ಬಿದರಿ ಗ್ರಾಮದಲ್ಲಿ ಅಶ್ವಿನಿ ಆಸ್ಪತ್ರೆ, ಭಾರತೀಯ ರೆಡ್ ಕ್ರಾಸ್ ವತಿಯಿಂದ ಬೃಹತ್ ಉಚಿತ ಆರೋಗ್ಯ, ರಕ್ತದಾನ ಶಿಬಿರ
ಬಾಗಲಕೋಟೆ: ದಿ. ಶ್ರೀ ಎಚ್. ಟಿ. ಬಿದರಿ ಜನ್ಮಶತಮಾನೋತ್ಸವದ ಅಂಗವಾಗಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಬಿದರಿ ಗ್ರಾಮದ ಶ್ರೀ ಕುಮಾರೇಶ್ವರ ಪ್ರೌಢಶಾಲೆಯಲ್ಲಿ ವಿಜಯಪುರದ ಪ್ರತಿಷ್ಠಿತ ಅಶ್ವಿನಿ ಆಸ್ಪತ್ರೆ ಹಾಗೂ ಭಾರತೀಯ ರೆಡ್ ಕ್ರಾಸ್ ವಿಜಯಪುರ ಶಾಖೆಯ ವತಿಯಿಂದ ಬೃಹತ್ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಿತು. ಈ ಶಿಬಿರವನ್ನು ಶ್ರೀ ಶಿವಲಿಂಗ ಮಹಾಸ್ವಾಮಿಗಳು ಉದ್ಗಾಟಿಸಿದರು. ಬಳಿಕ ಮಾತನಾಡಿದ ಅವರು, ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ಇಂಥ ಶಿಬಿರಗಳು ತುಂಬಾ ಸಹಕಾರಿಯಾಗಿವೆ. ಕೊರೊನಾ ನಂತರದ ದಿನಗಳಲ್ಲಿ […]
ಸುಕ್ಷೇತ್ರ ಗೋಕರ್ಣದ ಅರಬ್ಬಿ ಸಮುದ್ರದಲ್ಲಿ ಲಿಂ. ಸ್ವಾಮಿ ಸಿದ್ಧೇಶ್ವರ ಚಿತಾಭಸ್ಮ ವಿಸರ್ಜನೆ
ಕಾರವಾರ: ವಿಜಯಪುರ ಜ್ಞಾನಯೋಗಾಶ್ರಮದ ಲಿಂ. ಸ್ವಾಮಿ ಸಿದ್ಧೇಶ್ವರ ಅವರ ಚಿತಾಭಸ್ಮವನ್ನು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಬಳಿ ಇರುವ ಅರಬ್ಬಿ ಸಮುದ್ರದಲ್ಲಿ ವಿಸರ್ಜನೆ ಮಾಡಲಾಯಿತು. ಬೆಳಿಗ್ಗೆ ವಿಜಯಪುರದಿಂದ ಶ್ರೀ ಬಸವಲಿಂಗ ಸ್ವಾಮೀಜಿ ನೇತೃತ್ವದಲ್ಲಿ ನಾನಾ ಸ್ವಾಮೀಜಿಗಳು ಶ್ರೀಗಳ ಚಿತಾಭಸ್ಮದೊಂದಿಗೆ ಹೊರಟಿದ್ದರು. ಮೊದಲಿಗೆ ಕೂಡಲ ಸಂಗಮದಲ್ಲಿ ಚಿತಾಭಸ್ಮ ವಿಸರ್ಜಿಸಿದ ಸ್ವಾಮೀಜಿಗಳು ಸಂಜೆ ಸುಕ್ಷೇತ್ರ ಗೋಕರ್ಣಕ್ಕೆ ಆಗಮಿಸಿದರು. ನಂತರ ಇಲ್ಲಿನ ಅರಬ್ಬಿ ಸಮುದ್ರದಲ್ಲಿ ನಡೆದಾಡಿದ ದೇವರು ಶತಮಾನದ ಸಂತ ಎಂದೇ ಹೆಸರಾಗಿರುವ ಬಸವನಾಡಿನ ಲಿಂ. ಸ್ವಾಮಿ ಸಿದ್ಧೇಶ್ವರ […]
ಕೈಯ್ಯಾರೆ ತಯಾರಿಸಿದ ಖಾದ್ಯಗಳ ಮಾರಾಟದಿಂದ ಕಿಸೆತುಂಬ ಕಾಂಚಾಣ ಗಳಿಸಿ ಹಿರಿಹಿರಿ ಹಿಗ್ಗಿದ ಚಿಣ್ಣರು
ವಿಜಯಪುರ: ವ್ಯಾಪಾರವೆಂದರೆ ಸಾಕು ವಾರದ ಸಂತೆ, ಪ್ರತಿನಿತ್ಯ ವಹಿವಾಟು ನಡೆಸುವ ಮಾರುಕಟ್ಟೆಗಳು, ನಾನಾ ಬಡಾವಣೆಗಳಲ್ಲಿರುವ ಅಂಗಡಿಗಳಲ್ಲಿ ಜನತೆ ತಮಗಿಷ್ಟವಾದ ಸಾಮಾನುಗಳನ್ನು ಖರೀದಿಸುತ್ತಾರೆ. ಆದರೆ, ಇದೆಲ್ಲಕ್ಕಿಂತ ಭಿನ್ನವಾದ ವ್ಯಾಪಾರ ವಹಿವಾಟು ಬಸವನಾಡು ವಿಜಯಪುರ ನಗರದಲ್ಲಿ ನಡೆಯಿತು. ಅಲ್ಲಿ, ವ್ಯಾಪಾರ ಮಾಡಿದವರೆಲ್ಲರೂ ಮಕ್ಕಳು. ಖರೀದಿ ಮಾಡಿದವರು ಹಿರಿಯರು. ಅಷ್ಟೇ ಅಲ್ಲ, ಮಾರಾಟವಾದ ವಸ್ತುಗಳನ್ನು ತಯಾರಿಸಿದವೂರ ಮಕ್ಕಳೆ. ಅಲ್ಲಿ ಎಲ್ಲಿ ನೋಡಿದರೂ ತರಹೇವಾರಿ ತಿಂಡಿ, ತಿನಿಸುಗಳೇ ಕಾಣಿಸುತ್ತಿದ್ದವು. ವ್ಯಾಪಾರವೂ ಭರ್ಜರಿಯಾಗಿಯೇ ನಡೆಯಿತು. ಮಕ್ಕಳು ಕೂಡ ತಮ್ಮ ಕಿಸೆ ತುಂಬಿಸಿಕೊಂಡು ಜಣಜಣ ಕಾಂಚಾಣ ಎಣಿಸಿದರು. […]
ಕೂಡಲ ಸಂಗಮದಲ್ಲಿ ಲಿಂ. ಸ್ವಾಮಿ ಸಿದ್ಧೇಶ್ವರ ಅಸ್ತಿ ವಿಸರ್ಜನೆ- ಶ್ರೀಗಳ ಇಚ್ಛೆಯಂತೆ ತ್ರಿವೇಣಿ ಸಂಗಮದಲ್ಲಿ ವಿಸರ್ಜನೆ- ಬಸವಲಿಂಗ ಸ್ವಾಮೀಜಿ
ಬಾಗಲಕೋಟೆ: ಲಿಂ. ಸ್ವಾಮಿ ಸಿದ್ಧೇಶ್ವರರ ಆಶಯದಂತೆ ಅವರ ಅಸ್ತಿಯನ್ನು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಐತಿಹಾಸಿಕ ಕೂಡಲ ಸಂಗಮದಲ್ಲಿ ವಿಸರ್ಜನೆ ಮಾಡಲಾಯಿತು. ಬೆ. 7 ಗಂಟೆಯಿಂದ 8.17ರ ವರೆಗೆ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಬಸವಲಿಂಗ ಮಹಾಸ್ವಾಮಿಗಳ ನೇತೃತ್ವದಲ್ಲಿ ಐದು ಮಡಿಕೆಗಳಲ್ಲಿ ಸಿದ್ದೇಶ್ವರ ಶ್ರೀಗಳ ಇಚ್ಚೆಯಂತೆ ಅಸ್ಥಿ ಸಹಿತ ಚಿತಾಭಸ್ಮ ಸಂಗ್ರಹ ಮಾಡಿ ತರಲಾಗಿತ್ತು. ಸುಮಾರು 900 ರಿಂದ 10000 ಜನರ ಸಮ್ಮುಖದಲ್ಲಿ ಎಲ್ಲ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಮಲಪ್ರಭಾ, ಕೃಷ್ಣಾ ಮತ್ತು ಘಟಪ್ರಭಾ ತ್ರಿವೇಣಿ ನದಿಗಳು ಸೇರುವ ಸ್ಥಳದಲ್ಲಿ ಸುಮಾರು […]
ಬಸವನಾಡಿನ ನಡೆದಾಡಿದ ದೇವರು ಲಿಂ. ಸ್ವಾಮಿ ಸಿದ್ಧೇಶ್ವರ ಚಿತಾಭಸ್ಮ ಕೂಡಲ ಸಂಗಮ, ಗೋಕರ್ಣಕ್ಕೆ ರವಾನೆ
ವಿಜಯಪುರ: ನಡೆದಾಡಿವ ದೇವರು ಲಿಂ. ಸ್ವಾಮಿ ಸಿದ್ದೇಶ್ವರ ಅವರ ಅಂತ್ಯಕ್ರಿಯೆ ನಡೆದು ಏಳನೇ ದಿನದ ಹಿನ್ನೆಲೆಯಲ್ಲಿ ಶ್ರೀಗಳ ಆಶಯದಂತೆ ಅವರ ಚುತಾಭಸ್ಮವನ್ನು ನದಿ ಮತ್ತು ಸಾಗರದಲ್ಲಿ ವಿಸರ್ಜನೆ ಮಾಡುವ ಕಾರ್ಯ ಆರಂಭವಾಗಿದೆ. ವಿಜಯಪುರ ನಗರ ಜ್ಞಾನಯೋಗಾಶ್ರಮದಲ್ಲಿ ಶ್ರೀಗಳ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಿದ ಸ್ಥಳದಿಂದ ಸಂಗ್ರಹಿಸಲಾದ ಚಿತಾಭಸ್ಮವನ್ನು ಬೆಳಗ್ಗೆ 5 ಗಂಟೆಗೆ ಜ್ಞಾನ ಯೋಗಾಶ್ರಮದಿಂದ ವಿಶೇಷ ವಾಹನದಲ್ಲಿ ತೆಗೆದುಕೊಂಡು ಹೋಗಲಾಯಿತು. 12ನೇ ಶತಮಾನದ ಸಾಮಾಜಿಕ ಹೋರಾಟಗಾರ ಅಣ್ಣ ಬಸವಣ್ಣನವರ ಐಕ್ಯ ಸ್ಥಳ ಕೂಡಲ ಸಂಗಮ ಹಾಗೂ ಸಂಜೆ […]