ಸುಕ್ಷೇತ್ರ ಗೋಕರ್ಣದ ಅರಬ್ಬಿ ಸಮುದ್ರದಲ್ಲಿ ಲಿಂ. ಸ್ವಾಮಿ ಸಿದ್ಧೇಶ್ವರ ಚಿತಾಭಸ್ಮ ವಿಸರ್ಜನೆ

ಕಾರವಾರ: ವಿಜಯಪುರ ಜ್ಞಾನಯೋಗಾಶ್ರಮದ ಲಿಂ. ಸ್ವಾಮಿ ಸಿದ್ಧೇಶ್ವರ ಅವರ ಚಿತಾಭಸ್ಮವನ್ನು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಬಳಿ ಇರುವ ಅರಬ್ಬಿ ಸಮುದ್ರದಲ್ಲಿ ವಿಸರ್ಜನೆ ಮಾಡಲಾಯಿತು.

ಗೋಕರ್ಣದ ಅರಬ್ಬಿ ಸಮುದ್ರದ ಬಳಿ ಲಿಂ. ಸ್ವಾಮಿ ಸಿದ್ಧೇಶ್ವರ ಅವರ ಚಿತಾಭಸ್ಮ ವಿಸರ್ಜನೆಗೂ ಮುನ್ನ ಪೂಜೆ ಸಲ್ಲಿಸಲಾಯಿತು

ಬೆಳಿಗ್ಗೆ ವಿಜಯಪುರದಿಂದ ಶ್ರೀ ಬಸವಲಿಂಗ ಸ್ವಾಮೀಜಿ ನೇತೃತ್ವದಲ್ಲಿ ನಾನಾ ಸ್ವಾಮೀಜಿಗಳು ಶ್ರೀಗಳ ಚಿತಾಭಸ್ಮದೊಂದಿಗೆ ಹೊರಟಿದ್ದರು.  ಮೊದಲಿಗೆ ಕೂಡಲ ಸಂಗಮದಲ್ಲಿ ಚಿತಾಭಸ್ಮ ವಿಸರ್ಜಿಸಿದ ಸ್ವಾಮೀಜಿಗಳು ಸಂಜೆ ಸುಕ್ಷೇತ್ರ ಗೋಕರ್ಣಕ್ಕೆ ಆಗಮಿಸಿದರು.  ನಂತರ ಇಲ್ಲಿನ ಅರಬ್ಬಿ ಸಮುದ್ರದಲ್ಲಿ ನಡೆದಾಡಿದ ದೇವರು ಶತಮಾನದ ಸಂತ ಎಂದೇ ಹೆಸರಾಗಿರುವ ಬಸವನಾಡಿನ ಲಿಂ. ಸ್ವಾಮಿ ಸಿದ್ಧೇಶ್ವರ ಅವರ ಚಿತಾಭಸ್ಮವನ್ನು ಸಮುದ್ರ ತೀರಕ್ಕೆ ತಂದರು.  ನಂತರ ದೋಣಿಯಲ್ಲಿ ಅರಬ್ಬಿ ಸಮುದ್ರದಲ್ಲಿ ವಿಸರ್ಜನ ಮಾಡಿ ನಮಿಸಿದರು.

ಲಿಂ. ಸ್ವಾಮಿ ಸಿದ್ಧೇಶ್ವರ ಅವರು, ತಾವು ದೇಹ ತ್ಯಜಿಸಿದ ಬಳಿಕ ಅಗ್ನಿಯರ್ಪಿತ ಮಾಡಿ ನದಿ ಮತ್ತು ಸಾಗರಗಳಲ್ಲಿ ಚಿತಾಭಸ್ಮ ವಿಸರ್ಜಿಸಬೇಕು ಎಂದು ಅಂತಿಮ ಅಭಿವಂನದಾ ಪತ್ರದಲ್ಲಿ ಹೇಳಿದ್ದರು.  ಅದರಂತೆ, ಈಗ ಅವರ ಚಿತಾಭಸ್ಮವನ್ನು ಮೊದಲು ಕೂಡಲ ಸಂಗಮದ ತ್ರಿವೇಣಿ ಸಂಗಮದಲ್ಲಿ ನಂತರ ಗೋಕರ್ಣದ ಅರಬ್ಬಿ ಸಮುದ್ರದಲ್ಲಿ ವಿಸರ್ಜನೆ ಮಾಡಲಾಯಿತು.

Leave a Reply

ಹೊಸ ಪೋಸ್ಟ್‌