರು ಸಿದ್ಧೇಶ್ವರ ಸ್ವಾಮಿಗಳಾಗಿದ್ದಾರೆ.  ಅವರ ಸ್ಮರಣೆ ನಮ್ಮೆಲ್ಲರಿಗೆ ಒಂದು ಮಾರ್ಗದರ್ಶನವಾಗಿದೆ.  ಬೆಳಕಾಗಿದೆ.  ಅವರ ಚಿತಾಭಸ್ಮಕ್ಕೆ ಗೌರವವನ್ನು ಅರ್ಪಿಸಿ ಮತ್ತು ಅವರ ಅಂತ್ಯಕ್ರಿಯೆ ಮಾಡಿ ನಾನು ಧನ್ಯನಾಗಿದ್ದೇವೆ ಎಂದು ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.

ಬಳಿಕ ಶ್ರೀಗಳು ಜ್ಞಾನಯೋಗಾಶ್ರಮದಲ್ಲಿರುವ ಮಲ್ಲಿಕಾರ್ಜುನ ಶಿವಯೋಗಿಗಳ ಗದ್ದುಗೆ ಸ್ಥಳಕ್ಕೆ ತೆರಳಿ ಕೆಲಕಾಲ ಭಜನೆ ನಡೆಸಿದರು.

ಭೀಮಾ ತೀರದ ಮಹಾದೇವ ಸಾಹುಕಾರ ಭೈರಗೊಂಡ, ವಿದ್ಯಾರ್ಥಿಗಳಿಂದ ಆಶ್ರಮಕ್ಕೆ ಭೇಟಿ

ಇದೇ ಸಂದರ್ಭದಲ್ಲಿ ಭೀಮಾ ತೀರದ ಕೆರೂರಿನ ಮಹಾದೇವ ಸಾಹುಕಾರ ಭೈರಗೊಡಂ ತಮ್ ಭೈರವನಾಥ ಶಿಕ್ಷಣ ಸಂಸ್ಥೆಯ ಸುಮಾರು 1000 ವಿದ್ಯಾರ್ಥಿಗಳೊಂದಿಗೆ ಜ್ಞಾನಯೋಗಾಶ್ರಮಕ್ಕೆ ಆಗಮಿಸಿದರ.

ಶ್ರೀಗಳ ಅಂತ್ಯಕ್ರಿಯೆ ನಡೆದ ಸ್ಥಳದಲ್ಲಿ ಅಂತಿಮ ಮಹಾದೇವ ಸಾಹುಕಾರ ಭೈರಗೊಂಡ ದರ್ಶನ ಪಡೆದರೆ, ಇವರ ಜೊತೆಗೆ ದರ್ಶನಕ್ಕೆ ಬಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಅಂತ್ಯಕ್ರಿಯೆ ನಡೆದ ಸ್ಥಳದ ಹೊರಗಡೆ ನಿಂತು ಲಿಂಗ್ಯಕ್ಯರಾದವರು ಗೌರವಾರ್ಥ ಎರಡು ನಿಮಿಷ ಮೌನ ಆಚರಿಸಿದರು.

Leave a Reply

ಹೊಸ ಪೋಸ್ಟ್‌