ಶಾಸಕ ನಡಹಳ್ಳಿ ಅಧ್ಯಕ್ಷತೆಯಲ್ಲಿ ಬಿಜೆಪಿ ಬೂತ್ ಮಟ್ಟದ ಪ್ರಮುಖರ ಸಭೆ- ಜ.19ರ ಮೋದಿ ಕೊಡೆಕಲ್ ಗೆ ಭೇಟಿ- ಮತದಾರರು ಭಾಗವಹಿಸಲು ಶಾಸಕರ ಕರೆ

ವಿಜಯಪುರ: ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರಕಾರವನ್ನು ಪೂರ್ಣ ಬಹುಮತದೊಂದಿಗೆ ಅಧಿಕಾರಿಕ್ಕೆ ತರಲು ಮತ್ತು ಮುದ್ದೇಬಿಹಾಳ ವಿಧಾನಸಭೆ ಕ್ಷೇತ್ರದಲ್ಲಿ ಎರಡನೇ ಬಾರಿ ಬಿಜೆಪಿ ಗೆಲ್ಲಿಸಲು ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಶ್ರಮಿಸಬೇಕು ಎಂದು ಶಾಸಕ ಮತ್ತು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ. ಎಸ್. ಪಾಟೀಲ ನಡಹಳ್ಳಿ ಕರೆ ನೀಡಿದ್ದಾರೆ. 

ಮುದ್ದೇಬಿಹಾಳ ಪಟ್ಟಣದ ಮಾರುತಿನಗರ ಬಡಾವಣೆಯ ಹೊರವಲಯದಲ್ಲಿರುವ ಫಾರ್ಮಹೌಸ್‍ನಲ್ಲಿ ಸೋಮವಾರ ಏರ್ಪಡಿಸಿದ್ದ ಮುದ್ದೇಬಿಹಾಳ ಮಂಡಲ ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರಗಳ ಬೂತ್‍ಮಟ್ಟದ ಪ್ರಮುಖರ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮತಕ್ಷೇತ್ರದ ಮತದಾರರ ಪಟ್ಟಿ ಅಂತಿಮಗೊಂಡಿದ್ದು ಎಷ್ಟು ಮತದಾರರು ಇದ್ದಾರೆ ಎನ್ನುವ ಸಂಖ್ಯೆ ಹೊರಬಿದ್ದಿದೆ. ನಮ್ಮ ತಂಡವು ಈಗಾಗಲೇ ಮತಕ್ಷೇತ್ರದ ಪ್ರತಿಯೊಬ್ಬ ಮತದಾರನ ಮಾಹಿತಿಯನ್ನು ಸಂಗ್ರಹಿಸಿ, ಇದಕ್ಕಾಗಿ ರಚಿಸಲ್ಪಟ್ಟಿರುವ ಆ್ಯಪ್‍ಗಳಲ್ಲಿ ಸಂಗ್ರಹಿಸಿ ಇಟ್ಟಿದೆ. ಅಂಡ್ರಾಯ್ಡ್ ಮೋಬೈಲ್ ಹೊಂದಿರುವವರು ಈ ಕುರಿತಾದ ಅಂಕಿ ಸಂಖ್ಯೆಯನ್ನು ತಮ್ಮ ಬೆರಳ ತುದಿಯಲ್ಲೇ ಪಡೆದುಕೊಳ್ಳಬಹುದು. 18 ರಿಂದ 29 ವರ್ಷ, 30 ಮತ್ತು ನಂತರದ ವರ್ಷದವರು ಹೀಗೆ ವಯಸ್ಸಿಗನುಗುಣವಾಗಿ ಪ್ರತ್ಯೇಕ ಸ್ಲ್ಯಾಬ್ ರಚಿಸಿದ್ದು ಆಯಾ ವಯೋಮಾನದವರು ಎಷ್ಟು ಸಂಖ್ಯೆಯಲ್ಲಿದ್ದಾರೆ ಅನ್ನೋದನ್ನು ನಾವು ಕುಳಿತಲ್ಲೇ ತಿಳಿದುಕೊಳ್ಳಬಹುದು ಎಂದು ಹೇಳಿದರು.

