ಪ್ರಧಾನಿ ಮೋದಿ, ರಾಜ್ಯ ಸರಕಾರಕ್ಕೆ ಟ್ವೀಟ್ ಮೂಲಕ ಟಾಂಗ್ ನೀಡಿದ ಎಂ. ಬಿ. ಪಾಟೀಲ- ಯಾಕೆ ಗೊತ್ತಾ?

ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಜ. 19 ರಂದು ಉದ್ಗಾಟಿಸಲಿರುವ ನಾರಾಯಣಪುರ ಎಡದಂಡೆ ಕಾಲುವೆ ವಿಸ್ತರಣೆ ನವೀಕರಣ ಹಾಗೂ ಆಧುನಿಕ ಕಾಮಗಾರಿಯ ಕುರಿತು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಮತ್ತು ಜಲಸಂಪನ್ಮೂಲ ಖಾತೆ ಮಾಜಿ ಸಚಿವ ಎಂ. ಬಿ. ಪಾಟೀಲ ಟ್ವೀಟ್ ಮೂಲಕ ಟಾಂಗ್ ನೀಡಿದ್ದಾರೆ.

ಸಿದ್ಧರಾಮಯ್ಯ ನೇತೃತ್ವದ ಸರಕಾರದಲ್ಲಿ ನಾನು ಜಲಸಂಪನ್ಮೂಲ ಸಚಿವನಾಗಿದ್ದ ನನ್ನ ಕನಸಿನ ಈ ಯೋಜನೆಯನ್ನು 2014ರಲ್ಲಿ ಆರಂಭಿಸಿ 2017ರಲ್ಲಿ ಪೂರ್ಣಗೊಳಿಸಿದ್ದೆ.  ಇದರ ಎರಡನೇ ಹಂತದ ಕಾಮಗಾರಿಯನ್ನು ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ಪ್ರಾರಂಭಿಸಲಾಗಿತ್ತು.  ಬಿಜೆಪಿ ಸರಕಾರ ಯಾವುದೇ ನಿರ್ಣಾಯಕ ಅಭಿವೃದ್ದಿ ಮಾಡದಿದ್ದರೂ, ಹಿಂದಿನ ಸರಕಾರದ ಕೆಲಸಗಳಿಗೆ ಮೈಲೇಜ್ ಪಡೆಯಲು ಹಿಂಜರಿಯುವುದಿಲ್ಲ ಎಂದು ಟ್ವೀಟ್ ಮೂಲಕ ಎಂ. ಬಿ. ಪಾಟೀಲ ಪ್ರಧಾನಿ ಮತ್ತು ರಾಜ್ಯ ಬಿಜೆಪಿ ಸರಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಎಂ ಬಿ ಪಾಟೀಲ್ ಮಾಡಿರುವ ಟ್ವೀಟ್

 

https://twitter.com/MBPatil/status/1615233945553244161

 

https://twitter.com/MBPatil/status/1615233949638471683

 

https://twitter.com/MBPatil/status/1615235610763202560

 

https://twitter.com/MBPatil/status/1615235615301464065

 

ಈ ಕುರಿತು ತಾವು 15.03.2018ರಲ್ಲಿ ತಾವು ಟ್ವೀಟ್ ಮಾಡಿರುವ ಸ್ಕ್ರಿನ ಶಾಟ್ ನ್ನು ಅವರು ದಾಖಲೆ ಸಮೇತ ಕನ್ನಡ ಮತ್ತು ಇಂಗ್ಲಿಷ್ ಟ್ವೀಟ್ ನಲ್ಲಿ ಹಾಕಿದ್ದು, ಇದನ್ನು ಪ್ರಧಾನಿ ಕಚೇರಿ ಮತ್ತು ಕರ್ನಾಟಕ ಬಿಜೆಪಿಗೆ ಟ್ಯಾಗ್ ಮಾಡಿದ್ದಾರೆ.

 

ಎಂ. ಬಿ. ಪಾಟೀಲ ಮಾಡಿರುವ ಟ್ವೀಟ್

ಶ್ರೀ @siddaramaiahನವರ ನೇತೃತ್ವದ @INCkarnataka  ಸರ್ಕಾರದಲ್ಲಿ ನಾನು ಜಲ ಸಂಪನ್ಮೂಲ ಸಚಿವನಾಗಿದ್ದಾಗ 2014 ರಲ್ಲಿ ಪ್ರಾರಂಭಿಸಿ 2017 ರಲ್ಲಿ  ಕಾರ್ಯರೂಪಗೊಳಿಸಿದ ನನ್ನ ಕನಸಿನ SCADA in # NLBCModernization (Phase 1) ಯೋಜನೆಯನ್ನು  @PMOindia ಅವರು ಉದ್ಘಾಟಿಸುತ್ತಿರುವುದು ನನಗೆ ಹೆಮ್ಮೆ ತಂದಿದೆ.  SCADA-Phase2 ಕೂಡ ನಮ್ಮ ಸಮ್ಮಿಶ್ರ ಸರ್ಕಾರದಲ್ಲಿ ಪ್ರಾರಂಭಿಸಿದ್ದು! @BJP4karnataka ಸರ್ಕಾರ ಯಾವುದೇ ನಿರ್ಣಾಯಕ ಅಭಿವೃದ್ದಿ ಮಾಡದಿದ್ದರೂ ಹಿಂದಿನ ಸರ್ಕಾರಗಳ ಕೆಲಸಗಳಿಗೆ ಮೈಲೇಜ್ ಪಡೆಯಲು ಹಿಂಜರಿಯುವುದಿಲ್ಲಾ! ಮಾನ್ಯ @PMOindia ಅವರು ಉದ್ಘಾಟಿಸುತ್ತಿರುವುದು ನನಗೆ ಹೆಮ್ಮ ತಂದಿದೆ.

ಒಟ್ಟಾರೆ, ಪ್ರಧಾನಿ ಗುರುವಾರ ಯಾದಗಿರಿ ಜಿಲ್ಲೆಗೆ ಆಗಮಿಸುತ್ತಿರುವ ಸಂದರ್ಭದಲ್ಲಿಯೇ ಎಂ. ಬಿ. ಪಾಟೀಲ ದಾಖಲೆ ಸಮೇತ ಟ್ವೀಟ್ ಮಾಡಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಬಿಜೆಪಿಗೆ ಮುಜುಗರ ತಂದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

 

Leave a Reply

ಹೊಸ ಪೋಸ್ಟ್‌