ಐಟಿ, ಬಿಟಿ ಜೊತೆ ಫಾರ್ಮಸಿ ಟೆಕ್ನಾಲಜಿಯೂ ವೇಗವಾಗಿ ಬೆಳೆಯುತ್ತಿದೆ- ಔಷಧ ವಿಜ್ಞಾನಿಗಳಿಗೆ ಬೇಡಿಕೆ ಹೆಚ್ಚಾಗಿದೆ- ಡಾ. ಎಸ್. ಸಚ್ಚಿದಾನಂದ

ವಿಜಯಪುರ: ಐಟಿ, ಬಿಟಿ ಜೊತೆ ಈಗ ಪಿಟಿ (ಫಾರ್ಮಸಿ ಟೆಕ್ನಾಲಜಿ) ವೇಗವಾಗಿ ಬೆಳೆಯುತ್ತಿದ್ದು ಔಷಧ ಕ್ಷೇತ್ರದ ತಜ್ಞರು ಮತ್ತು ವಿಜ್ಞಾನದ ಆರೋಗ್ಯ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡುತ್ತಿದ್ದಾರೆ ಎಂದು ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಡಾ. ಎಸ್. ಸಚ್ಚಿದಾನಂದ ಹೇಳಿದ್ದಾರೆ.

ನಗರದ ಬಿ.ಎಲ್.ಡಿ.ಇ. ಸಂಸ್ಥೆಯ ಶ್ರೀ ಸಂಗನಬಸವ ಮಹಾಸ್ವಾಮೀಜಿ ಔಷಧಮಹಾವಿದ್ಯಾಲಯ ಮತ್ತು ಸಂಶೋಧನ ಕೇಂದ್ರದಲ್ಲಿ ನಡೆದ ಪದವಿ ಪ್ರಧಾನ ಮತ್ತು ಪದವೀಧರರಿಗೆ ಬೀಳ್ಕೋಡುವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ತಂತ್ರಜ್ಞಾನ ಆಧಾರಿತ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಸಂವಹನ ಮತ್ತು ಸಂಪರ್ಕಕ್ಕೆ ಉತ್ತಮ ವೇದಿಕೆಯಾಗಿದೆ. ಇವುಗಳನ್ನು ಸದುಪಯೋಗ ಪಡಿಸಿಕೊಂಡು ಪರಸ್ಪರ ಜ್ಞಾನ ವಿನಿಮಯ ಮಾಡಿಕೊಂಡು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಭಾರತದಲ್ಲಿ ಔಷಧ ವಿಜ್ಞಾನ ಗಣನೀಯವಾಗಿ ಪ್ರಗತಿ ಸಾಧಿಸಿದೆ. ಈಗ ಅದು ಉದ್ಯಮಗಳಿಗೂ ಅವಕಾಶಗಳನ್ನು ಕಲ್ಪಿಸುತ್ತಿದೆ. ಆರೋಗ್ಯ ಕ್ಷೇತ್ರದಲ್ಲಿ ಅತೀ ಹೆಚ್ಚು ಸೇವೆ ಸಲ್ಲಿಸುತ್ತಿರುವ ಒಟ್ಟು ಸಂಖ್ಯೆಯಲ್ಲಿ ಔಷಧ ತಜ್ಞರು ಮತ್ತು ವಿಜ್ಞಾನಿಗಳು ಮೂರನೇ ಸ್ಥಾನದಲ್ಲಿದ್ದಾರೆ. ಭಾರತ ಕೋರೊನಾ ಸಂದರ್ಭದಲ್ಲಿ ಜಗತ್ತಿನ 150ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಲಸಿಕೆ ನೀಡುವ ಮೂಲಕ ವಿಶ್ವಾದ್ಯಂತ ಗಮನ ಸಳೆದಿದೆ ಎಂದು ಅವರು ಹೇಳಿದರು.

ವಿಜಯಪುರದ ಬಿ. ಎಲ್. ಡಿ.ಇ ಫಾಮಸಿ ಕಾಲೇಜಿನಲ್ಲಿ ಪದವಿ ಪ್ರಧಾನ ಮತ್ತು ಬಿಳ್ಕೋಡುವ ಸಮಾರಂಭದಲ್ಲಿ ಡಾ. ಎಸ್. ಸಚ್ಚಿದಾನಂದ ಮಾತನಾಡಿದರು