ಈಗ 18 ರಿಂದ 29 ವರ್ಷದೊಳಗಿನವರನ್ನು ಮುಖ್ಯವಾಗಿ ಸಂಪರ್ಕಿಸಬೇಕಿದೆ.  ಮತಕ್ಷೇತ್ರದಲ್ಲಿ ಈ ವಯೋಮಾನದ ಮತದಾರರ ಸಂಖ್ಯೆ 45866 ರಷ್ಟಿದೆ.  ಇವರಲ್ಲಿ 20929 ಮಹಿಳೆಯರು ಮತ್ತು 24937 ಪುರುಷರು ಇದ್ದಾರೆ.  ಇಂಥದ್ದೇ ಅಂಕಿ ಅಂಶ ಇತರೆ ವಯೋಮಾನದವರ ಗುಂಪಿನಲ್ಲೂ ಸಂಗ್ರಹಿಸಲಾಗಿದೆ.  ಬೂತ್ ಪ್ರಮುಖರಿಗೆ ಇದು ನಮ್ಮ ಕಾರ್ಯಚಟುವಟಿಕೆ ಸುಗಮವಾಗಿ, ಸರಳವಾಗಿ ನಡೆಸಲು ಅನುಕೂಲ ಕಲ್ಪಿಸುತ್ತದೆ ಎಂದು ಶಾಸಕರು ತಿಳಿಸಿದರು.

ಮುದ್ದೇಬಿಹಾಳದಲ್ಲಿ ಬಿಜೆಪಿ ಬೂತ್ ಮಟ್ಟದ ಮುಖಂಡರ ಸಭೆಯಲ್ಲಿ ಶಾಸಕ ಎ. ಎಸ್. ಪಾಟೀಲ ನಡಹಳ್ಳಿ ಮಾತನಾಡಿದರು

ಕಾರ್ಯಕರ್ತರು, ಬೂತ್ ಪ್ರಮುಖರಲ್ಲಿ ಹುಮ್ಮಸ್ಸು ತುಂಬಲು ಜ. 17ರಂದು ಯುವಕರ ಸಭೆ ಏರ್ಪಡಿಸಲಾಗಿದೆ.  ಸುಮಾರು ಒಂದೂವರೆ ಸಾವಿರ ಯುವಕರು ಭಾಗವಹಿಸುವ ನಿರೀಕ್ಷೆ ಇದೆ.  ಕೆಲವೇ ದಿನಗಳಲ್ಲಿ ಮಹಿಳಾ ಮುಖಂಡರು, ಕಾರ್ಯಕರ್ತರ ಸಭೆಯನ್ನೂ ಆಯೋಜಿಸಿ ಅವರಿಗೂ ನಮ್ಮ ಕಾರ್ಯಕ್ರಮಗಳ ವಿಸ್ತರಣೆಗೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ.  ಆದಷ್ಟು ಬೇಗ ಪಕ್ಷದ ಮುಖಂಡರ ಸಭೆಯನ್ನೂ ನಡೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

