ಜನ ಉಪಯೋಗಿಸುವ ಪ್ರಪಂಚದ ಎರಡನೇ ವೈದ್ಯ ಪದ್ದತಿ ಹೋಮಿಯೋಪಥಿ: ಡಾ. ರಾಜ ಕೆ. ಮನಚಂದಾ

ಬಾಗಲಕೋಟೆ: ಜನ ಉಪಯೋಗಿಸುವ ಪ್ರಪಂಚದ ಎರಡನೇ ವೈದ್ಯ ಪದ್ದತಿ ಹೋಮಿಯೋಪಥಿಯಾಗಿದೆ ಎಂದು ದೆಹಲಿ ಸರಕಾರದ ಆಯುಷ್ ಕಮೀಷನರ ಡಾ. ರಾಜ ಕೆ. ಮನಚಂದಾ ಹೇಳಿದ್ದಾರೆ. 

ಬಾಗಲಕೋಟೆ ನಗರದಲ್ಲಿ ಪ್ರತಿಷ್ಛಿತ ಬಿ ವಿ ವಿ ಎಸ್ ಹೋಮಿಯೋಪಥಿಕ ವೈದ್ಯಕೀಯ ಮಹಾವಿದ್ಯಾಲಯದ ಆಶ್ರಯದಲ್ಲಿ ಹೋಮಿಯೋಪತಿ ಪೀತಾಮಹ ಡಾ. ಸಾ ಮುಯಲ್ ಹಾನಿಮನರ್ ಮೂರ್ತಿಯನ್ನು ಅನಾವರಣ ಮಾಡಿದರು.  ನಂತರ ಕಾಲೇಜಿನಲ್ಲಿ ಇದೇ ಮದಲ ಬಾರಿಗೆ ನಡೆದ ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಹೋಮಿಯೋಪತಿ ವೈದ್ಯ ಪದ್ದತಿ ಅತೀ ಹೆಚ್ಚು ಜನ ಉಪಯೋಗಿಸುವ ಪ್ರಪಂಚದ ಎರಡನೇ ವೈದ್ಯ ಪದ್ದತಿಯಾಗಿದೆ.  ಹೋಮಿಯೋಪತಿ ಅನಾದಿಕಾಲದಿಂದ ಬಂದ ವೈದ್ಯಪದ್ದತಿ.  ಇಂದಿನ ದಿನಗಳಲ್ಲಿ ಈ ಪದ್ದತಿ ಹಾಗೂ ಹೋಮಿಯೋಪತಿ ವೈದ್ಯ ಪದ್ದತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ  ವೈದ್ಯರು ಜಾಗತಿಕವಾಗಿ ಸಾಕಷ್ಟು ಸವಾಲುಗಳನ್ನು ಎದರುಸುತ್ತಿದ್ದರೂ ಅನೇಕ ಗುಣಮುಖವಾಗದ ಖಾಯಿಲೆಗಳನ್ನು ಗುಣ ಪಡಿಸಿದ ಸಾಕಷ್ಟು ಉದಾಹರಣೆಗಳಿವೆ.  ಇದು ಅತ್ಯಂತ ಪವಿತ್ರ ಮತ್ತು ಶ್ರೇಷ್ಥ ವೈದ್ಯ ಪದ್ದತಿ.  ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡಿಸುವ ಅವಶ್ಯವಿದೆ.  ಬಿವಿವಿ ಸಂಘದ ಹೋಮಿಯೋಪತಿ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ಹೋಮಿಯೋಪತಿ ವೈದ್ಯ ಪದ್ದತಿಯ ಬೇಳವಣಗೆಗೆ ಜಾಗತಿಕ ಮಟ್ಟದಲ್ಲಿ ತನ್ನದೆಯಾದ ಮಹತ್ಸವ ಪಡೆದಿದೆ ಎಂದು ಹೇಳಿದರು.

