ವಿಜಯಪುರ: ವಿಜಯಪುರ ಜಿಲ್ಲೆಯ ಚಿಮ್ಮಲಗಿ-2 ಗ್ರಾಮದ ಶ್ರೀ ನೀಲಕಂಠ ಸ್ವಾಮೀಜಿ (92) ಲಿಂಗೈಕ್ಯರಾಗಿದ್ದಾರೆ.
ನಿಡಗುಂದಿ ತಾಲೂಕಿನ ಚಿಮ್ಮಲಗಿ- 2 ಗ್ರಾಮದ ಅರಳೆಲೆ ಕಟ್ಟಿಮನಿ ಹಿರೇಮಠದ ಪೀಠಾಧೀಪತಿಯಾಗಿದ್ದ ಶ್ರೀಗಳು
ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದರು.
ಕಳೆದ ಎರಡು ವರ್ಷಗಳಿಂದ ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಆಸ್ಪತ್ರೆಯ ವೈದ್ಯರಾದ ಫಿಜಿಷಿಯನ್ ಡಾ. ವಿಜಯಕುಮಾರ ವಾರದ ಮತ್ತು ಯುರೊಲಾಜಿಸ್ಟ್ ಡಾ. ಸಂತೋಷ ಪಾಟೀಲ ಅವರು ಸ್ವಾಮೀಜಿಗಳಿಗೆ ಚಿಕಿತ್ಸೆ ನೀಡಿದ್ದರು.
ಕಳೆದ ಸುಮಾರಯ ದಿನಗಳಿಂದ ಮಠದಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ಅವರು, ರಾತ್ರಿ 10.02ಕ್ಕೆ ಲಿಂಗೈಕ್ಯರಾಗಿದ್ದಾರೆ. ಶುಕ್ರವಾರ ಸಂ. 4ಕ್ಕೆ ಮಠದ ಆವರಣದಲ್ಲಿ ಸಕಲ ಧಾರ್ಮಿಕ ವಿಧಿವಿಧಾನಗಳಂತೆ ಮಠದ ಆವರಣದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮಠದ ಮೂಲಗಳ ಮಾಹಿತಿ ನೀಡಿವೆ.
ಶ್ರೀಗಳ ಅಗಲಿಕೆಗೆ ಸಂತಾಪ
ಚಿಮ್ಮಲಗಿ ಶ್ರೀಗಳ ನಿಧನಕ್ಕೆ ಬಸವ ನಾಡಿನ ಎಲ್ಲ ಜನಪ್ರತಿನಿಧಿಗಳು, ಇತರ ಜಿಲ್ಲೆಗಳ ನಾನಾ ಮಠಾಧೀಶರು ಹಾಗೂ ಗಣ್ಯರ ಸಂತಾಪ ಸೂಚಿಸಿದ್ದಾರೆ.