21 ರಿಂದ ಮನೆ ಮನೆ ಸಂಪರ್ಕ ಅಭಿಯಾನ

ಬಿಜೆಪಿಯ ಮಹಾತ್ವಾಕಾಂಕ್ಷಿ ಕಾರ್ಯಕ್ರಮವಾಗಿರುವ ಮನೆ ಮನೆ ಸಂಪರ್ಕ ಅಭಿಯಾನವನ್ನು ಜ.21ರಿಂದ ಪ್ರಾರಂಭಿಸಲಾಗುತ್ತಿದ್ದು ಇದು ಜ.29ರವರೆಗೂ ಮುಂದುವರೆಯಲಿದೆ. ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದಲ್ಲಿ 85000 ಮನೆಗಳಿವೆ. ನಮ್ಮ ಕಾರ್ಯಕರ್ತರು ಎಲ್ಲ ಮನೆಗಳಿಗೂ ಭೇಟಿ ನೀಡಿ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ಅಭಿವೃದ್ದಿ ಚಟುವಟಿಕೆಗಳ ಸಾಧನೆಯನ್ನು ತಲುಪಿಸಬೇಕು. ಪ್ರತಿ ಬೂತ್ ಹಂತದಲ್ಲಿ ಈ ಕಾರ್ಯ ನಿರ್ವಹಿಸಲು ಉತ್ಸಾಹಿ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ಮುಂದೆ ಬರಬೇಕು. ಇಂಥವರು ಮುಂದಿನ 3 ತಿಂಗಳ ಕಾಲ ಸಕ್ರಿಯವಾಗಿ ಕೆಲಸ ಮಾಡಬೇಕಾಗುತ್ತದೆ. ಆಸಕ್ತ ಕಾರ್ಯಕರ್ತರು ತಮ್ಮ ಹೆಸರುಗಳನ್ನು ಭರತ್ ಪಾಟೀಲ ನಡಹಳ್ಳಿ (ಮೋ: 6364860999) ಅಥವಾ ಪುರಸಭೆ ನಾಮ ನಿರ್ದೇಶಿತ ಸದಸ್ಯ ಪ್ರಸನ್ನಕುಮಾರ ಮಠ (ಮೋ:8884204072) ಇವರ ಬಳಿ ನೋಂದಾಯಿಸಿಕೊಳ್ಳಬೇಕು. ಹೆಸರು ನೋಂದಾಯಿಸಿಕೊಂಡವರಿಗೆ ಆಯಾ ಬೂತ್‍ಗಳ ಉಸ್ತುವಾರಿ ವಹಿಸಿಕೊಡಲಾಗುತ್ತದೆ ಎಂದು ಶಾಸಕ ಎ. ಎಸ್. ಪಾಟೀಲ ನಡಹಳ್ಳಿ ಸಭೆಯಲ್ಲಿ ಮಾಹಿತಿ ನೀಡಿದರು.

ಮೋದಿಜಿ ಕೊಡೇಕಲ್ ಭೇಟಿ ಯಶಸ್ಸಿಗೆ ಕರೆ

ಜ. 19 ರಂದು ಪ್ರಧಾನಿ ನರೇಂದ್ರ ಮೋದಿಜಿ ಅವರು ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದ ಗಡಿಭಾಗದಲ್ಲಿರುವ ಯಾದಗಿರಿ ಜಿಲ್ಲೆ ಹುಣಚಗಿ ತಾಲೂಕು ಸುಕ್ಷೇತ್ರ ಕೊಡೇಕಲ್‍ಗೆ ಪ್ರಚಾರಾರ್ಥವಾಗಿ ಆಗಮಿಸಲಿದ್ದಾರೆ. ಕೊಡೇಕಲ್ ಧಾರ್ಮಿಕ ಕೇಂದ್ರವಾಗಿದ್ದು ಅಲ್ಲಿ ಜಗಜ್ಯೋತಿ ಬಸವಣ್ಣನವರ ಪ್ರಸಿದ್ಧ ದೇವಸ್ಥಾನ ಇದೆ. ಮೋದಿಜಿ ಅವರ ಅಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಈ ಮತಕ್ಷೇತ್ರದಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು, ಕಾರ್ಯಕರ್ತರು ತೆರಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿ ಮನೆಯಿಂದ ಒಬ್ಬರು ಕಾರ್ಯಕ್ರಮಕ್ಕೆ ತೆರಳಿದರೂ ಅಡ್ಡಿ ಇಲ್ಲ. ಈಗಾಗಲೇ ಇದಕ್ಕಾಗಿ 2 ಮಾರ್ಗಗಳನ್ನು ರಚಿಸಲಾಗಿದ್ದು ಆದಷ್ಟು ಬೇಗ ಆ ಮಾಹಿತಿಯನ್ನು ಸಾರ್ವಜನಿಕರೊಂದಿಗೆ ಹಂಚಿಕೊಳ್ಳಲಾಗುತ್ತದೆ ಎಂದು ಶಾಸಕ ಎ. ಎಸ್. ಪಾಟೀಲ ನಡಹಳ್ಳಿ ಇದೇ ಸಂದರ್ಭದಲ್ಲಿ ತಿಳಿಸಿದರು.

