ಬಾಗಲಕೋಟೆ: ದಿ. ಶ್ರೀ ಎಚ್. ಟಿ. ಬಿದರಿ ಜನ್ಮಶತಮಾನೋತ್ಸವದ ಅಂಗವಾಗಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಬಿದರಿ ಗ್ರಾಮದ ಶ್ರೀ ಕುಮಾರೇಶ್ವರ ಪ್ರೌಢಶಾಲೆಯಲ್ಲಿ ವಿಜಯಪುರದ ಪ್ರತಿಷ್ಠಿತ ಅಶ್ವಿನಿ ಆಸ್ಪತ್ರೆ ಹಾಗೂ ಭಾರತೀಯ ರೆಡ್ ಕ್ರಾಸ್ ವಿಜಯಪುರ ಶಾಖೆಯ ವತಿಯಿಂದ ಬೃಹತ್ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಿತು. ಈ ಶಿಬಿರವನ್ನು ಶ್ರೀ ಶಿವಲಿಂಗ ಮಹಾಸ್ವಾಮಿಗಳು ಉದ್ಗಾಟಿಸಿದರು.
ಬಳಿಕ ಮಾತನಾಡಿದ ಅವರು, ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ಇಂಥ ಶಿಬಿರಗಳು ತುಂಬಾ ಸಹಕಾರಿಯಾಗಿವೆ. ಕೊರೊನಾ ನಂತರದ ದಿನಗಳಲ್ಲಿ ಪ್ರತಿಯೊಬ್ಬರು ಆರೋಗ್ಯದ ಕುಳಿತು ಕಾಳಜಿ ವಹಿಸಬೇಕಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಶ್ವಿನಿ ಆಸ್ಪತ್ರೆಯ ಮುಖ್ಯಸ್ಥ ಮತ್ತು ಮಕ್ಕಳ ಖ್ಯಾತ ವೈದ್ಯ ಡಾ. ಎಲ್. ಎಚ್. ಬಿದರಿ, ಶಿಬಿರ ಮತ್ತು ಇದರಿಂದಾಗುವ ಲಾಭಗಳು ಹಾಗೂ ಸರಕಾರದ ನಾನಾ ಯೋಜನೆಗಳಡಿ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಬಿದರಿ ಗ್ರಾ. ಪಂ. ಅಧ್ಯಕ್ಷ ಮಕ್ಬೂಲ್ ಮುಲ್ಲಾ, ಪಿಕೆಪಿಎಸ್ ಅಧ್ಯಕ್ಷ ಅಶೋಕ ಕೋನಪ್ಪನವರ, ನನ್ನಾವರೆ, ಸುಭಾಸ ಸಾಹುಕಾರ ಮುಂತಾದವರು ಉಪಸ್ಥಿತರಿದ್ದರು.
ಅಶ್ವಿನಿ ಆಸ್ಪತ್ರೆಯ ಆಡಳಿತಾಧಿಕಾರಿ ಪ್ರಕಾಶ ಮಠ ನಿರೂಪಿಸಿದರು.
ಈ ಶಿಬಿರದಲ್ಲಿ ಬಿದರಿ ಹಾಗೂ ಸುತ್ತಮುತ್ತಲಿನ 800 ಕ್ಕೂ ಹೆಚ್ಚು ಜನ ಈ ಶಿಬಿರದ ಪ್ರಯೋಜನ ಪಡೆದುಕೊಂಡರು ಅಲ್ಲದೆ 30 ಜನ ರಕ್ತದಾನ ಮಾಡಿದರು.
ಖ್ಯಾತ ವೈದ್ಯರುಗಳಾದ ಡಾ. ಸುಷ್ಮಿತಾ ಮನಗೂಳಿ, ಡಾ. ಬಸವರಾಜ ಉಟಗಿ, ಡಾ. ಸಂತೋಷ ಪಾಟೀಲ, ಡಾ. ರಷ್ಮಿ ಪಾಟೀಲ, ಡಾ. ಹರ್ಷಿತಾ ಕನಕರಡ್ಡಿ, ಡಾ. ಕರಡಿ, ಡಾ. ಪ್ರಶಾಂತ, ಡಾ. ಸಂದೀಪ, ಡಾ. ಜ್ಯೋತಿ ದೇವರಡ್ಡಿ, ಡಾ. ಮಹೇಶ ಪಾಟೀಲ, ಸುನೀಲ ಗುಡಗನಟ್ಟಿ, ಡಾ. ಸನ್ಮಿತ್ರಾ, ಸುನೀಲ ತಾತುಸ್ಕರ, ಸುನೀಲ ದೇವೂರ ಶಿಬಿರದಲ್ಲಿ ಪಾಲ್ಗೋಂಡವರ ಆರೋಗ್ಯ ತಪಾಸಣೆ ನಡೆಸಿದರು.