ಚುನಾವಣೆಯಲ್ಲಿ ಮತದಾರರು ಪಾಠ ಕಲಿಸಲಿದ್ದಾರೆ- ಯತ್ನಾಳ ಹೆಸರು ಹೇಳದೇ ಸಚಿವ ಮುರುಗೇಶ ನಿರಾಣಿ ವಾಗ್ದಾಳಿ

ವಿಜಯಪುರ: ಬಿ. ಎಸ್. ಯಡಿಯೂರಪ್ಪ, ಹರಿಹರ ಪೀಠಾಧೀಶರು ಮತ್ತು ತಮ್ಮ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾಡುತ್ತಿರುವ ಟೀಕೆಗಳಿಗೆ ಸಚಿವ ನಿರಾಣಿ ಯತ್ನಾಳ ಹೆಸರು ಹೇಳದೇ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಯತ್ನಾಳ ಹೆಸರು ಹೇಳದೇ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ನನ್ನ ಬಗ್ಗೆ, ಸ್ವಾಮೀಜಿ ಬಗ್ಗೆ, ಸರಕಾರದ ಬಗ್ಗೆ ಒಬ್ಬರು ಹಗುರವಾಗಿ ಮಾತನಾಡುತ್ತಿದ್ದಾರೆಲಿಂ. ಸ್ವಾಮಿ ಸಿದ್ಧೇಶ್ವರ ಶ್ರೀಗಳ ನಾಡಿನಲ್ಲಿ ಇದ್ದರೂ ಅವರ ಹಾವಭಾವ, ಮಾತುಗಳಲ್ಲಿ ಬಲದಾವಣೆಯಾಗಿಲ್ಲಯಡಿಯೂರಪ್ಪ, ನಿರಾಣಿ, ವಿಜಯೇಂದ್ರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆರಾಜಕೀಯಕ್ಕೆ ಬರುವ ಮೊದಲು ನೀವು ಎಲ್ಲಿದ್ರೀ? ಇದನ್ನು ಅರ್ಥ ಮಾಡಿಕೊಳ್ಳಿ  ಆತ್ಮಾವಲೋಕನ ಮಾಡಿಕೊಳ್ಳಿಯಾವುದೇ ಸಮಾಜದೊಂದಿಗೆ ಭೇದಭಾವ ಇಲ್ಲದೆ ನಾವು ಅನ್ಯೋನ್ಯದಿಂದ ಇದ್ದೇವೆಮುಂಬರುವ ದಿನಗಳಲ್ಲಿ ವಿಜಯಪುರ ಮತದಾರರು ಪಾಠ ಕಲಿಸಲಿದ್ದಾರೆ ಎಂದು ಸಚಿವರು ಕಿಡಿ ಕಾರಿದರು.

ಪಂಚಮಸಾಲಿ ಮೀಸಲಾತಿ ವಿಚಾರ

ಪಂಚಮಸಾಲಿ ಸಮುದಾಯಕ್ಕೆ 2ಡಿ ನಡಿ ಮೀಸಲಾತಿ ಬೇಕಾಗಿಲ್ಲ.  2 ನಡಿ ಮೀಸಲಾತಿ ಬೇಕು ಎಂದು ಹೇಳುತ್ತಿದ್ದಾರೆ ಮಾತನ್ನು ಹೇಳುವ ಬದಲು, ಯಾವ ಕೆಟಗರಿಯಲ್ಲಿ ಏನೆಲ್ಲ ಸೌಲಭ್ಯಗಳಿವೆ ತಿಳಿದುಕೊಳ್ಳಲಿಮೀಸಲಾತಿಗಾಗಿ ನಾಲ್ಕು ದಶಕಗಳಿಂದ ಹೋರಾಟ ನಡೆಯುತ್ತಿದೆ ಹಿಂದೆ ಇದೇ ವಿಚಾರಕ್ಕೆ ಬಿ ಎಸ್ ವೈ ಅವರು ಕ್ಯಾಬಿನೆಟ್ ಕಮೀಟಿ ಮಾಡಿದ್ದರುಅದರಲ್ಲಿ ನಾನು ಬೊಮ್ಮಾಯಿ ಸೇರಿ ಮೂವರು ಇದ್ದೇವುಆಗ ಸಮಾಜದ ಹೆಸರು ಯಾವುದೇ ಜಾತಿ ಕಾಲಂ ನಲ್ಲಿ ಇರಲಿಲ್ಲ ಎಂದು ಮುರುಗೇಶ ನಿರಾಣಿ ಸ್ಪಷ್ಟಪಡಿಸಿದರು.

