ಸಿಡಿ ಇಟ್ಟುಕೊಂಡೇ ಮಂತ್ರಿಯಾಗುತ್ತಾರೆ- ನಾ ಅಂಥ ಹಲ್ಕಾ ಕೆಲಸ ಮಾಡಲ್ಲ- ನಿರಾಣಿ ವಿರುದ್ಧ ಯತ್ನಾಳ ವಾಗ್ದಾಳಿ

ವಿಜಯಪುರ: ಸಿಡಿ ಇಟ್ಟುಕೊಂಡೇ ಇವರು ಮಂತ್ರಿಯಾಗುತ್ತಾರೆ, ನಾ ಅಂಥ ಹಲ್ಕಾ ಕೆಲಸ ಮಾಡಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಆರೋಪಿಸಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನ್ನ ಬಗ್ಗೆ, ಹರಿಹರ ಸ್ವಾಮೀಜಿ ಬಗ್ಗೆ, ಯಡಿಯೂರಪ್ಪ ಹಾಗೂ ವಿಜಯೇಂದ್ರ ಬಗ್ಗೆ ಮಾತನಾಡಿದರೆ ಸರಿಯಿರಲ್ಲ ಎಂದು ಸಚಿವ ಮುರುಗೇಶ ನಿರಾಣಿ ಬೆಳಿಗ್ಗೆ ನೀಡಿರುವ ಎಚ್ಚರಿಕೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿದರು.

ಆಂವಾ ಏನ್ ಹೇಳುದ ಹೇಳಲಿ ಅಂತಾ ಹೇಳಿಕೆಗೆ ಉತ್ತರ ಕೊಡುವ ತಾಕತ್ತ ಇದೆ.  ನಮ್ಮ ಬಳಿಯೂ ಬಹಳ ಇದೆ.  ನಮ್ಮ ಬಳಿ ಭಂಡಾರ ಇದೆ ಎಂದು ಸಿಡಿ ವಿಚಾರದಲ್ಲಿಯೂ ಮಾತನಾಡಿದ್ದ ಸಚಿವ ನಿರಾಣಿ ವಿರುದ್ಧ ಯತ್ನಾಳ ವಾಗ್ದಾಳಿ ನಡೆಸಿದರು.

ಯಾರು ಸಿಡಿ ವಿಚಾರದಲ್ಲಿ ಸ್ಟೇ ತೆಗೆದುಕೊಂಡಿರುತ್ತಾರೋ ಅವರಿಗೆ ಸಿಡಿ ವಿಚಾರ ಗೊತ್ತಿರುತ್ತದೆ ಎಂದು ಹೇಳಿರುವ ನಿರಾಣಿ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ನಿರಾಣಿನೂ ಸಿಡಿ ವಿಚಾರದಲ್ಲಿ ಸ್ಟೇ ತಗೋಂಡಿದ್ದಾರಲ್ಲ.  ನಾನು ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಲ್ಲಿ ಎರಡು ಸಿಡಿ ಫ್ಯಾಕ್ಟರಿ ಇವೆ ಎಂದು ಹೇಳಿದ್ದೇನೆ.  ತಾಕತ್ತಿದ್ದರೆ ಸಿಡಿ ತೆಗೆಯಿರಿ ಎಂದು ಹೇಳಿ ಎಂದು ಯತ್ನಾಳ ನಿರಾಣಿಗೆ ಸವಾಲು ಹಾಕಿದರು.

ಅವರ ಬಳಿ ಇದೆಯಲ್ಲ.  ಅವರ ಅಪ್ಪಗೆ ಹುಟ್ಟಿದ್ದರೆ ತೆಗೆ ಎಂದು ಹೇಳಿ.  ಖರೇನು ಅವರ ಅಪ್ಪಗೆ ಹುಟ್ಟಿದ್ದರೆ ಸಿಡಿ ಯಾರದಿದೆ ಎಂದು ತೆಗೆಯಬೇಕು.  ಯಾರು ಯಾರದ್ದೋ ಸಿಡಿ ಇಟ್ಟುಕೊಂಡು ಇವರು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ.  ಸಿಡಿ ಇಟ್ಟುಕೊಂಡೇ ಇವರು ಮಂತ್ರಿಯಾಗುತ್ತಾರೆ, ನಾ ಅಂಥ ಹಲ್ಕಾ ಕೆಲಸ ಮಾಡಲ್ಲ ಎಂದು ಅವರು ಹೇಳಿದರು.