ಬಾಗಲಕೋಟೆ ಬಿ ವಿ ವಿ ಎಸ್ ಹೋಮಿಯೋಪಥಿಕ ಕಾಲೇಜಿನಲ್ಲಿ ಹೋಮಿಯೋಪತಿ ಪೀತಾಮಹ ಡಾ. ಸಾ ಮುಯಲ್ ಹಾನಿಮನ ಮೂರ್ತಿಯನ್ನು ಕೇಂದ್ರ ಆಯುಷ್ ಕಮೀಷನರ ಡಾ. ರಾಜ ಕೆ. ಮನಚಂದಾ ಅನಾವರಣ ಮಾಡಿದರು 

ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಾಧಿಪತಿ ಡಾ. ಎನ್. ರಾಮಕೃಷ್ಣರೆಡ್ಡಿ ಮಾತನಾಡಿ, ಹೋಮಿಯೋಪಥಿ ವೈದ್ಯ ಶಿಕ್ಷಣ ಕೂಡ ವೈದ್ಯಕೀಯದಷ್ಟೇ ಪಠ್ಯಕ್ರಮ ಹೊಂದಿದೆ.  ಪಾಲಕರು ತಮ್ಮ ಮಕ್ಕಳಿಗೆ ಹೋಮಿಯೋಪಥಿ ಶಿಕ್ಷಣ ಕೊಡಿಸಲು ಮುಂದಾಗಬೇಕೆಂದರು.  ಸರಕಾರಗಳು ಹೋಮಿಯೋಪಥಿ ವೈದ್ಯ ಪದ್ದತಿಗೆ ಮನ್ನಣೆ ನೀಡಿ, ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೋಮಿಯೋಪಥಿ ವೈದ್ಯರನ್ನು ನೇಮಕ ಮಾಡಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಬಿವಿವಿ ಸಂಘದ ಗೌರವ ಕಾಯ೯ದರ್ಶಿ ಮಹೇಶ ಅಥಣಿ ಮಾತನಾಡಿ, ನಮ್ಮ ಸಂಸ್ಥೆ ಕೇವಲ ಮೂರು ವಷ೯ಗಳಲ್ಲಿ ರಾಷ್ಟ್ರ ಸಮ್ಮೇಳನ ಆಯೋಜಿಸಿದ್ದು ಅತ್ಯಂತ ಹೆಮ್ಮೆ ಹಾಗೂ ಹಷ೯ ತಂದಿದೆ.  ಈ ನಿಟ್ಟಿನಲ್ಲಿ ಸಹಕರಿಸಿದ ಎಲ್ಲ ಹೋಮಿಯೋಪಥಿ ದಿಗ್ಗಜರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

ಕಾಲೇಜು ಆಡಳಿತ ಮಂಡಳಿಯ ಕಾಯಾ೯ಧ್ಯಕ್ಷ ಮಲ್ಲಿಕಾಜು೯ನ ಎಸ್. ಸಾಸನೂರ, ಸಂಘದ ಎಲ್ಲ ಸದಸ್ರರು ಮತ್ತು ಗಣ್ಯರು ಉಪಸ್ಥಿತರಿದ್ದರು

ಈ ಸಂಧರ್ಭದಲ್ಲಿ ರಾಷ್ಟ್ರೀಯ ಹೋಮೊಯೋಪತಿ ಸಮ್ಮೇಳನದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.

ಕಾಲೇಜಿನ ಪ್ರಾಚಾರ್ಯ ಡಾ. ಅರುಣ ವಿ. ಹೂಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.  ಡಾ. ರೇಖಾ ಕುಗನೂರ ಸ್ವಾಗತಿಸಿದರು.  ಡಾ. ಮಿಲಿಂದ ಬೆಳಗಾಂವಕರ, ಡಾ. ನಿಧಿ ಬೆಳಗಾಂವಕರ ಕಾರ್ಯಕ್ರಮ ನಿರೂಪಿಸಿದರು. ಡಾ. ರವಿ ಎಸ್. ಕೋಟೆಣ್ಣವರ ವಂದಿಸಿದರು.   ಸಮ್ಮೇಳನದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ೧೧೫೦ ಪ್ರತಿನಿಧಿಗಳು , ಸಂಶೋಧನಾ ಪರಿಣಿತರು, ಪ್ರಾಧ್ಯಾಪಕರು, ಸ್ನಾತಕೋತ್ತರ ವೈದ್ಯ ವಿದ್ಯಾಥಿ೯ಗಳು ಭಾಗವಹಿಸ ತಮ್ಮ ಸಂಶೋಧನಾ ವರದಿ ಹಾಗೂ ಭಿತ್ತಿ ಪತ್ರಗಳನ್ನು  ಪ್ರದಶಿ೯ಸಿದರು.

Leave a Reply

ಹೊಸ ಪೋಸ್ಟ್‌