ಮೊಸರ ನಾಡು ಕೋಲ್ಹಾರ ತಾಲೂಕು ಕಚೇರಿಗೆ ಡಿಸಿ ಡಾ. ದಾನಮ್ಮನವರ ಭೇಟಿ- ನಾನಾ ಕೆಲಸ ಕಾರ್ಯಗಳ ಪರಿಶೀಲನೆ

ವಿಜಯಪುರ: ಜಿಲ್ಲಾಧಿಕಾರಿಗಳ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಪ್ರತಿ ಮಂಗಳವಾರ ತಾಲೂಕು ಕಚೇರಿಕೆ ಭೇಟಿ ನೀಡುವ ಕಾರ್ಯಕ್ರಮದ ಅಂಗವಾಗಿ ಮೊಸರ ನಾಡು ಕೊಲ್ಹಾರಕ್ಕೆ ಭೇಟಿ ನೀಡಿ ನಾನಾ ಕೆಲಸ ಕಾರ್ಯಗಳ ಪರಿಶೀಲನೆ ನಡೆಸಿದರು. 

ಮತಗಟ್ಟೆ ನಂ. 169, 171, 173, 175, 174, 176, 177 ಮತಗಟ್ಟೆಗಳನ್ನು ಪರಿಶೀಲನೆ ನಡೆಸಿ, ನೀರು, ವಿದ್ಯುತ್, ಶೌಚಾಲಯ, ಇಳಿಜಾರು(Ramp), ದುರಸ್ತಿಗಳಿದ್ದರೆ ಕ್ರಮ ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.

ನಂತರ ಕೊಲ್ಹಾರ ನಗರದ ನಗರೋತ್ಥಾನ ಯೋಜನೆಯಡಿ ರಸ್ತೆ ಕಾಮಗಾರಿ ವೀಕ್ಷಣೆ ಮಾಡಿದರು. ತಹಶೀಲ್ದಾರ ಕಚೇರಿಗೆ ಭೇಟಿ ನೀಡಿ ಸಾರ್ವಜನಿಕ ಅಹವಾಲು ಸ್ವೀಕರಿಸಿ ಮಾತನಾಡಿ ಸಾರ್ವಜನಿಕರ ಬರುವ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಬೇಕು. ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಭೇಟಿ ನೀಡಿ, ಮಕ್ಕಳ ಹಾಜರಾಗಿ, ಶಿಕ್ಷಕರ ಹಾಜರಾತಿ ಕುರಿತು ಪರಿಶೀಲನೆ ನಡೆಸಿ, ಮಕ್ಕಳ ಜೊತೆಯಲ್ಲಿ ಭೋಜನ ಸವಿದರು.

ಕೊಲ್ಹಾರ ತಾಲೂಕಿನ ನಾನಾ ಅಭಿವೃದ್ಧಿ ಕಾಮಗಾರಿಗಳನ್ನು ಡಿಸಿ ಡಾ. ದಾನಮ್ಮನವರ ಪರಿಶೀಲನೆ ನಡೆಸಿದರು

ನಂತರ ಕೊಲ್ಹಾರ ತಾಲೂಕಿನ ತೆಲಗಿ ಗ್ರಾಮಕ್ಕೆ ತೆರಳಿ, ಶ್ರೀ ಸದ್ಗುರು ಸದಾನಂದ ಸ್ವಾಮೀಜಿ ಸಂಯುಕ್ತ ಪದವಿಪೂರ್ವ ಕಾಲೇಜ್‍ಗೆ ಭೇಟಿ ನೀಡಿ ಮತಗಟ್ಟೆ ನಂ.150, 151 ಹಾಗೂ 152 ಪರಿಶೀಲನೆ ನಡೆಸಿದರು. ಬಸವನಬಾಗೇವಾಡಿ ಪಟ್ಟಣಕ್ಕೆ ಭೇಟಿ ನೀಡಿ, ಸೂಪರ್ ಮೆಘಾ ಮಾರುಕಟ್ಟೆ ಕಟ್ಟಡ ಕಾಮಗಾರಿ ವೀಕ್ಷಿಸಿದರು. 12 ಎಕರೆಯಲ್ಲಿ 500 ಮನೆಗಳನ್ನು ನಿರ್ಮಿಸಿದ  ಪ್ರಧಾನಮಂತ್ರಿ ಆಶ್ರಯ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಟ್ಟಣದ ಬಸವ ಭವನ, ಕೂಡಲಸಂಗಮ ಪ್ರಾಧಿಕಾರ ಯಾತ್ರಿ ನಿವಾಸ ವೀಕ್ಷಣೆ ಮಾಡಿದರು.

ಈ ಸಂದರ್ಭದಲ್ಲಿ ಎಇಇ ಕಿರಸೂರ, ಕೊಲ್ಹಾರ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಶಿವಾನಂದ ಪೂಜಾರಿ, ತಾಲೂಕಾ ಸಮಾಜ ಕಲ್ಯಾಣ ಅಧಿಕಾರಿ ಭವಾನಿ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