ವೆಲ್ಲಾ ವಿಚಾರ ಪಂಚಮಸಾಲಿ 2ಎ ಮೀಸಲಾತಿ ಹೋರಾಟದ ಮೇಲೆ ಪರಿಣಾಮ ಬೀರಲ್ಲ. ಯಾರು ಒಳ್ಳೆಯವರು? ಯಾರು ಕೆಟ್ಟವರು? ಎಂದು ಸಮಾಜದ ಜನರಿಗೆ ಗೊತ್ತಿದೆ.  ಸಮಾಜದ ಪರವಾಗಿ ಯಾರಿದ್ದಾರೆ? ಸಮಾಜದ ಉಪಯೋಗ ಮಾಡಿಕೊಂಡವರು ಯಾರಿದ್ದಾರೆ ಎಂದು ಜನರಿಗೆ ಗೊತ್ತು ಎಂದು ಶಾಸಕರು ತಿಳಿಸಿದರು.

ಪಂಚಮಸಾಲಿ 2ಎ ಮೀಸಲಾತಿ ಹೋರಾಟ ವಿಚಾರ

ಮೀಸಲಾತಿ ನೀಡಲು ಕುಲಶಾಸ್ತ್ರ ಆಧ್ಯಯನ ಅವಶ್ಯಕತೆ ಇಲ್ಲ.  ಮೀಸಲಾತಿ ನೀಡಲು ಹಿಂದುಳಿದ ಆಯೋಗದ ವರದಿ ಹಾಗೂ ಕುಲಶಾಸ್ತ್ರ ಆಧ್ಯಯನ ಬೇಕಿಲ್ಲ.  ಎಸ್ಟಿ ಮತ್ತು ಎಸ್ಟಿ ಸಮುದಾಯಕ್ಕೆ ಯಾವುದಾರೂ ಸಮಾಜವನ್ನು ಸೇರಿಸಬೇಕಾದರೆ ಮಾತ್ರ ಕುಲಶಾಸ್ತ್ರ ಆಧ್ಯಯನವಾಗಬೇಕು.  ಇದನ್ನು ಸಚಿವ ಮಾಧುಸ್ವಾಮಿಯವರೇ ಹೇಳಿದ್ಧಾರೆ.  ಪಿಎಂ ಮೋದಿ ಅವರು ಯಕನಾಮಿಕ್ ವೀಕರ್ ಸೆಕ್ಷನ್ ಎಂದು ಮಾಡಿದ್ಧಾರೆ.  ಯಾವುದೇ ಮೀಸಲಾತಿ ಇಲ್ಲದ ಯಾವ್ಯಾವ ಸಮಾಜಗಳಿವೆ ಅಂಥ ಸಮಾಜಗಳಿಗೆ ಶೇ. 10 ಮೀಸಾಲಾತಿ ನೀಡಲಾಗಿದೆ.  ಅದರಲ್ಲಿ ಲಿಂಗಾಯಿತರು ಸೇರಲು ಬರಲ್ಲ.  ರಿಸರ್ವೇಷನ್ ನಲ್ಲಿದ್ದವರು ಸೇರಲು ಬರಲ್ಲ.  ರಿಸರ್ವೇಷನ್ ನಲ್ಲಿ ಇರದ ಸಮುದಾಯಗಳಿಗೆ ಶೇ. 10 ಮೀಸಲಾತಿಯಲ್ಲಿ ಸೇರಬಹುದು.  ಈ ಮೀಸಲಾತಿ ಪಡೆದುಕೊಳ್ಳುವುದೂ ಸಹ ಕಠಿಣವಿದೆ.  ಹತ್ತಾರು ನಿಯಮಗಳಿವೆ.  ಅದರಲ್ಲಿನ ಶೇ. 2 ಲಿಂಗಾಯತರಿಗೆ ಕೊಡುತ್ತೇವೆಂದು ಹೇಳಿದ್ದಾರೆ.  ಆದರೆ, ಅದು ಅಸಾಧ್ಯ.  ಅದರಲ್ಲಿಂದ ತೆಗೆದು ಇದಕ್ಕೆ ಹಾಕೋದು ಹೇಗೆ ಸಾಧ್ಯ ಎಂದು ಅವರು ವಾಗ್ದಾಳಿ ನಡೆಸಿದರು.

