ನಿಮ್ಮ ಗ್ರಾಮಕ್ಕೆ ನಮ್ಮ ಆರೋಗ್ಯ ಸೇವೆ- ಕೊಲ್ಹಾರದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜನೆ

ವಿಜಯಪುರ: ತಜ್ಞ ವೈದ್ಯರ ವೈದ್ಯಕೀಯ ತಂಡವನ್ನು ಗ್ರಾಮೀಣ ಪ್ರದೇಶಕ್ಕೆ ಕರೆದುಕೊಂಡು ಬಂದು ನಿಮ್ಮ ಗ್ರಾಮಕ್ಕೆ ನಮ್ಮ ಆರೋಗ್ಯ ಸೇವೆ ಕಾರ್ಯಕ್ರಮದಡಿ ಬಿ ಎಲ್ ಡಿ ಇ ಸಂಸ್ಥೆ ಗ್ರಾಮೀಣ ಭಾಗದ ಜನರ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ಮಹತ್ವದ ಕೆಲಸ ಮಾಡುತ್ತಿದೆ ಎಂದು ಮಾಜಿ ಸಚಿವ ಎಸ್. ಕೆ. ಬೆಳ್ಳುಬ್ಬಿ ಹೇಳಿದರು.

ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ವತಿಯಿಂದ ಕೊಲ್ಹಾರದಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ಬೃಹತ್  ಚಿಕಿತ್ಸಾ ಶಿಬಿರದಲ್ಲಿ ಅವರು ಮಾತನಾಡಿದರು.

ವೈದ್ಯರು ವೈದ್ಯೋ ನಾರಾಯಣೋ ಹರಿ ಎನ್ನುವಂತೆ ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ದೇವರಂತೆ ಕೆಲಸ ಮಾಡುತ್ತಾರೆ.  ಪ್ರತಿಯೊಬ್ಬರಿಗೂ ವೈದ್ಯರ ಸಲಹೆ ಅವಶ್ಯವಾಗಿದೆ.  ಈ ದಿಸೆಯಲ್ಲಿ ಬಿ ಎಲ್ ಡಿ ಇ ಸಂಸ್ಥೆ ಒಂದೇ ಸೂರಿನಲ್ಲಿ ಉಚಿತ ಆರೋಗ್ಯ ಸೇವೆ ನೀಡುತ್ತಿರುವುದು ಜನರಿಗೆ ಬಹುಪಯೋಗಿಯಾಗಿದೆ ಎಂದು ಹೇಳಿದರು.

ಆರೋಗ್ಯ ತಪಾಸಣೆ ಶಿಬಿರದಲ್ಲಿ ಚರ್ಮರೋಗ ತಜ್ಞ ಡಾ. ಸನ್ಮಿತ್ರ ಐಹೊಳ್ಳಿ ಮಗುವಿನ ಆರೋಗ್ಯ ತಪಾಸಣೆ ನಡೆಸಿದರು

ಈ ಶಿಬಿರದಲ್ಲಿ ಸುಮಾರು 390 ಕ್ಕೂ ಹೆಚ್ಚು ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.  ಎಂಟು ಜನರು ರಕ್ತದಾನ ಮಾಡಿದರು.  ಅಲ್ಲದೇ, ಚಿಕಿತ್ಸೆ ಪಡೆದ ಜನರಿಗೆ ಉಚಿತ ಔಷಧಿಗಳನ್ನೂ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಬಿ ಎಲ್ ಡಿ ಇ ಆಸ್ಪತ್ರೆಯ ವೈದ್ಯ ಡಾ. ಡಾ. ಕರಡಿ, ವಿಶ್ವಭಾರತಿ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಬಿ. ಎಸ್. ನಿಂಬಾಳ್ಕರ ಮಾತನಾಡಿದರು.

ವೈದ್ಯರಾದ ಡಾ. ಎಸ್. ಎಸ್. ಪಾಟೀಲ್, ಡಾ. ಕುಮಾರ ಬಾಗೇವಾಡಿ, ಡಾ. ರವೀಂದ್ರ ನಾಗನೂರ, ಡಾ. ಸನ್ಮಿತ್ರ ಐಹೊಳೆ, ಡಾ. ವಿನಿತಾ ಚಿನ್ನುವಾರ್, ಹಿರಿಯರಾದ ಚಿನ್ನಪ್ಪ ಗಿಡ್ಡಪ್ಪಗೋಳ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