ಕೂಡಲ ಸಂಗಮದಲ್ಲಿ ಲಿಂ. ಸ್ವಾಮಿ ಸಿದ್ಧೇಶ್ವರ ಅಸ್ತಿ ವಿಸರ್ಜನೆ- ಶ್ರೀಗಳ ಇಚ್ಛೆಯಂತೆ ತ್ರಿವೇಣಿ ಸಂಗಮದಲ್ಲಿ ವಿಸರ್ಜನೆ- ಬಸವಲಿಂಗ ಸ್ವಾಮೀಜಿ

ಬಾಗಲಕೋಟೆ: ಲಿಂ. ಸ್ವಾಮಿ ಸಿದ್ಧೇಶ್ವರರ ಆಶಯದಂತೆ ಅವರ ಅಸ್ತಿಯನ್ನು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಐತಿಹಾಸಿಕ ಕೂಡಲ ಸಂಗಮದಲ್ಲಿ ವಿಸರ್ಜನೆ ಮಾಡಲಾಯಿತು.

ಬೆ. 7 ಗಂಟೆಯಿಂದ 8.17ರ ವರೆಗೆ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಬಸವಲಿಂಗ ಮಹಾಸ್ವಾಮಿಗಳ ನೇತೃತ್ವದಲ್ಲಿ ಐದು ಮಡಿಕೆಗಳಲ್ಲಿ ಸಿದ್ದೇಶ್ವರ ಶ್ರೀಗಳ ಇಚ್ಚೆಯಂತೆ ಅಸ್ಥಿ ಸಹಿತ ಚಿತಾಭಸ್ಮ ಸಂಗ್ರಹ ಮಾಡಿ ತರಲಾಗಿತ್ತು.  ಸುಮಾರು 900 ರಿಂದ 10000 ಜನರ ಸಮ್ಮುಖದಲ್ಲಿ ಎಲ್ಲ ಕೈಂಕರ್ಯಗಳನ್ನು ನೆರವೇರಿಸಲಾಯಿತು.

ಮಲಪ್ರಭಾ, ಕೃಷ್ಣಾ ಮತ್ತು ಘಟಪ್ರಭಾ ತ್ರಿವೇಣಿ ನದಿಗಳು ಸೇರುವ ಸ್ಥಳದಲ್ಲಿ ಸುಮಾರು 10 ರಿಂದ 12 ಜನ ನಾನಾ ಮಠಾಧೀಶರು ಸೇರಿ ದೋಣಿಯಲ್ಲಿ ನದಿ ಪಾತ್ರಕ್ಕೆ ತೆರಳಿ ಬೆ. 7.35 ಗಂಟೆಗೆ ವಿಸರ್ಜನೆ ಮಾಡಿ ವಾಪಸ್ಸಾದರು.

ಈ ಸಂದರ್ಭದಲ್ಲಿ ಸ್ಥಳೀಯ ಹುನಗುಂದ ಬಿಜೆಪಿ ಶಾಸಕ ದೊಡ್ಡನಗೌಡ ಜಿ. ಪಾಟೀಲ ಮತ್ತು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಕಾಂಗ್ರೆಸ್ ಪಕ್ಷ ಶಾಸಕ ಶಿವಾನಂದ ಪಾಟೀಲ ಹಾಗೂ ಸುಮಾರು 900 ರಿಂದ 1000 ಸಾರ್ವಜನಿಕರು ಉಪಸ್ಥಿತರಿದ್ದರು.

ಕೂಡಲ ಸಂಗಮದಲ್ಲಿ ಲಿಂ. ಸ್ವಾಮಿ ಸಿದ್ಧೇಶ್ವರ ಅವರ ಅಸ್ತಿ ವಿಸರ್ಜನೆ ಮಾಡಿದ ಬಸವಲಿಂಗ ಸ್ವಾಮೀಜಿ

ಅಸ್ತಿ ವಿಸರ್ಜನೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಬಸವಲಿಂಗ ಸ್ವಾಮೀಜಿ,, ಮೂರು ನದಿಗಳ ಸಂಗಮಮವಾದ ಕೂಡಲ ಸಂಗಮದ ಬಗ್ಗೆ ಅಪ್ಪುಗೋಳು(ಲಿಂ. ಸ್ವಾಮಿ ಸಿದ್ಧೇಶ್ವರ) ಬಗ್ಗೆ ಬಹಳ ಅಭಿಮಾನ ಹೊಂದಿದ್ದರು.  ಶ್ರೀಗಳಿಗೆ ಬಸವಣ್ಣನ ಐಕ್ಯಸ್ಥಳ, ಕೂಡಲಸಂಗಮದ ಬಗ್ಗೆ ಅಪಾರ ಒಲವಿತ್ತು.  ಇಲ್ಲಿಯೆ ಚಿತಾಭಸ್ಮ ಬಿಡಬೇಕು ಎಂದು ಅವರ ಇಚ್ಚೆಯಾಗಿತ್ತು.  ಅದರಂತೆ ಈಗ ಅಸ್ತಿ ವಿಸರ್ಜನೆ ಮಾಡಲಾಗಿದೆ ಎಂದು ತಿಳಿಸಿದರು.

ಸಂಗಮದ ನೀರು ವಿಜಯಪುರಕ್ಕೆ ಬರಬೇಕೆಂದು ಎಂ. ಬಿ. ಪಾಟೀಲ ಅವರ ಮೂಲಕ ನೀರಾವರಿ ಮಾಡಿಸಿದ್ದರು.  ಚಿತಾಭಸ್ಮ ವಿಸರ್ಜನೆ ಎಲ್ಲ ಅಧಿಕಾರಿಗಳು ಬಹಳ ಅನುಕೂಲ‌ ಮಾಡಿದ್ದಾರೆ.  ಈಗ ಗೋಕರ್ಣಕ್ಕೆ ಹೋಗುತ್ತೇವೆ.  ಗೋಕರ್ಣದ ಸಾಗರದಲ್ಲಿ ಚಿತಾಭಸ್ಮ ವಿಸರ್ಜನೆ ಮಾಡುತ್ತೇವೆ ಎಂದು ಶ್ರೀ ಬಸವಲಿಂಗ ಸ್ವಾಮೀಜಿ ತಿಳಿಸಿದರು.

Leave a Reply

ಹೊಸ ಪೋಸ್ಟ್‌