2023ರ ಚುನಾವಣೆಯಲ್ಲಿ ಟಿಕೆಟ್ ಕಟ್ ವಿಚಾರ

ಮುಂದಿನ 2023 ರ ಚುನಾವಣೆಯಲ್ಲಿ ಯತ್ನಾಳಗೆ ಟಿಕೆಟ್ ಸಿಗುತ್ತೋ? ಇಲ್ವೋ? ಎಂದು ಸಚಿವ ಮುರುಗೇಶ ನಿರಾಣಿ ಹೇಳಿಕೆ ವಿಚಾರ ಕುರಿತು ಖಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಜನರು ನನಗೆ ಈತನನ್ನು ಕೇಳಿ ಮತ ಹಾಕುತ್ತಾರಾ? ಆತನಿಗೆ ಬೀಳಗಿಯಲ್ಲಿ ಮತ ಹಾಕುತ್ತಾರಾ? ಎಂದು ನೋಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ಎಷ್ಟು ಜನ ಅಣ್ಣ ತಮ್ಮಂದಿರರು ಚುನಾವಣೆಗೆ ನಿಲ್ಲಲಿದ್ದಾರೆ ಎಂಬುದನ್ನಾ ನಿರಾಣಿ ಮೊದಲು ಹೇಳಲಿ.  ಕಾಂಗ್ರೆಸ್ ನಿಂದ ಜೆಡಿಎಸ್ ನಿಂದ ಎಷ್ಟು ಜನ ನಿಲ್ಲುವವರಿದ್ದಾರೆ? ನಮ್ಮ ಮನೆಯಲ್ಲಿ ನಾನೋಬ್ಬನೇ ಚುನಾವಣೆಗೆ ನಿಲ್ಲುತ್ತೇನೆ ಎಂದು ಅವರು ತಿಳಿಸಿದರು.

ಮುಂಬರುವ ಚುನಾವಣೆಯಲ್ಲಿ ನನ್ನ ಸೋಲಿಸಲು ಬಹಳ ದೊಡ್ಡ ರೊಕ್ಕ ಬರಲಿವೆ.  ನಿರಾಣಿ, ವಿಜಯೇಂದ್ರ, ಸತೀಶ್ ಜಾರಕಿಹೋಳಿ ಹಣ ಕಳುಹಿಸುತ್ತಾರೆ.  ವಿಜಯಪುರದ ಜನ ಆನಂದದಿಂದ ಹಣ ತೆಗೆದುಕೊಂಡು ಚೈನಿ ಮಾಡಿ ನನಗೆ ವೋಟ್ ಹಾಕುತ್ತಾರೆ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

2023 ರ ಚುನಾಚಣೆಯಲ್ಲಿ ಯತ್ನಾಳಗೆ ಟಿಕೆಟ್ ಸಿಗುತ್ತಾ? ಎಂದು ಸಚಿವ ನಿರಾಣಿ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಕಳೆದ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಸೋಲಿಸಲು ನಿರಾಣಿ ಹಾಗೂ ವಿಜಯೇಂದ್ರ ಎಷ್ಟು ಕೋಟಿ ಕೊಟ್ಟು ಕಳುಹಿಸಿದ್ದರು? ನಿರಾಣಿ ಹಾಗೂ ವಿಜಯೇಂದ್ರಿನಿಂದ ಪಕ್ಷದ ಅಭ್ಯರ್ಥಿಗಳಿಗೆ ಒಂದು ರೂಪಾಯಿ ಬಂದಿಲ್ಲ.  ಅವರು ಪಕ್ಷೇತರ ಅಭ್ಯರ್ಥಿಗಳಿಗೆ ಹಣ ನೀಡಿ ಬಿಜೆಪಿ ಅಭ್ಯರ್ಥಿ ಸೋಲಿಸಲು ಮುಂದಾಗಿದ್ದರು.  ನಾನು ಪಕ್ಷೇತರ ಅಭ್ಯರ್ಥಿಗಳಿಗೆ ಹಣ ನೀಡಿದ್ದು ಸುಳ್ಳು ಎಂದು ವಿಜಯೇಂದ್ರ ಹಾಗೂ ನಿರಾಣಿ ಧರ್ಮಸ್ಥಳದಲ್ಲಿ ಆಣೆ ಮಾಡಲಿ.  ಪಕ್ಷ ಹಾಗೂ ಸರ್ಕಾರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಹಣ ನೀಡಿಲ್ಲ.  ನಾವು ಹಣ ಪಡೆದಿಲ್ಲ.  ಯಾರಿಗೆ ಎಷ್ಟು ಹಣ ಕೊಟ್ಟೀರಿ ಎಂಬುದು ಗೊತ್ತು.  ಈ ವಿಚಾರ ಚುನಾವಣೆ ವೀಕ್ಷಕರಿಗೆ ಹಾಗೂ ಕೇಂದ್ರದ ನಾಯಕರಿಗೂ ಗೊತ್ತು.  ವಿಜಯಪುರ ನಗರದ ಜನರು ನಮ್ಮಿಂದ ಸಹ ಹಣ ಪಡೆಯದೇ ಮತ ಹಾಕಿ ಗೆಲ್ಲಿಸಿದ್ದಾರೆ.  ಯತ್ನಾಳಗೆ ಮುಂದಿನ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಸಿಗಲ್ಲಾ ಎಂದು ಹೇಳಲು ನಿರಾಣಿ ಯಾರು? ಇಂವಾ ಟಿಕೆಟ್ ಕೊಡ್ತಾನಾ? ಎಂದು ನಿರಾಣಿ ವಿರುದ್ದ ಕಿಡಿ ಕಾರಿದರು.

Leave a Reply

ಹೊಸ ಪೋಸ್ಟ್‌