ಸಂತೋಷ ಅವರು ಆರೋಗ್ಯ ರಕ್ಷಣೆ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಬಿಜೆಪಿ ಮುದ್ದೇಬಿಹಾಳ ಮಂಡಲ ಅಧ್ಯಕ್ಷ ಡಾ. ಪರಶುರಾಮ ಪವಾರ, ಮುಖಂಡರಾದ ಎಂ. ಎಸ್. ಪಾಟೀಲ ನಾಲತವಾಡ, ಮಲಕೇಂದ್ರಗೌಡ ಪಾಟೀಲ, ಶಿವಶಂಕರಗೌಡ ಹಿರೇಗೌಡರ ಆಲೂರ, ಪ್ರಭು ಕಡಿ ಮತ್ತಿತರರು ಪಕ್ಷ ಸಂಘಟನೆ, ಪಕ್ಷದ ಸಾಧನೆ ಮತ್ತು ಶಾಸಕ ನಡಹಳ್ಳಿಯವರು ಮತಕ್ಷೇತ್ರದಲ್ಲಿ ಮಾಡಿರುವ ಅಪಾರ ಪ್ರಮಾಣದ ಅಭಿವೃಧ್ದಿ ಕೆಲಸಗಳು ಸೇರಿ ಹಲವು ವಿಷಯಗಳ ಕುರಿತು ಮಾತನಾಡಿದರು.  ಪಕ್ಷದ ಹಿರಿಯರಾದ ಬಾಬುಲಾಲ ಓಸ್ವಾಲ್, ಬಿ. ಪಿ. ಕುಲಕರ್ಣಿ, ಭರತಗೌಡ ಪಾಟೀಲ ನಡಹಳ್ಳಿ, ಮುತ್ತಣ್ಣ ಹುಂಡೇಕಾರ, ಮುತ್ತಣ್ಣ ಹುಗ್ಗಿ ವಕೀಲರು, ಲಕ್ಷ್ಮಣ ಬಿಜ್ಜೂರ, ಸಿದ್ದರಾಜ ಹೊಳಿ, ರಾಜೇಂದ್ರಗೌಡ ರಾಯಗೊಂಡ, ಕೆ. ವೈ. ಬಿರಾದಾರ, ಮುತ್ತು ಅಂಗಡಿ ನಾಲತವಾಡ ಮುಂತಾದವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಈ ಸಭೆಯಲ್ಲಿ ಪುರಸಭೆ, ಗ್ರಾ. ಪಂ. ಗಳ ಚುನಾಯಿತ ಪ್ರತಿನಿಧಿಗಳು, ಪಕ್ಷದ ನಾನಾ ಹಂತಗಳ ಪದಾಧಿಕಾರಿಗಳು, ಮತಕ್ಷೇತ್ರದ ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರದ ಪ್ರಮುಖರು, ಕಾರ್ಯಕರ್ತರು ಸೇರಿ ಸಾವಿರಾರು ಜನ ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಸಂಪ್ರದಾಯದಂತೆ ಭಾರತ ಮಾತೆ ಮತ್ತು ಪಂಡಿತ್ ದೀನದಯಾಳ್ ಅವರ ಭಾವಚಿತ್ರಗಳಿಗೆ ಪುಷ್ಪಾರ್ಪನೆ ಮಾಡುವ ಮೂಲಕ ಚಾಲನೆ ನೀಡಲಾಯಿತು.

Leave a Reply

ಹೊಸ ಪೋಸ್ಟ್‌