ನಿರಾಣಿ ಬಚ್ಚಾ ಎಂದು ಯತ್ನಾಳ ಟೀಕೆ ವಿಚಾರ

ಬಚ್ಚಾ ಎನ್ನುವ ನೀವು ಬುದ್ದಿವಂತ, ಅತೀ ಬುದ್ದಿವಂತ, ಎಲ್ಲರಿಗಿಂತಲೂ ಬುದ್ದಿವಂತ ಇದ್ದೀರಲ್ಲ ಯಾವ ರೀತಿ ಮೀಸಲಾತಿ ಪಟ್ಟಿಗೆ ಸೇರಿಸಬೇಕು ಎಂಬುದರ ಕುರಿತು ನಮಗೆ ಮಾರ್ಗದರ್ಶನ ಮಾಡಿನಿರಾಣಿ, ಯಡಿಯೂರಪ್ಪ, ಬೊಮ್ಮಾಯಿ ಅವರಿಗೆ ಬದ್ಧತೆ ಇದೆ ಎಂದು ಅವರು ಹೇಳಿದರು.

ನಾನೊಬ್ಬ ಉದ್ಯಮಿ, 70 ಸಾವಿರ ಜನರಿಗೆ ಉದ್ಯೋಗ ನೀಡಿದ್ದೇನೆ

ತಮ್ಮ ವ್ಯವಹಾರದ ಕುರಿತ ಮಾಡಿರುವ ಟೀಕೆಗೆ ಖಾರವಾಗಿಯೆ ಪ್ರತಿಕ್ರಿಯೆ ನೀಡಿದ ಸಚಿವ ನಿರಾಣಿ, ಜಗತ್ತಿನಲ್ಲೇ ನಂಬರ್ ಒನ್ ನಿರಾಣಿ ಗ್ರೂಪ್ ಆಫ್ ಕಂಪನಿ ಆಗಲಿದೆನಿರಾಣಿ ಕಂಪನಿ ಸ್ವಂತ ಕಟ್ಟಿದ್ದೇನೆಬೇರೆಯವರಂತೆ ನಾನು ಓಡಿ ಹೋಗಿಲ್ಲಕಾರ್ಖಾನೆ ಮಾಡಿ ಶೇರು ಸಂಗ್ರಹಿಸಿ ಕೈಕೊಟ್ಟಿಲ್ಲಹೈನುಗಾರಿಕೆಯನ್ನು ಮಾಡಿ ಶೇರು ಸಂಗ್ರಹಿಸಿಲ್ಲನಾನು ಏನೇ ಮಾಡಿದ್ದರು ಉದ್ಯಮಿಯಾಗಿ ಮಾಡುತ್ತಿದ್ದೇನೆಬ್ಯಾಂಕುಗಳಲ್ಲಿ ನನ್ನ ಕ್ರೆಡಿಟ್ ರೆಕಾರ್ಡ್ ಚೆನ್ನಾಗಿರುವುದರಿಂದಲೇ ನನಗೆ ಸಾಲ ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ವಿಜಯಪುರದಲ್ಲಿ ನಡೆದ ಸುದ್ದಿಗೋಷ್ಛಿಯಲ್ಲಿ ಸಚಿವ ಮುರುಗೇಶ ನಿರಾಣಿ ಮಾತನಾಡಿದರು

