ಚಿಮ್ಮಲಗಿ ಶ್ರೀ ನೀಲಕಂಠ ಸ್ಚಾಮೀಜಿ ಲಿಂಗೈಕ್ಯ- ಶುಕ್ರವಾರ ಸಂಜೆ ಅಂತ್ಯಕ್ರಿಯೆ

ವಿಜಯಪುರ: ವಿಜಯಪುರ ಜಿಲ್ಲೆಯ ಚಿಮ್ಮಲಗಿ‌-2 ಗ್ರಾಮದ ಶ್ರೀ ನೀಲಕಂಠ ಸ್ವಾಮೀಜಿ‌ (92) ಲಿಂಗೈಕ್ಯರಾಗಿದ್ದಾರೆ. ನಿಡಗುಂದಿ ತಾಲೂಕಿನ‌ ಚಿಮ್ಮಲಗಿ- 2 ಗ್ರಾಮದ ಅರಳೆಲೆ ಕಟ್ಟಿಮನಿ ಹಿರೇಮಠದ ಪೀಠಾಧೀಪತಿಯಾಗಿದ್ದ ಶ್ರೀಗಳು ವಯೋಸಹಜ‌ ಖಾಯಿಲೆಗಳಿಂದ ಬಳಲುತ್ತಿದ್ದರು. ಕಳೆದ ಎರಡು ವರ್ಷಗಳಿಂದ ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ‌ ಇ ಆಸ್ಪತ್ರೆಯ ವೈದ್ಯರಾದ ಫಿಜಿಷಿಯನ್ ಡಾ. ವಿಜಯಕುಮಾರ ವಾರದ ಮತ್ತು ಯುರೊಲಾಜಿಸ್ಟ್ ಡಾ. ಸಂತೋಷ ಪಾಟೀಲ ಅವರು ಸ್ವಾಮೀಜಿಗಳಿಗೆ ಚಿಕಿತ್ಸೆ ನೀಡಿದ್ದರು. ಕಳೆದ ಸುಮಾರಯ ದಿನಗಳಿಂದ ಮಠದಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ಅವರು, ರಾತ್ರಿ […]

ಮಾತೃಹೃದಯಿ, ಬಡ, ಕೂಲಿ ಕಾರ್ಮಿಕರ ಮಕ್ಕಳಿಗೆ ವರದಾನವಾಗಿದ್ದಾರೆ ಬಸವನಾಡಿನ ಈ ಶಿಕ್ಷಕಿ- ಇವರ ಕಾಯಕ ಇತರರಿಗೆ ಸ್ಪೂರ್ತಿ

ಮಹೇಶ ವಿ. ಶಟಗಾರ ವಿಜಯಪುರ: ಆರ್ಥಿಕ ಸಮಸ್ಯೆ ಮತ್ತು ಮಾರ್ಗದರ್ಶನದ ಕೊರತೆಯಿಂದಾಗಿ ಮೆಟ್ರಿಕ್ ಕೂಡ ಮಾಡಲಾಗದೇ ಶಾಲೆಗಳಿಂದ ದೂರವಾಗುತ್ತಿದ್ದ ಮಕ್ಕಳಿಗೆ ವಿದ್ಯಾಭ್ಯಾಸದ ಮಹತ್ವದ ಕುರಿತು ಅರಿವು ಮೂಡಿಸುವ ಮೂಲಕ ಬಸವನಾಡಿನ ಶಿಕ್ಷಕಿಯೊಬ್ಬರು ಗಮನ ಸೆಳೆದಿದ್ದಾರೆ. ಈ ಶಾಲೆಯಲ್ಲಿ ಓದುವ ಮಕ್ಕಳಲ್ಲಿ ಬಹುತೇಕರು ಬಡ ಮತ್ತು ಕೂಲಿ ಕಾರ್ಮಿಕರ ಮಕ್ಕಳು.  ಅದರಲ್ಲಿಯೂ ಈ ಶಾಲೆಯಲ್ಲಿ ಎಂಟನೇ ತರಗತಿಯವರೆಗೆ ಓದುವ ಬಹುತೇಕ ಹೆಣ್ಣು ಮಕ್ಕಳು ನಂತರ 9 ಮತ್ತು 10ನೇ ತರಗತಿಗೆ ಸೇರದೆ ಡ್ರಾಪ್ ಔಡ್ ಆಗುತ್ತಿದ್ದರು.  ಶಾಲೆ ಬಿಟ್ಟು […]

ಲಿಂ. ಸ್ವಾಮಿ ಸಿದ್ದೇಶ್ವರ ಶ್ರೀಗಳು ಆಧ್ಯಾತ್ಮ ಜಗತ್ತಿನ ಅನರ್ಘ್ಯ ರತ್ನ- ಸಂಗಮೇಶ ಬಬಲೇಶ್ವರ

ವಿಜಯಪುರ: ಲಿಂ. ಸ್ವಾಮಿ ಸಿದ್ದೇಶ್ವರ ಶ್ರೀಗಳು ಆಧ್ಯಾತ್ಮ ಜಗತ್ತಿನ ಅನರ್ಗ್ಯ ರತ್ನರಾಗಿದ್ದಾರೆ ಎಂದು ಯುವ ಮುಖಂಡ ಮತ್ತು ಸಮಾಜ ಸೇವಕ ಸಂಗಮೇಶ ಬಬಲೇಶ್ವರ ಹೇಳಿದ್ದಾರೆ. ಕೋಲ್ಹಾರ ತಾಲೂಕಿನ ಮುಳವಾಡ ಗ್ರಾಮದಲ್ಲಿ ಗ್ರಾಮಸ್ಥರು ಆಯೋಜಿಸಿದ್ದ ಲಿಂ. ಸಿದ್ಧೇಶ್ವರ  ಮಹಾಸ್ವಾಮಿಗಳ ನುಡಿನಮನ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಅವರು ಮಾತನಾಡಿದರು. ಶ್ರೀಗಳು ಈ ಶತಮಾನದ ಸಂತ.  ಜ್ಞಾನಯೋಗಿಯಾಗಿ ಆಧ್ಯಾತ್ಮಿಕ ಜಗತ್ತಿಗೆ ನೀಡಿದ ಕೊಡುಗೆ ಅನನ್ಯವಾಗಿದೆ.  ಸ್ವಾಮೀಜಿ ಆಧ್ಯಾತ್ಮ ಜಗತ್ತಿನ ಅನರ್ಘ್ಯ ರತ್ನರಾಗಿದ್ದರು.  ಮೃದು ಮತ್ತು ಮಧುರವಾದ ಭಾಷೆಯಿಂದ ಅವರು ಅಬಾಲ ವೃದ್ಧರಾಗಿ ಎಲ್ಲರನ್ನೂ […]