ಬಸವನಾಡಿನಲ್ಲಿ ಚಳಿಗಾಳಿ ಮುಂದುವರಿಕೆ- ಬೆಚ್ಚಗಿರಲು ರಾಷ್ಟ್ರೀಯ ವಿಪತ್ತು ನಿರ್ಹವಣೆ ಪ್ರಾಧಿಕಾರ ಸೂಚನೆ- ವಿಜಯಪುರ ಜಿಲ್ಲಾಡಳಿತ

ವಿಜಯಪುರ: ಬಸವನಾಡು ವಿಜಯಪುರ, ಬಾಗಲಕೋಟೆ ಮತ್ತು ಬೀದರ್ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಛಳಿಗಾಳಿ ಮುಂದುವರೆಯಲಿದೆ.  ಸಾರ್ವಜನಿಕರು ಬೆಚ್ಚಗಿರಬೇಕು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಜನೇವರಿ 9 ರಂದು ವಿಜಯಪುರದಲ್ಲಿ 6.5 ಡಿ. ಸೆ. ರಾಜ್ಯದಲ್ಲಿಯೇ ಅತೀ ಕಡಿಮೆ ಉಷ್ಣಾಂಶ ದಾಖಲಾಗಿತ್ತು.  ಈಗ ಬಾಗಲಕೋಟೆಯಲ್ಲಿ ವಿಜಯಪುರಕ್ಕಿಂತಲೂ ಕಡಿಮೆ ಅಂದರೆ 6 ಡಿ. ಸೆ. ತಾಪಮಾನ ದಾಖಲಾಗಿದೆ.  ಮುಂದಿನ 24 ಗಂಟೆಗಳಲ್ಲಿ ವಿಜಯಪುರ, ಬಾಗಲಕೋಟೆ ಮತ್ತು ಬೀದರ್ ಜಿಲ್ಲೆಗಳಲ್ಲಿ ಶೀತ ಮಾರುತಗಳು ಮುಂದುವರೆಯಲಿವೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣೆ ಪ್ರಾಧಿಕಾರ ಮುನ್ಸೂಚನೆ ನೀಡಿದೆ.

ಮುನ್ಸೂಚನೆ

ಮುಂದಿನ 48 ಘಂಟೆಗಳ ಕಾಲ ರಾಜ್ಯಾದ್ಯಂತ ಒಣಹವೆ ಮುಂದುವರೆಯಲಿದೆ.  ಮುಂದಿನ 24 ಗಂಟೆಗಳ ಅವಧಿಯಲ್ಲಿ ಕನಿಷ್ಠ ಉಷ್ಣಾಂಶವು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ  ಸಾಮಾನ್ಯಕ್ಕಿಂತ 6 ರಿಂದ 7  ಡಿಗ್ರಿ ಸೆಲ್ಷಿಯಸ್ ಕಡಿಮೆ ಹಾಗೂ ರಾಜ್ಯದಾದ್ಯಂತ ಒಂದೆರಡು  ಕಡೆಗಳಲ್ಲಿ ಸಾಮಾನ್ಯಕ್ಕಿಂತ 3 ರಿಂದ 4  ಡಿಗ್ರಿ ಸೆಲ್ಷಿಯಸ್ ನಷ್ಟು ಕಡಿಮೆಯಾಗಿರಲಿದೆ ರಾಷ್ಟ್ರೀಯ ವಿಪತ್ತು ನಿರ್ವಹಣೆ ಪ್ರಾಧಿಕಾರ(ಎನ್‌ಎಂಡಿಸಿ) ಮುನ್ಸೂಚನೆ ನೀಡಿದೆ ಎಂದು ವಿಜಯಪುರ ಜಿಲ್ಲಾಡಳಿತ ಮಾಹಿತಿ ನೀಡಿದೆ.

 

 

ಬೆಚ್ಚಗಿರಲು ಸೂಚನೆ

ಶೀತ ಮಾರುತಗಳು ಬೀಸುವುದರಿಂದ ಮಕ್ಕಳು ಮತ್ತು ಹಿರಿಯರು ವಿಶೇಷ ಕಾಳಜಿ ವಹಿಸಬೇಕಿದೆ.

ಚಳಿಯಿಂದ ರಕ್ಷಿಸಿಕೊಳ್ಳಲು ಚಳಿಗಾಲದ ಬಟ್ಟೆ ಧರಿಸಬೇಕು.  ಸಾಧ್ಯವಾದಷ್ಟು ಮನೆಯಲ್ಲಿಯೇ ಇರಬೇಕು.

ಕೈಗವಸು(ಹ್ಯಾಂಡ್ ಗ್ಲೌಸ್) ಉಪಯೋಗಿಸಬೇಕು.

ರೇಡಿಯೋ, ಟಿವಿ, ದಿನಪತ್ರಿಗಳಲ್ಲಿ ಬರುವ ಮಾಹಿತಿಯ ಕಡೆಗೆ ಗಮನ ಹರಿಸಬೇಕು.

ಪ್ರತಿಸಲ ಬಿಸಿನೀರು ಸೇವಿಸಬೇಕು.

ತುರ್ತುಾಗಿ ಅಗತ್ಯವಿರುವ ವಸ್ತುಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಿಸಬೇಕು ಎಂದು ಸೂಚನೆ ನೀಡಲಾಗಿದೆ.

Leave a Reply

ಹೊಸ ಪೋಸ್ಟ್‌