ಸುಡಗಾಡು ಶಬ್ದ ಬಳಕೆ ವಿಚಾರ

ಮೀಸಲಾತಿ ವಿಚಾರವಾಗಿ ನಾವು ಹರಿಹರಕ್ಕೆ ಹೋಗ್ತಿವಿ ಎಂದು ಗೊತ್ತಾದಾಹ ಹರಿಹರಕ್ಕೆ ಹೋಗಲಿ, ಸುಡಗಾಡಕ್ಕೆ ಹೋಗಲಿ ಎಂದು ಮಾತಾಡಿದ್ದೀರಿನೀವು ಯಾರಿಗೆ ಮಾತಾಡ್ತಿದಿರಿ, ಯಾವ ಪಕ್ಷದಲ್ಲಿದ್ದೀರಿ ಎಂಬುದನ್ನು ತಿಳಿದುಕೊಳ್ಳಿನನಗೆ ಬಿಜೆಪಿ ಪಕ್ಷ ತಾಯಿ ಸಮಾನನಿಮ್ಮ ಥರ ಒಂದು ಪಾರ್ಟಿಗೆ ಹೋದಾಗ ಒಂದೊಂದರಂತೆ ಟೋಪಿ ಹಾಕಿಕೊಂಡು ಮಾತನಾಡಲ್ಲ ಎಂದು ನಿರಾಣಿ ಟೀಕಿಸಿದರು.

ಚುನಾವಣೆಯಲ್ಲಿ ಚಾಲೆಂಜ್, ಪಂಚಪೀಠ ಮಾಡುತ್ತೇನೆ

ನಿಂದು ತಾಕತ್ತ ಇದ್ರೆ ನಿನ್ನ ಎಲೆಕ್ಷನ್ ನಲ್ಲಿ ನೀನು ಮಾಡು, ನಾನು ನನ್ನ ಎಲೆಕ್ಷನ್ ಮಾಡುತ್ತೇನೆಹುಡುಗಾಟ ಹಚ್ಚೀರಿ? ನೀನು ಗೆದ್ದು ತೋರಿಸು, ವಿಜಯಪುರ ಜನ ನಿನಗೆ 2023ರಲ್ಲಿ ಪಾಠ ಕಲಿಸುತ್ತಾರೆ ಎಂದು ಅವರು ಸವಾಲು ಹಾಕಿದರು.

ಕೂಡಲ ಸಂಗಮ, ಹರಿಹರ, ಜಮಖಂಡಿ ಮೂರು ಪೀಠ ಆಗಲು ನಂದೂ ಅಳಿಲು ಸೇವೆ ಇದೆಶುಭ ಹಾಗೂ ಅಶುಭ ಕಾರ್ಯಕ್ಕೆ ಸ್ವಾಮೀಜಿಗಳು ಬೇಕುಪಂಚಮಸಾಲಿ ಪಂಚ ಪೀಠ ಆಗಬೇಕುಎಲ್ಲರೂ ಅಣ್ಣತಮ್ಮಂದಿರ ರೀತಿ ಬಾಳಬೇಕುನೀವು ಎರೆದುಕೊಳ್ಳುವರ(ಸ್ನಾನ ಮಾಡೋರ) ಕಳೆಗೆ ಕೂತು ಸ್ನಾನ ಮಾಡುತ್ತೀರಿಯಾರದ್ದೋ ಕಿಚ್ಚಿನಲ್ಲಿ ಮೆಕ್ಕೆಜೋಳ ಸುಟಗೊಂಡು ತಿನ್ನೋರು ನೀವುಇಲ್ಲಿಯ ವರೆಗೆ ನಾವು ಸುಮ್ಮನಿದ್ದೀವಿ ಎಂದರೆ ಹೆದರಿದ್ದೀವಿ ಎಂದು ತಿಳಿದುಕೊಳ್ಳಬೇಡಿನೀವು ಸುಧಾರಿಸುತ್ತೀರಿ ಎಂದು ಈವರೆಗೆ ಸುಮ್ಮನಿದ್ದೇವುಇನ್ನು ಸುಮ್ಮನಿರಲ್ಲನಾವು ಇದೇ ಜಿಲ್ಲೆಯವರುನಮಗೂ ನಿಮ್ಮಂತೆ ಮಾತನಾಡಲು ಬರುತ್ತೆ, ಆದ್ರೆ ಶ್ರೀ ಸಿದ್ಧೇಶ್ವರ ಶ್ರೀಗಳ ನಾಡಿನಲ್ಲಿದ್ದುಕೊಂಡು ನಾವು ಹಾಗೆ ಮಾಡಬಾರದು ಅಂತ ಸುಮ್ಮನಿದ್ದೇವೆ ಎಂದು ಸಚಿವ ಮುರುಗೇಶ ನಿರಾಣಿ ಯತ್ನಾಳ ಹೆಸರು ಹೇಳದೇ ಟೀಕಾಪ್ರಹಾರ ನಡೆಸಿದರು.

