ಸಿಂದಗಿ, ಆಲಮೇಲ ತಾಲೂಕಿನ ನಾನಾ ಮತಗಟ್ಟೆಗಳಿಗೆ ಡಿಸಿ ಡಾ. ದಾನಮ್ಮನವರ ಭೇಟಿ- ಮೂಲಭೂತ ಸೌಕರ್ಯಗಳ ಪರಿಶೀಲನೆ

ವಿಜಯಪುರ: ಮುಂಬರುವ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣೆ ಆಯೋಗದ ನಿರ್ದೇಶನದಂತೆ ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಸಿಂದಗಿ ಮತ್ತು ಆಲಮೇಲ ತಾಲೂಕಿನ ನಾನಾ ಮತಗಟ್ಟೆಗಳಿಗೆ ಭೇಟಿ ನೀಡಿ, ಮೂಲಭೂತ ಸೌಕರ್ಯ ಪರಿಶೀಲನೆ ನಡೆಸಿದರು.  ಆಲಮೇಲ ತಾಲೂಕಿನ ಮೋರಟಗಿಯ ಎಂಪಿಎಸ್ ಶಾಲೆಯ ಮತಗಟ್ಟೆ ಸಂಖ್ಯೆ 112 ರಿಂದ 115ರ, ಮೋರಟಗಿಯ ಮತಗಟ್ಟೆ ಸಂಖ್ಯೆ 116 ಹಾಗೂ 117 ಬರುವ ಸಿದ್ಧರಾಮೇಶ್ವರ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿದರು. ಅದೇ ತಾಲೂಕಿನ ಗಬಸಾವಳಗಿ ಗ್ರಾಮದ ಮತಗಟ್ಟೆ ಸಂಖ್ಯೆ […]

ಬಿಜೆಪಿ ಬಿಜಿನೆಸ್ ಜನತಾ ಪಾರ್ಟಿಯಾಗಿದೆ- ಜನರನ್ನು ಎರೋಪ್ಲೇನ್ ಹತ್ತಿಸುತ್ತಿದೆ- ಮಧು ಬಂಗಾರಪ್ಪ

ವಿಜಯಪುರ: ಬಿಜೆಪಿ ಬಿಜಿನೆಸ್ ಜನತಾ ಪಾರ್ಟಿಯಾಗಿದೆ.  ಜನರಿಗೆ ಏರೋಪ್ಲೇನ್ ಹತ್ತಿಸುತ್ತಿದೆ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಮತ್ತು ಮಾಜಿ ಶಾಸಕ ಮಧು ಬಂಗಾರಪ್ಪ ಟೀಕಿಸಿದ್ದಾರೆ.  ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ಅಭಿವೃದ್ಧಿಯನ್ನು ಸಂಪೂರ್ಣಾಗಿ ಕಡೆಗಣಿಸಿದೆ.  ರಸ್ತೆ, ಚರಂಡಿ ಸೇರಿದಂತೆ ಎಲ್ಲ ಕಾಮಗಾರಿಗಳಲ್ಲಿ ಕಮಿಷನ್ ಹೊಡೆಯುತ್ತಿದೆ.  ಬಿಜೆಪಿಯವರು ದೇಶ ಆಳಲು ಬಂದಿಲ್ಲ ಎಂದು ವಾಗ್ದಾಳಿ ನಡೆಸಿದರು. ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ವಿರುದ್ಧ ಟೀಕಾಪ್ರಹಾರ ನಡೆಸಿದ ಅವರು, ಕಟೀಲ ಜಿಹಾದ್ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ.  […]

ಬಸವನಾಡಿನಲ್ಲಿ ಚಳಿಗಾಳಿ ಮುಂದುವರಿಕೆ- ಬೆಚ್ಚಗಿರಲು ರಾಷ್ಟ್ರೀಯ ವಿಪತ್ತು ನಿರ್ಹವಣೆ ಪ್ರಾಧಿಕಾರ ಸೂಚನೆ- ವಿಜಯಪುರ ಜಿಲ್ಲಾಡಳಿತ

ವಿಜಯಪುರ: ಬಸವನಾಡು ವಿಜಯಪುರ, ಬಾಗಲಕೋಟೆ ಮತ್ತು ಬೀದರ್ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಛಳಿಗಾಳಿ ಮುಂದುವರೆಯಲಿದೆ.  ಸಾರ್ವಜನಿಕರು ಬೆಚ್ಚಗಿರಬೇಕು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜನೇವರಿ 9 ರಂದು ವಿಜಯಪುರದಲ್ಲಿ 6.5 ಡಿ. ಸೆ. ರಾಜ್ಯದಲ್ಲಿಯೇ ಅತೀ ಕಡಿಮೆ ಉಷ್ಣಾಂಶ ದಾಖಲಾಗಿತ್ತು.  ಈಗ ಬಾಗಲಕೋಟೆಯಲ್ಲಿ ವಿಜಯಪುರಕ್ಕಿಂತಲೂ ಕಡಿಮೆ ಅಂದರೆ 6 ಡಿ. ಸೆ. ತಾಪಮಾನ ದಾಖಲಾಗಿದೆ.  ಮುಂದಿನ 24 ಗಂಟೆಗಳಲ್ಲಿ ವಿಜಯಪುರ, ಬಾಗಲಕೋಟೆ ಮತ್ತು ಬೀದರ್ ಜಿಲ್ಲೆಗಳಲ್ಲಿ ಶೀತ ಮಾರುತಗಳು ಮುಂದುವರೆಯಲಿವೆ ಎಂದು ರಾಷ್ಟ್ರೀಯ ವಿಪತ್ತು […]