ಈ ಶತಮಾನ ನಾನಾ ವೈರಸ್‍ಗಳ ಹಾವಳಿಗೆ ಕಾರಣವಾಗಿದೆ. ಈ ಸವಾಲನ್ನು ಸಮರ್ಥವಾಗಿ ಎದುರಿಸಲು ಔಷಧ ವಿಜ್ಞಾನಿಗಳು ಶ್ರಮ ವಹಿಸಬೇಕಿದೆ. ಈ ಕ್ಷೇತ್ರದಲಿ ಉದ್ಯೋಗಾವಕಾಶಗಳು ವಿಫುಲವಾಗಿವೆ. ಈ ಹಿಂದೆ ದೇಶದಲ್ಲಿ ಸುಮಾರು 3 ಲಕ್ಷದಷ್ಟು ನಡೆಯುತ್ತಿದ್ದ ನೇಮಕಾತಿಗಳು ಕೋರೊನಾ ನಂತರ 6 ಲಕ್ಷಕ್ಕೆ ಹೆಚ್ಚಾಗಿವೆ. ಈಗ ಬಿ-ಫಾರ್ಮಾ, ಎಂ-ಫಾರ್ಮಾ ಮತ್ತು ಫಾರ್ಮಾ-ಡಿ ಪದವಿ ಪಡೆದ ಯುವಕರು ಆನ್‍ಲೈನಲ್ಲಿ ಲಭ್ಯವಿರುವ ಮತ್ತು ಪ್ರಸ್ತುತ ಬದಲಾವಣೆಗೆ ಪೂರಕವಾಗಿರುವ ಕೋರ್ಸುಗಳನ್ನು ಕಲಿಯಬೇಕು. ಅμÉ್ಟೀಅಲ್ಲ, ಕೇವಲ ಸರಕಾರಿ ಮತ್ತು ಇತರ ನೌಕರಿಗಳಿಗಾಗಿ ಕಾಯದೆ ಸ್ವಯಂ ಉದ್ಯಮಿಗಳಾಗಲು ಮುಂದಾಗಬೇಕು ಎಂದು ಡಾ. ಎಸ್. ಸಚ್ಚಿದಾನಂದ ಕರೆ ನೀಡಿದರು.

ಬಿ.ಎಲ್.ಡಿ.ಇ. ಡೀಮ್ಡ್ ವಿವಿ ಸಮಕುಲಪತಿ ಡಾ. ಅರುಣ ಚಂ. ಇನಾಂದಾರ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಈಗ ಇದರ ಜೊತೆ ಸಮುದಾಯ ಔಷಧ ತಜ್ಞರ ಬೇಡಿಕೆಯೂ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಔಷಧ ವಿಜ್ಞಾನಿಗಳು ಜಿಲಾ ್ಲಮಟ್ಟದಲ್ಲಿಯೂ ಸ್ಟಾರ್ಟ್‍ಅಪ್ ಆರಂಭಿಸಬೇಕು. ಅಲ್ಲದೆ, ಬೇಡಿಕೆಗೆ ತಕ್ಕಂತೆ ನಿರಂತರ ಕಲಿಕೆಗಾಗಿ ಉನ್ನತ ವೈದ್ಯಕೀಯ ಸಂಸ್ಥೆಗಳ ಜೊತೆ ಒಡಂಬಡಿಕೆ ಮಾಡಿಕೊಂಡು ಮುನ್ನಡೆಯಬೇಕು. ಈಗ ವಿದೇಶಿ ವಿವಿಗಳಿಗೂ ಭಾರತದಲ್ಲಿ ಶಿಕ್ಷಣ ಒದಗಿಸಲು ಕೇಂದ್ರ ಸರಕಾರ ಅನುಮತಿ ನೀಡಿದೆ. ಹೀಗಾಗಿ ಕಾಲಕ್ಕೆ ತಕ್ಕಂತೆ ಜ್ಞಾನಾರ್ಜನೆ ಮಾಡಿ ಪೈಪೆÇೀಟಿ ನೀಡಲು ಸಿದ್ಧರಾಗಬೇಕು ಎಂದು ಹೇಳಿದರು.
ಬಿ.ಎಲ್.ಡಿ.ಇ. ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ಬಿ. ಕೊಟ್ನಾಳ ಮಾತನಾಡಿ, ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲರ ಪೆÇ್ರೀತ್ಸಾಹದಿಂದಾಗಿ ಕಾಲೇಜಿಗೆ ಎ++ ಮಾನ್ಯತೆ ಸಿಕ್ಕಿದೆ. ಆಧುನಿಕ ಜಗತ್ತಿನಲ್ಲಿ ಬದಲಾಗುತ್ತಿರುವ ತಂತ್ರಜ್ಞಾನಗಳಿಗೆ ಅನುಗುಣವಾಗಿ ಕಾಲೇಜಿನಲ್ಲಿ ವಿದ್ಯಾಥಿಗಳಿಗೆ ಶಿಕ್ಷಣ ನೀಡಲಾಗುತ್ತಿದೆ. ಅಲ್ಲದೇ, ವಿದ್ಯಾರ್ಥಿಗಳ ಸಂಶೋಧನೆಗೂ ಸಂಪೂರ್ಣ ಸಹಕಾರ ನೀಡಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ 33 ಜನ ಬಿ-ಫಾರ್ಮಾ, 28 ಜನ ಎಂ-ಫಾರ್ಮಾ ಮತ್ತು 20 ಜನ ಫಾರ್ಮಾ-ಡಿ ವಿದ್ಯಾಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು.

ಡಾ. ಎಸ್. ಝಡ್. ಇನಾಂದಾರ ಸ್ವಾಗತಿಸಿದರು. ಡಾ. ಶ್ರೀಧರ ಬಿರಾದಾರ ಮತ್ತು ಡಾ. ಸುಧಾ ಪಾಟೀಲ ಪರಿಚಯಿಸಿದರು. ಡಾ. ಸುಶೀಲಕುಮಾರ ನೂತನ ಪದವೀಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಡಾ. ಸುನಂದಾ ನಂದಿಕೋಲ ನಿರೂಪಿಸಿದರು. ಡಾ. ಆರ್. ಜಿ. ಪಾಟೀಲ ವಂದಿಸಿದರು.

Leave a Reply

ಹೊಸ ಪೋಸ್ಟ್‌