ನಿರಾಣಿ ಬಳಿ ಸಿಡಿ ಇವೆ ಎಂಬ ಆರೋಪ ವಿಚಾರ

ನಿರಾಣಿ ಬಳಿ ಸಿಡಿ ಇವೆ ಎಂದು ಯತ್ನಾಳ ಆರೋಪ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರೀತಿ ಆರೋಪ ಮಾಡಿದವರು ಅವರೇ ಇರಬೇಕುಹಾಗಾಗಿ ಅವರಿಗೆ ಗೊತ್ತಿದೆಯಾರು ಹೋಗಿ ಸ್ಟೇ ತಂದಿದ್ದಾರೆ ಅಂತ ಅವರಿಗೆ ಗೊತ್ತಿದೆನಮಗೆ ಅಭಿವೃದ್ಧಿ ಕೆಲಸ ಮಾಡೋಕೆ 24 ಗಂಟೆ ಸಾಕಾಗುತ್ತಿಲ್ಲಇಂಥಾದ್ದೆಲ್ಲ ನಾವು ಮಾಡಲ್ಲ ಎಂದು ಪರೋಕ್ಷವಾಗಿ ಯತ್ನಾಳ ವಿರುದ್ಧ ಅವರು ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಯಾಕೆ ಮೀಸಲಾತಿ ನೀಡಲಿಲ್ಲ?

2014ರಲ್ಲಿ ಪಂಚಮಸಾಲಿ ಸಮುಮದಾಯಕ್ಕೆ ಮೀಸಲಾತಿ ಕೇಳಲಾಗಿತ್ತುಆಗ ಮೌನ ವಹಿಸಿದ್ದ ಕಾಂಗ್ರೆಸ್ಸಿನ ಮಾಜಿ ಶಾಸಕರೊಬ್ಬರು ಈಗ ವೀರಾವೇಶದಿಂದ ಮಾತನಾಡುತ್ತಿದ್ದಾರೆಆಗ ಕಾಂಗ್ರೆಸ್ ಯಾಕೆ ಮೀಸಲಾತಿ ನೀಡಿಲಿಲ್ಲ ಎಂದು ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹೆಸರು ಹೇಳದೆ ಸಚಿವ ಮುರುಗೇಶ ನಿರಾಣಿ ವಾಗ್ದಾಳಿ ನಡೆಸಿದರು.

ಬೆಳಗಾವಿ ಸಮಾವೇಶಕ್ಕೆ ಫಂಡಿಂಗ್ ಮಾಡಿದವರು ಯಾರು?

