ಬಿಸಿಲ ನಾಡಿನಲ್ಲಿ ಬೆಳಿಗ್ಗೆ ನಡುಗಿದ ಜನತೆ- ಕೇವಲ 6.5 ಡಿ. ಸೆ. ಉಷ್ಣಾಂಶ ದಾಖಲು- ಕಳೆದ 10 ವರ್ಷಗಳಲ್ಲಿಯೇ ಅತೀ ಕಡಿಮೆ ತಾಪಮಾನ

ವಿಜಯಪುರ: ಬಸವನಾಡು ವಿಜಯಪುರ ನಗರದ ಜನ ಬೆಳಿಗ್ಗೆ ವಿಪರೀತ ಚಳಿಯಿಂದಾಗಿ ಮನೆ ಬಿಟ್ಟು ಹೊರ ಬರಲಾರದಂಥ ಪರಿಸ್ಥಿತಿ ಎದುರಾಗಿತ್ತು.  ಉಷ್ಣತೆ ಮಾಪಕದಲ್ಲಿ ಬೆಳಿಗ್ಗೆ ಕನಿಷ್ಠ ತಾಪಮಾನ ಕೇವಲ 6.5 ಡಿ. ಸೆ. ದಾಖಲಾಗಿದೆ ಎಂದು ವಿಜಯಪುರ ಜಿಲ್ಲೆಯ ಹಿಟ್ನಳ್ಳಿ ಕೃಷಿ ಮಹಾವಿದ್ಯಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.   ಬೆಳಿಗ್ಗೆ ವಾಕಿಂಗ್ ಗೆ ತೆರಳುವ ವಾಯು ವಿಹಾರಿಗಳು, ಶಾಲೆಗೆ ತೆರಳು ಮಕ್ಕಳು, ಅವರನ್ನು ಶಾಲೆಗೆ ಕಳುಹಿಸಲು ಬೇಗ ಏಳುವ ಪೋಷಕರು ಹಾಗೂ ಬೆಳಿಗ್ಗೆ ಕಸ ಸಂಗ್ರಹಿಸಲು ಬರುವ ಪೌರ […]

ಐಟಿ, ಬಿಟಿ ಜೊತೆ ಫಾರ್ಮಸಿ ಟೆಕ್ನಾಲಜಿಯೂ ವೇಗವಾಗಿ ಬೆಳೆಯುತ್ತಿದೆ- ಔಷಧ ವಿಜ್ಞಾನಿಗಳಿಗೆ ಬೇಡಿಕೆ ಹೆಚ್ಚಾಗಿದೆ- ಡಾ. ಎಸ್. ಸಚ್ಚಿದಾನಂದ

ವಿಜಯಪುರ: ಐಟಿ, ಬಿಟಿ ಜೊತೆ ಈಗ ಪಿಟಿ (ಫಾರ್ಮಸಿ ಟೆಕ್ನಾಲಜಿ) ವೇಗವಾಗಿ ಬೆಳೆಯುತ್ತಿದ್ದು ಔಷಧ ಕ್ಷೇತ್ರದ ತಜ್ಞರು ಮತ್ತು ವಿಜ್ಞಾನದ ಆರೋಗ್ಯ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡುತ್ತಿದ್ದಾರೆ ಎಂದು ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಡಾ. ಎಸ್. ಸಚ್ಚಿದಾನಂದ ಹೇಳಿದ್ದಾರೆ. ನಗರದ ಬಿ.ಎಲ್.ಡಿ.ಇ. ಸಂಸ್ಥೆಯ ಶ್ರೀ ಸಂಗನಬಸವ ಮಹಾಸ್ವಾಮೀಜಿ ಔಷಧಮಹಾವಿದ್ಯಾಲಯ ಮತ್ತು ಸಂಶೋಧನ ಕೇಂದ್ರದಲ್ಲಿ ನಡೆದ ಪದವಿ ಪ್ರಧಾನ ಮತ್ತು ಪದವೀಧರರಿಗೆ ಬೀಳ್ಕೋಡುವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ತಂತ್ರಜ್ಞಾನ ಆಧಾರಿತ […]

ಹುತಾತ್ಮ ಯೋಧನ ಪುತ್ಥಳಿ ನಿರ್ಮಾಣಕ್ಕೆ ರೂ. 50 ಸಾವಿರ ಆರ್ಥಿಕ ನೆರವು ನೀಡಿದ ಪೊಲೀಸ್ ಅಧಿಕಾರಿ ಮಹೇಂದ್ರಕುಮಾರ ನಾಯಕ

ವಿಜಯಪುರ: ಹುತಾತ್ಮ ಯೋಧನ ಪುತ್ಥಳಿ ನಿರ್ಮಾಣಕ್ಕೆ ರೂ. 50 ಸಾವಿರ ಆರ್ಥಿಕ ನೆರವು ನೀಡುವ ಮೂಲಕ ಲೋಕಾಯುಕ್ತ ಸಿಪಿಐ ಮಹೇಂದ್ರಕುಮಾರ ನಾಯಕ ಗಮನ ಸೆಳೆದಿದ್ದಾರೆ.  ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಲೋಣಿ ಬಿ. ಕೆ. ಗ್ರಾಮದ ವೀರಯೋಧ ದಯಾನಂದ ಪಾಟೀಲ ದೇಶಸೇವೆ ಮಾಡುವಾಗ 12.04.2022 ರಂದು ಹುತಾತ್ಮರಾಗಿದ್ದರು.  ಹೀಗಾಗಿ ಅವರ ಸ್ಮರಣಾರ್ಥ ಲೋಣಿ ಬಿ. ಕೆ. ಗ್ರಾಮದಲ್ಲಿ ಯೋಧನ ಪುತ್ಥಳಿ ನಿರ್ಮಾಣ ಮಾಡಲಾಗುತ್ತಿದೆ.  ಈ ಪುತ್ಥಳಿ ನಿರ್ಮಾಣಕ್ಕೆ ಲೋಕಾಯುಕ್ತ ಇಲಾಖೆಯಲ್ಲಿ ಸಿಪಿಐ ಆಗಿರುವ ಮಹೇಂದ್ರಕುಮಾರ ನಾಯಕ ವೈಯಕ್ತಿಕವಾಗಿ […]