ಇದೇ ವೇಳೆ ಬೆಳಗಾವಿಯಲ್ಲಿ ಅಧಿವೇಶನ ಸಂದರ್ಭದಲ್ಲಿ ನಡೆದ ಸಮಾವೇಶಕ್ಕೆ ಯಾರು ಫಂಡಿಂಗ್ ಮಾಡಿದ್ದಾರೆ? ಅವರಿಗೆ ಇನ್ನೂ ರೂ. 25 ಲಕ್ಷ ಹಣ ಯಾಕೆ ನೀಡಿಲ್ಲ? ಯಾರು ನೀಡಬೇಕಿದೆ ಎಂದು ಹೇಳುವ ಮೂಲಕ ಸಚಿವ ಮುರುಗೇಶ ನಿರಾಣಿ ಅಂದಿನ ಸಮಾವೇಶಕ್ಕೆ ಬೇರೆ ಪಕ್ಷಗಳ ನಾಯಕರೂ ಹಣ ನೀಡಿದ್ದಾರೆ ಎಂದು ಪಕ್ಷದ ಹೆಸರು ಹೇಳದೇ ಪ್ರಶ್ನೆ ಹಾಕಿದರು.

ಇನ್ವೆಸ್ಟ್ ಕ್ರನಾಟಕ

ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ 9ಲಕ್ಷ 80ಸಾವಿರ ಕೋಟಿ ಕರ್ನಾಟಕಕ್ಕೆ ಹೂಡಿಕೆ ತಂದಿದ್ದೇವೆಅವಳಿ ಜಿಲ್ಲೆಗಳಿಗೆ ಹತ್ತು ಸಾವಿರ ಕೋಟಿಗೂ ಹೆಚ್ಚು ಕೈಗಾರಿಕೆಯಷ್ಟು ಪ್ರದೇಶಗಳು ಬರುತ್ತಿವೆಇನ್ನು ಐದು ಹೊಸ ಏರರ್ಪೋರ್ಟ್ ಬರಲಿದ್ದು, ಹಲಕುರ್ಕಿ, ಕೊಪ್ಪಳ, ರಾಯಚೂರು, ದಾವಣಗೆರೆ, ಚಿಕ್ಕಮಗಳೂರಿನಲ್ಲಿ ಆಗಲಿವೆಪ್ರತಿ 100 ಕಿ. ಮಿ. ಗೆ ಒಂದರಂತೆ ಕರ್ನಾಟಕದಲ್ಲಿ ಏರಪೋರ್ಟ ಆಗಲಿವೆ.  5000 ಕಿ. ಮೀ. ನಷ್ಟು ಕರ್ನಾಟಕದಲ್ಲಿ ಹೊಸ ನ್ಯಾಷನಲ್ ಹೈವೆ ಗಳು ಬರ್ತಿವೆಏರ್, ರೋಡ್, ವಾಟರ್, ಕರೆಂಟ್ ಕನೆಕ್ಟಿವಿಟಿ ಬಂದಾಗ ಕೂಗಾರಿಕೆಗೆ ಅನುಕೂಲ ಆಗುತ್ತದೆನಾನು ಕೈಗಾರಿಕೆ ಜವಾಬ್ದಾರಿ ತಗೊಂಡ ಮೇಲೆ ನಾನಾ ವಿಭಾಗದಲ್ಲಿ ದೇಶದಲ್ಲೇ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ತಿಳಿಸಿದರು.

ಸಂದರ್ಭದಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ವಿಡಿಎ ಮಾಜಿ ಅಧ್ಯಕ್ಷ ಭೀಮಾಶಂಕರ ಹದನೂರ, ಬಿಜೆಪಿ ಮುಖಂಡರಾದ ಚಂದ್ರಶೇಖರ ಕವಟಗಿ, ಸುರೇಶ ಬಿರಾದಾರ, ವಿವೇಕ ಡಬ್ಬಿ ಉಪಸ್ಥಿತರಿದ್ದರು.

 

Leave a Reply

ಹೊಸ ಪೋಸ್ಟ್‌